ಸಿರುಗುಪ್ಪ

7ನೇ ರಾಷ್ಟ್ರೀಯ ಆಯುರ್ವೇದ ದಿನ

7ನೇ ರಾಷ್ಟ್ರೀಯ ಆಯುರ್ವೇದ ದಿನ
ಸಿರುಗುಪ್ಪ -  ಬದಲಾದ ಜೀವನ ಶೈಲಿಯಲ್ಲಿ ಆಯುರ್ವೇದ ಚಿಕಿತ್ಸೆ ಮಹತ್ವ ಪಡೆದಿದೆ ನಾನು ಮಾತ್ರ ಮಾಡಬಲ್ಲೆ ಎಂಬ ಬದಲು ನಾನು ಮಾಡುವುದನ್ನು ಯಾರು ಬೇಕಾದರೂ ಮಾಡಬಹುದು ಎಂಬ ವಿನಯ ವಿರಲಿ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯರು ಸಾಮಾಜಿಕ ಸುಧಾರಕರಾದ  ಎ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.
ನಗರದ ಇಬ್ರಾಹಿಂ ಮಂಜಿಲ್ ನಲ್ಲಿ   7 ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು  ನೆನಪಿಸಿ ಅವರು ಮಾತನಾಡುತ್ತಾ ಪ್ರತಿದಿನ ಆಯುರ್ವೇದ ಪ್ರತಿ ಮನೆಯಲ್ಲಿ ಆಯುರ್ವೇದ ಎಂಬ ಘೋಷ ವಾಕ್ಯದೊಂದಿಗೆ   ಆಯುರ್ವೇದ ಪುರಾತನ ಚಿಕಿತ್ಸಾ ಪದ್ಧತಿಯಾಗಿದೆ. ಹಲವು ದೀರ್ಘ ಕಾಯಿಲೆ ಗಳಿಗೆ ಉತ್ತಮ ಚಿಕಿತ್ಸೆ ಹೊಂದಿದೆ  ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಅನೇಕ ಗಿಡ ಮೂಲಿಕೆ   ಹಸಿರು ಸಾಂಬಾರು ಪದಾರ್ಥ ಸಸ್ಯಗಳಿಂದ ಅನೇಕ ಕಾಯಿಲೆಗಳಿಗೆ ಮನೆ ಮದ್ದು ಆಗಿ ಉಪಯೋಗಿಸಬಹುದು  ಮತ್ತು  ವೈದ್ಯ ಪದ್ಧತಿಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದು ಪರಿಪೂರ್ಣ ಆರೋಗ್ಯ ಸಾಧಿಸಲು ಆರ್ಯುವೇದ ವೈದ್ಯರ ಮಾಹಿತಿ ಪ್ರಕಾರ ಆಯುರ್ವೇದವೇ ಮದ್ದು ಆಯುಷ್ ಇಲಾಖೆಯಲ್ಲಿ ಸಿಗುವಂತಹ ಎಲ್ಲಾ ಸೌಲಭ್ಯ ಪಡೆಯಬಹುದು ಎಂದು ಅಬ್ದುಲ್ ನಬಿ ಹೇಳಿದರು ಖಾಜಿ ಸೈಯದ್ ಅಬ್ದುಲ್ ರಜಾಕ್   ಖಾದ್ರಿ ಅಶ್ರಫಿ, ಹಾಜಿ ಹಂಡಿ ಹುಸೇನ್ ಬಾಷಾ,ಹಾಜಿ ಮೊಹಮ್ಮದ್ ಇಬ್ರಾಹಿಂ,ಹಂಡಿ ಹಾಶಿಮ್ ,ಮೊಹಮ್ಮದ್ ನೌಷಾದ್ ಅಲಿ ,ಡಾ ಮೊಹಮ್ಮದ್ ಅಲಿ,ಬಿ.ಕೆ ಅಲ್ಲಾಭಕ್ಷಿ,ಹಾಜಿ ಅಬ್ದುಲ್ ಹಮೀದ್ ಫಾರೂಕಿ ,ಹಾಜಿ ಟಿ ಜಿ  ಅಬ್ದುಲ್ ಗನಿ ,ಖಾಲಿ ಚೀಲ ಹಾಜಿ ಹುಸೇನ್ ಸಾಬ್ ,ಮೊಹಮ್ಮದ್ ರಫಿ ಇದ್ದರು .

ಸುದ್ದಿ ಓದಿ