ವಾಲ್ಮೀಕಿ ನಾಯಕ ಸಂಘ ಸಂಯುಕ್ತಾಶ್ರಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ
ಲೋಕದರ್ಶನ ವರದಿ
ರೋಣ18: ಹುನಗುಂಡಿ ಗ್ರಾಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ನಾಯಕ ಸಂಘ ಹುನಗುಂಡಿ ಇವರ ಸಂಯುಕ್ತಾಶ್ರಯದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೊತ್ಸವ ನೇರವೆರಿತು.ಈ ವೇಳೆ ಬಸವಂತಪ್ಪ ಹೆಚ್ ತಳವಾರ ರೋಣ ತಾಲೂಕ ಮಹರ್ಷಿ ವಾಲ್ಮೀಕಿ ನಾಯಕ ಸಂಘ ರೋಣ ಅಧ್ಯಕ್ಷರು ದ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಚಳುವಳಿಗೆ ನೀಖರ ಚೌಕಟ್ಟು ಸ್ವರೂಪ ನೀಡಿದವರು ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಲಕ್ಷಾಂತರ ಜನರ ಹೋರಾಟ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ ಹೋರಾಟವು ತಿವ್ರಗಾಮಿ ನಾಯಕರಾದ ಲಾಲ-ಬಾಲ-ಪಾಲ ರಿಂದ ತೀವ್ರ ಸ್ವರೂಪ ಪಡೇದ ಭಗವಂತ ಸಿಂಗ ಚಂದ್ರಶೇಖರ ಆಝಾದ್,ಸುಭಾಸ್ ಚಂದ್ರ ಭೋಸರಂತ ಕ್ರಾಂತಿಕಾರರು ಬ್ರಿಟಿಷರ ನಡುಗಿಸಿದರು.
ಈ ವರ್ಷ ವಿಶೇಷವಾಗಿ ಪ್ರಧಾನ ಮಂತ್ರಿಯವರ ಆಶಯದಂತೆ ಹರ್-ಘರ್ ತಿರಂಗಾ ಆಚರಣೆ ಮಾಡಲಾಗುತ್ತಿದೆ ರಾಷ್ಟ್ರದ ದ್ವಜವು ನಮ್ಮ ದೇಶದ ಸಾರ್ವಭೌಮತ್ವದ ಪ್ರತೀಕ ರಾಷ್ರ್ಟದ್ವಜದ ತತ್ವಗಳಾದ ಸತ್ಯ.ತ್ಯಾಗ.ಶಾಂತಿಯನ್ನು ನಾವೆಲ್ಲರೂ ಅಳವಡಿಸಿಕೊಂಡು ಅಭಿವೃಧ್ದಿ ಪಥದತ್ತ ಸಾಗಬೇಕೆಂದು ಝೇಂಡಾ ಉಂಚಾ ರಹೆ ಹಮಾರ ಎಂಬ ನಾನ್ನೂಡಿಯಂತೆ ಹರ-ಘರ್ ತಿರಂಗಾ ಅಭೀಯಾನವನ್ನು ಯಶಸ್ವಿಯಾಗಿ ನೇರವೆರಿಸಿದರು. ಈ ಶುಭ ಸಂಧರ್ಬದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುನಗುಂಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಎಮ್.ವ್ಹಾಯ್.ಜಕ್ರಶಾನಿ ಮುಖ್ಯೋಪಾದ್ಯಯರು.ಬಿ.ಎ.ಮೊಕಾಶಿ ದೈಹಿಕ ಶಿಕ್ಷಕರು,ಎನ್.ಪಿ.ಅಂಗಡಿ, ಎಸ್,ಬಿ, ಯರಳಿ ರಂಗಸ್ವಾಮಿ ಎಲ್.ಡಿ.ಎಮ್ಎಸ್, ಮಡಿವಾಳರ,ಎಸ್.ಐ.ಕುರುಡಗಿಮಠ, ಶ್ರೀಮತಿ ಎಲ್.ಎಸ್.ಪಾಟೀಲ,ಎಚ್,ಎಲ್, ರಂಗನಗೌಡ್ರ,ಶ್ರೀಮತಿ ಕವಿತಾ ಬಸವಂತಪ್ಪ ತಳವಾರ ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ನವಚಿದ್ರ,ನಿರ್ಮಾಲಾ ಬ ಕೊಡತಗೇರಿ, ಬಸವಂತಪ್ಪ ಮಂಡಸೊಪ್ಪಿ, ಎಮ್,ಎಚ್,ಜಂತ್ಲಿ,ಹನಮಂತ ವಾಲ್ಮೀಕಿ, ಚನ್ನಪ್ಪ ತಳವಾರ,ಶರಣಪ್ಪ ತಳವಾರ, ಉಮೇಶ ತಳವಾರ, ಕೇಂಚಪ್ಪ ತಳವಾರ, ರಾಮಪ್ಪ ತಳವಾರ, ಯಲ್ಲಪ್ಪ ಕುರಿ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಕೊನೆಯಲ್ಲಿ ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.