ಸಿರುಗುಪ್ಪ

ಬಳ್ಳಾರಿ-ವಿಜಯನಗರ ಶೇ 99.81ರಷ್ಟು ಮತದಾನ

ಬಳ್ಳಾರಿ-ವಿಜಯನಗರ ಶೇ 99.81ರಷ್ಟು ಮತದಾನ

ಲೋಕದರ್ಶನ ವರದಿ 

ಸಿರುಗುಪ್ಪ 11: ಬಳ್ಳಾರಿ-ವಿಜಯನಗರ ಜಿಲ್ಲೆ ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಶೇಕಡಾ 99.81ರಷ್ಟು ಮತದಾನವಾಗಿದೆ ಈ ಕ್ಷೇತ್ರದಲ್ಲಿ 4663 ಮತದಾರರಿದ್ದು 4654 ಮಂದಿ ಮತದಾರರು 247 ಮತಗಟ್ಟೆಗಳಲ್ಲಿ ಮತ ಹಾಕಿದ್ದು 9ಮಂದಿ ಗೈರು ಹಾಜರಾದರು. ಪುರುಷರಿಗಿಂತ ಮಹಿಳಾ ಸದಸ್ಯರು ಚುರುಕಿನಿಂದ ಮತದಾನದಲ್ಲಿ ಭಾಗವಹಿಸಿದ್ದರು ಸಂಪೂರ್ಣ ಶಾಂತಿಯುತವಾಗಿ ಮತದಾನ ನಡೆಯಿತು ಬೆಳಿಗ್ಗೆ 8ಗಂಟೆಗೆ ಆರಂಭವಾದ ಮತದಾನ ಸಂಜೆ 4ರವರೆಗೂ ನಡೆಯಿತು. ಸಿರುಗುಪ್ಪ ತಾಲ್ಲೂಕಿನಲ್ಲಿ ಶೇ. ನೂರರಷ್ಟು ಮತದಾನವಾಗಿದೆ ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಪ್ರಕಟಿಸಿದರು ಎಂದು ಸಮಾಜ ಕಾರ್ಯಕರ್ತ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ತಿಳಿಸಿದರು.  


ಚುನಾವಣಾ ವೀಕ್ಷಕರಾದ ವಿ.ರಾಮ ಪ್ರಸಾತ್ ಮನೋಹರ್ ಐಎಎಸ್ ಅಧಿಕಾರಿ ಬಳ್ಳಾರಿ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ. ಆಕಾಶ್ ಶಂಕರ್ ಐಎಎಸ್ ಅವರು ಚುನಾವಣಾ ಕೇಂದ್ರ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಅಧಿಕಾರಿ ಗಳಿಂದ ಮತದಾನದ ಬಗ್ಗೆ ಮಾಹಿತಿ ಪಡೆದರು. ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.  


ತಾಲ್ಲೂಕುವಾರು ಮತದಾರರು ಮತ್ತು ಮತದಾನ ಮಾಡಿದ ವಿವರ ಕೆಳಗಿನಂತಿದೆ: ಬಳ್ಳಾರಿ 584-582, ಸಿರುಗುಪ್ಪ 545-545, ಸಂಡೂರು 533-533, ಕಂಪ್ಲಿ 236-234, ಕುರುಗೋಡು 229-228,ಹರಪನಹಳ್ಳಿ 585-584, ಕೊಟ್ಟೂರು 288-288, ಹೂವಿನಹಡಗಲಿ 453-453, ಹಗರಿಬೊಮ್ಮನಹಳ್ಳಿ 338-335, ಹೊಸಪೇಟೆ 323-321.14ರಂದು ಮತ ಎಣಿಕೆ ನಡೆಯುವುದು ಅಬ್ದುಲ್ ನಬಿ ತಿಳಿಸಿದರು. 


ಸುದ್ದಿ ಓದಿ