ಹಗರಿಬೊಮ್ಮನಹಳ್ಳಿ

73ನೇ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ

73ನೇ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ

ಹಗರಿಬೊಮ್ಮನಹಳ್ಳಿ 20: 73ನೇ ಗಣರಾಜ್ಯೋತ್ಸವ ಪ್ರಯುಕ್ತ ಕಚೇರಿಗಳಿಗೆ ದೀಪಾಲಂಕೃತ ಮಾಡಿ ಹಬ್ಬದಂತೆ ಆಚರಿಸಲು ತಹಶಿಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ತಹಶಿಲ್ದಾರ್ ಶರಣಮ್ಮ ಕರೆ ನೀಡಿದರು. 

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ 73ನೇ ಗಣರಾಜ್ಯೋತ್ಸವದ ಪೂರ್ವ ಭಾವಿ ಸಭೆ ನಡೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡಿ, ಕೋವಿಡ್ ಸೊಂಕು ವ್ಯಾಪಕವಾಗಿ ಹರಡುತ್ತಿದ್ದು ಈ ಬಾರಿ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವುದರ ಜೊತೆ, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಪ್ರತಿಯೊಂದು ಇಲಾಖೆಯ ಸಿಬ್ಬಂದಿಗಳು ಗಂಭೀ ಕಾಲೇಜಿನ ಮೈದಾನಕ್ಕೆ ಬೆ. 8.30ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು. ಪಟ್ಟಣದಲ್ಲಿರುವ ಪ್ರತಿಯೊಂದು ಇಲಾಖೆಗಳಲ್ಲಿ ದೀಪಾಲಂಕಾರ ಮಾಡಿಸಬೇಕು, ಕೆಆರ್‌ಐಡಿಎಲ್ ಇಲಾಖೆಯನ್ನು ಹೊರತು ಪಡಿಸಿ ಉಳಿದ ಇಲಾಖೆಗಳಿಗೆ ವೇದಿಕೆ ಕಾರ್ಯಕ್ರಮಕ್ಕೆ ಬೇಕಿರುವ ಅವಶ್ಯಕತೆಗಳನ್ನು ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಇಲಾಖೆ, ನೈರ್ಮಲ್ಯ ಇಲಾಖೆಗೆ ಒಪ್ಪಿಸಲಾಯಿತು. ಉಳಿದ ಇಲಾಖೆಗಳಿಗೆ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ವಹಿಸಲಾಯಿತು. 

ಕೊರೊನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡುವ ವಿಷಯವಾಗಿ ತಾಲೂಕು ಆರೋಧಿಕಾರಿಗಳಿಗೆ ತಿಳಿಸಿದಾಗ, 100 ಪ್ರತಿ ಶತ ಕೋವಿಡ್ ಲಸಿಕೆ ನೀಡುವಲ್ಲಿ ಸಫಲರಾದವರಿಗೆ ಈ ಬಾರಿ ಸನ್ಮಾನ ಮಡುವಂತೆ ತಿಳಿಸಿದರು.ಹಳೆ ಹಾಗೂ ಹೊಸ ತಾಲೂಕು ಕಚೇರಿಗಳಿಗೆ ದೀಪಾಲಂಕಾರ ಮಾಡುವಂತೆ ಕೆಇಬಿ ಇಲಾಖೆಗೆ ತಿಳಿಸಿದರು.ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಭೀಮಾನಾಯ್ಕ್‌ ಪಾಲ್ಗೊಳ್ಳಲಿದ್ದಾರೆಂದು ತಹಶಿಲ್ದಾರ್ ತಿಳಿಸಿದರು. 

ಸಕಾಲ ಅರ್ಜಿಗಳ ವಿಳಂಬ, ಅಧಿಕಾರಿಗಳಿಗೆ ತರಾಟೆ: ತಾಲೂಕಿನಲ್ಲಿ ಒಟ್ಟು 183 ಸಕಾಲ ಅರ್ಜಿಗಳು ಬಾಕಿಯಿದ್ದು, ನಿಗದಿತ ಸಮಯದೊಳಗೆ ಇತ್ಯರ್ಥಗೊಳಿಸುವಲ್ಲಿ ಇಲಾಖೆಗಳು ಹಿಂದುಳಿದಿದ್ದು, ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಮುಖ್ಯಸ್ಥರು ಅರ್ಜಿಗಳ ಸಮರ​‍್ಕವಾಗಿ ಇತ್ಯಾರ್ಥಗೊಳಿಸಿ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು. ಆರ್‌ಡಿಪಿಆರ್ ಇಲಾಖೆಯಲ್ಲಿ ಕಾಲಮಿತಿ ಮೂಗಿದ 18 ಅರ್ಜಿಗಳು ಬಾಕಿ ಇವೆ, ಜೆಸ್ಕಾಂನಲ್ಲಿ 39,ಶಿಕ್ಷಣ ಇಲಾಖೆಯ 96ಅರ್ಜಿಗಳು,ಸಮಾಜ ಕಲ್ಯಾಣ ಇಲಾಖೆಯ 6, ಹೋಂ ಇಲಾಖೆಯ 14, ಪುರಸಭೆಯ 3, ಕೆಎಸ್‌ಆರಿ​‍್ಟಸಿಯ 6, ಲೇಬರ್ ಇಲಾಖೆಯ 1 ಸಕಾಲ ಅರ್ಜಿಗಳು ಬಾಕಿಯಿದ್ದು ಕೂಡಲೇ ಸಂಭಂಧಪಟ್ಟ ಅಧಿಕಾರಿಗಳು ಇತ್ತ ಹಮನ ಹರಿಸಿ ಇತ್ಯರ್ಥಗೊಳಿಸುವಂತೆ ತಾಕೀತು ಮಾಡಿದರು. 

ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ, ಅಕ್ಷರ ದಾಸೋಹದ ನಿರ್ದೇಶಕ ರವಿ, ತೋಟಗಾರಿಕೆ ಇಲಾಖೆಯ ಪರಮೇಶ್ವರ, ಸಿಡಿಪಿಒ ಚನ್ನಪ್ಪ, ಪೋಲೀಸ್ ಇಲಾಖೆಯ ಯಮುನಾನಾಯ್ಕ್‌ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ