ಹಗರಿಬೊಮ್ಮನಹಳ್ಳಿ

ದಾಳಿಂಬೆ ಗಿಡದ ಕುಡಿ ತಿಂದು 87 ಕುರಿಗಳ ಸಾವು

ದಾಳಿಂಬೆ ಗಿಡದ ಕುಡಿ ತಿಂದು 87 ಕುರಿಗಳ ಸಾವು

ಹಗರಿಬೊಮ್ಮನಹಳ್ಳಿ 15:  ತಾಲೂಕಿನ ಹಂಪಸಾಗರದ ಹೊರವಲಯಲ್ಲಿ ಬನ್ನಿಕಲ್ಲು ಗ್ರಾಮದ ಕುರಿಗಳು ದಾಳಿಂಬೆ ಗಿಡದ ಕುಡಿ ತಿಂದು 87 ಕುರಿಗಳು ಮರಣ ಹೊಂದಿರುವ ದಾರುಣ ಘಟನೆ ನೆಡದಿದೆ. 

ಬನ್ನಿಕಲ್ಲು ಗ್ರಾಮದ ಕುರಿಗಳ ಮಾಲೀಕರು ಹಂಪಸಾಗರಕ್ಕೆ ಕುರಿಗಳನ್ನು ಮೇಯಿಸಲು ಹೋಗಿರುವಾಗ ಅಲ್ಲಿನ ದಾಳಿಂಬೆ ಹೊಲದಲ್ಲಿ ಕುರಿಗಳನ್ನು ಮೇಯಿಸಲು ಮುಂದಾಗಿದ್ದಾರೆ, ರೋಗಪೀಡಿತ ಬೆಳೆಗೆ ಔಷಧಿ ಸಿಂಪರಣೆ ಮಾಡಿದ್ದು ಮಳೆಯ ಕಾರಣ ಹೊಲದ ಮಾಲೀಕರು ಅತ್ತ ತಲೆ ಹಾಕಿರಲಿಲ್ಲ, ಕುರಿ ಮೇಯಿಸಲು ಈ ಃಒದಲ್ಲಿ ಕುರಿಗಳನ್ನು ಮೇಯಿಸಲು ಬಿಟ್ಟಿದ್ದು ಸಂಜೆ ಕೆಲ ಕುರಿಗಳು ಅಸ್ವಸ್ಥರಾಗಿದ್ದು ಸಾವನ್ನಿಪ್ಪಿದರೂ ಮುಂಜಾಗ್ರತಾ ಕ್ರಮಗೊಳ್ಲದ ಕುರಿ ಮಾಲೀಕರ ಬೇಜವಾಬ್ದಾರಿತನದಿಂದ ದಾಳಿಂಬೆ ಕುಡಿ ತಿಂದು ಬರೋಬ್ಬರಿ 87 ಕುರಿಗಳು ಪ್ರಾಣ ಕಳೆದುಕೊಂಡ ಘಟನೆ ಗುರುವಾರ ನಡೆದಿದೆ. 

ಸಾವನ್ನಪ್ಪಿರುವ 87 ಕುರಿಗಳ ಪೈಕಿ ಕರಿಬಸಪ್ಪ 39,ರೇಣುಕಮ್ಮ 10,ಕೃಷ್ಣಮೂರ್ತಿ4,ಕರಿಯಪ್ಪ 5,ಹನುಮಂತ 3,ಸಜ್ಜಿ ಕರಿಬಸಪ್ಪ 5,ಮಂಜಪ್ಪ 6,ದೊಡ್ಡಬಸಪ್ಪ 5,ಚನ್ನವೀರನಗೌಡ 3,ಮಂಜುನಾಥ 5,ಹಡಗಲಿ ಕರಿಬಸಪ್ಪ 2 ಕುರಿಗಳು ಎಂದು ತಿಳಿದುಬಂದಿದೆ.  

ಕುರಿಗಳ ಮೃತ ಸ್ಥಳಕ್ಕೆ ತಹಶಿಲ್ದಾರ್ ಶರಣಮ್ಮ , ಪರುವೈದ್ಯಾಧಿಕರಿ ಸೂರಪ್ಪ ಸೇರಿದಂತೆ ಅಧಿಕಾರಿಗಳು ಭೇಟಿ ನಿಡಿ ಪರೀಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಗಿ ತಿಳಿಸಿದರು. 

ಈ ಸಂಧರ್ಭದಲ್ಲಿ ಸಿಪಿಐ ಮಂಜಣ್ಣ, ತಂಬ್ರಹಳ್ಳಿ ಪಿಎಸೈ ನಾರಾಯಣ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. 


ಸುದ್ದಿ ಓದಿ