ರೈಲಿನಲ್ಲಿ ಪ್ರಯಾಣಿಸುತ್ತಿದ್ದ 8 ಜನರು ಪ್ರಜ್ಞಾಹೀನ ಸ್ಥಿತಿಗೆ : ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು, ಸಾವು ಬದುಕಿನ ನಡುವೆ ಹೋರಾಟ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ 8 ಜನರು ಪ್ರಜ್ಞಾಹೀನ ಸ್ಥಿತಿಗೆ : ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು, ಸಾವು ಬದುಕಿನ ನಡುವೆ ಹೋರಾಟ

ಬೆಳಗಾವಿ : ಗೋವಾ ನಿಜಾಮುದ್ದಿನ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 8 ಜನ ಪ್ರಯಾಣಿಕರು ಪ್ರಜ್ಞಾಹೀನ ಸ್ಥೀತಿಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. 


    ವಾಸ್ಕೋ ದಿಂದ ದೆಹಲಿ ನಿಜಾಮುದ್ದಿನ ರೈಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವ 8 ಜನರು ಎಲ್ಲರು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಇವರೆಲ್ಲರು ಗೋವಾದಿಂದ ನಿಜಾಮುದ್ದಿನ ರೈಲಿನಲ್ಲಿ ದೆಹಲಿ ಕಡೆಗೆ ಹೊರಟ್ಟಿದ್ದರು ಎನ್ನಲಾಗಿದೆ. 

    ಆದರೆ ರೈಲಿನಲ್ಲಿ ಹೋರಟಿರುವಾಗ ಈ 8 ಜನರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬೆಳಗಾವಿ ಸಮೀಪ ಕಂಡು ಬಂದಿದ್ದಾರೆ ಎನ್ನಲಾಗಿದೆ. ಅವರನ್ನು ಬೆಳಗಾವಿ ರೈಲಿನಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

    ಇವರೆಲ್ಲರು ಕೂಲಿ ಕಾರ್ಮಿಕರಾಗಿದ್ದು, ಗೋವಾದಲ್ಲಿ ಕೂಲಿ ಮಾಡಿ, ಬಳಿಕ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಕ್ಕೆ ವಾಪಸು ಆಗುತ್ತಿದ್ದರು. ಆದರೆ ಗೋವಾದ ವಾಸ್ಕೋ ದಿಂದ ರೈಲಿನಲ್ಲಿ ಹೊರಟ ಇವರು ರೈಲಿನಲ್ಲಿ ಅಪತಿಚಿತರು ವಿಷಹಾರ ವಸ್ತುಗಳನ್ನು ಇವರಿಗೆ ತಿನ್ನಲು ನೀಡಿದ್ದರು ಎಂದು ತಿಳಿದು ಬಂದಿದೆ.

    

ಸುದ್ದಿ ಓದಿ