ಕಾಗವಾಡ

79 ನೇ ಸಾತಂತ್ರೋತ್ಸವ; 200 ಅಡಿ ಉದ್ದದ ತಿರಂಗಾ ಧ್ವಜ ಯಾತ್ರೆ

79 ನೇ ಸಾತಂತ್ರೋತ್ಸವ; 200 ಅಡಿ ಉದ್ದದ ತಿರಂಗಾ ಧ್ವಜ ಯಾತ್ರೆ

ಕಾಗವಾಡ, 15 ; ತಾಲೂಕಿನ ಜುಗೂಳ ಗ್ರಾಮದಲ್ಲಿ 79 ನೇ ಸ್ವಾತಂತ್ರೋತ್ಸವ ನಿಮಿತ್ಯ 200 ಅಡಿ ಉದ್ದದ ತಿರಂಗಾ ಧ್ವಜದ ತಿರಂಗಾ ಯಾತ್ರೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.  

ಗ್ರಾಮದ ಕೆಎಸ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ 200 ಅಡಿ ಉದ್ದದ ತಿರಂಗಾ ಕೈಯಲ್ಲಿ ಹಿಡಿದುಕೊಂಡು ಭವ್ಯ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿ, ದೇಶಭಕ್ತಿ ಮೆರೆಯಿತು. 

ಕೆಎಸ್‌ಎಸ್ ಪ್ರೌಢ ಶಾಲೆಯಲ್ಲಿ ಧ್ವಜಾರೋಹಣವನ್ನು ಮಹಾದೇವ ಮಿಣಚೆ, ಕೆಎಸ್‌ಎಸ್ ಪ್ರಾಥಮಿಕ ಶಾಲೆಯಲ್ಲಿ ಕಲಗೌಡ ಸಾತಗೊನ್ನವರ, ಗಾಂಧಿ ಚೌಕದಲ್ಲಿ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಗ್ರಾ.ಪಂ.ಕಾರ್ಯಾಲದಲ್ಲಿ ಉಪಾದ್ಯಕ್ಷೆ ನೀತಾ ಮಹಾದೇವ ಕಾಂಬಳೆ ನೇರವೇರಿಸಿದರು.  

ಈ ವೇಳೆ ಗ್ರಾ.ಪಂ. ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಮುಖಂಡರಾದ ಅನೀಲ ಕಡೋಲೆ, ಬಾಬಾಸಾಬ ಪಾಟೀಲ, ಬಾಳಾಸಾಹೇಬ ಪಾಟೀಲ, ಅನೀಲ ಸುಂಕೆ, ಅಸ್ಲಂ ಅಪರಾಜ, ಸುದಾಕರ ಗಣೇಶವಾಡಿ, ಸುರೇಶ ಪಾಟೀಲ, ಅರುಣ ಗಣೇಶವಾಡಿ, ಉಮೇಶ ಪಾಟೀಲ ಸೇರಿದಂತೆ ಗ್ರಾ.ಪಂ. ಸದಸ್ಯರು, ಸಿಬ್ಬಂದಿ ವರ್ಗದವರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಶಾಲೆಯ ವಿದ್ಯಾರ್ಥಿಗಳು ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ