ಅ. 5ರಿಂದ ಬೆಳಗಾವಿ ದೆಹಲಿ ನಡುವಿನ ವಿಮಾನ ಯಾಣಕ್ಕೆ : ಟಿಕೆಟ್ ಬುಕ್ಕಿಂಗ ಆರಂಭ
ಬೆಳಗಾವಿ : ಬರುವ ಅಕ್ಟೋಬರ್ 5ರಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಆರಂಭವಾಗಲಿರುವ ಬೆಳಗಾವಿ ದೆಹಲಿ ನಡುವಿನ ವಿಮಾನಯಾಣಕ್ಕೆ ಇಂದಿನಿಂದಲೇ ಬುಕ್ಕಿಂಗ್ ಪ್ರಾರಂಭವಾಗಿದೆ.
ಕೆಲವು ದಿನಗಳಿಂದ ಬೇಡಿಕೆಯಾಗಿದ್ದ ದೇಶದ ರಾಜಧಾನಿಯಾದ ದೆಹಲಿಗೆ ಬೆಳಗಾವಿಯಿಂದ ನೇರ ವಿಮಾನಯಾಣ ಪ್ರಾರಂಭಿಸುವಂತೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು.
ಆ ಬೇಡಿಕೆಯಂತೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ದೆಹಲಿಗೆ ನೇರ ವಿಮಾನ ಸೇವೆಯನ್ನು ಇಂಡಿಗೋ ಸಂಸ್ಥೆಯು ಬರುವ ಅಕ್ಟೋಬರ್ 5 ರಿಂದ ಪ್ರಾರಂಭ ಮಾಡುತ್ತಿದ್ದು, ಈ ವಿಮಾನಯಾಣಕ್ಕೆ ಇಂದಿನಿಂದ (ಶುಕ್ರವಾರ) ದಿಂದ ಬುಕಿಂಗ್ ಪ್ರಾರಂಭ ಮಾಡಿದೆ. ಬೆಳಗಾವಿ ದೆಹಲಿ ನಡುವೆ ಸಂಚರಿಸಲು 4719 ರೂ. ದರ ನಿಗದಿ ಮಾಡಿದೆ.