ಪದವಿ ಪೂರ್ವ ಕಾಲೇಜು ಆವರಣದಲ್ಲಿ 73ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಜರುಗಿತು
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 27: ಪಟ್ಟಣದ ಗಂಭೀ ಪದವಿ ಪೂರ್ವ ಕಾಲೇಜು ಆವರಣದಲ್ಲಿ 73ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.
ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಎಸ್.ಭೀಮಾನಾಯ್ಕ್ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ದೇಶವು ಹತ್ತಾರು ಸಂಸ್ಥಾನಗಳಾಗಿ ಹಂಚಿ ಹೋಗಿತ್ತು, ಅವುಗಳನ್ನೆಲ್ಲ ಒಂದೆಡೆ ಸೇರಿಸಿ ಕಾನೂನು ಬದ್ಧವಾಗಿ ಮಾರ್ಗಸೂಚಿಗಳನ್ನು ಸೂಚಿಸಿದ ದಿನಕ್ಕಾಗಿ ಈ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ, ನಮ್ಮ ಸಂವಿಧಾನ ದೇಶದ ಭಾವೈಕ್ಯತೆ, ಸಂಸ್ಕೃತಿ, ಸೈನಿಕರ ಸಾಧನೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಪಟ್ಟಣದ ಎಂ.ಬಿ.ಕಾಲೋನಿ ಬಳಿ ನಿರ್ಮಿಸುತ್ತಿರುವ 10ಕೋಟಿ ವೆಚ್ಚದ ಮಿನಿ ವಿಧಾನ ಸೌಧವನ್ನು ಮುಂದಿನ ನಾಲ್ಕು ತಿಂಗಳಲ್ಲಿ ಕಾರ್ಯ ಸಂಪೂರ್ಣವಾಗಲಿದ್ದು ಹಸಿರು ನಿಶಾನೆ ದೊರಕಲಿದೆ, ಪಟ್ಟಣದಲ್ಲಿದ್ದ ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೆಗೇರಿಸಿ ಅಭಿವೃಧ್ಧಿ ಪಥದಲ್ಲಿ ಕೊಂಡಯ್ಯಲು ಪುರಸಭೆ ಮಾಡಲಾಗಿದೆ. ನೂತನವಾಗಿ ಆಯ್ಕೆಯಾದ ಸದಸ್ಯರುಗಳು ಪಕ್ಷಾತೀತವಾಗಿ ಜತ್ಯಾತೀತವಾಗಿ ಕಾರ್ಯ ನಿರ್ವಹಿಸಿದರೆ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದಾಗಿದೆ.ಕ್ಷೇತ್ರದಲ್ಲಿನ ವಾರ್ಡ್ಗಳಷ್ಟೇ ಅಲ್ಲದೇ ಶಾಲೆ ಮಕ್ಕಳಿಗೂ ಕುಡಿಯುವ ಶುಧ್ಧ ನೀರು ದೊರಕುವ ಸಲುವಾಗಿ 128ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಹಳೇ ತಾಲೂಕು ಕಚೇರಿಯನ್ನು ಪುನರ್ ನಿರ್ಮಾಣ ಮಾಡಿ ಪುರಸಭೆ ಕಚೇರಿಯನ್ನು ಸ್ಥಾಪಿಸಲಾಗುವುದು.ಕ್ಷೇತ್ರದ 22 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಆಡಳಿತಾರೂಢ ಬಿಜೆಪಿ ಪಕ್ಷದಿಂದ ಇಲ್ಲದ ಸಮಸ್ಯೆಗಳ ಉದ್ಭವವಾಗುತ್ತಿವೆ ಎಂದು ಕಿಡಿಕಾರಿದರು.
ಕೆರೆಗಳಿಗೆ ನೀರು, 2ತಿಂಗಳ ಗಡುವು: 22ಕೆರೆಗಳಿಗೆ ನೀರು ತುಂಬಿಸುವ ಸುಖಾ ಸುಮ್ಮನೆ ಮುಂದುಡುತ್ತಿರುವುದು ಕ್ಷೇತ್ರದ ರೈತರಿಗೆ ಕಷ್ಟಗಳ ಬೇಗೆಯಲ್ಲಿ ಬೇಯಿಸದಂತಾಗುತ್ತಿದ್ದು, ಇದಕ್ಕಾಗಿ ಕ್ಷೇತ್ರದಲ್ಲಿನ ಮಠಾಧೀಶರ, ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ ಹಗರಿಬೊಮ್ಮನಹಳ್ಳಿ ಅಥವಾ ಕೊಟ್ಟೂರುನಿಂದ ಪಾದಯಾತ್ರೆ ಮೂಲಕ ವಿಜಯನಗರ ಜಿಲ್ಲೇಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮೊದಲಿಗೆ ಮನವಿ ಮಾಡುತ್ತೆವೆ ಒಪ್ಪದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾದೀತು ಎಂದು ಎಚ್ಚರಿಸಿದರು.
ವಿಕರಲ ಚೇತನರಿಗೆ 12 ತ್ರಿ ಚಕ್ರ ವಾಹನಗಳ ವಿತರಣೆ : 73ನೇ ಗಣರಾಜ್ಯೋತ್ಸವದಲ್ಲಿ 12 ವಿಕಲಚೇತನರಿಗೆ ಖನಿಜ ನಿಧಿಯಿಂದ 12 ತ್ರಿಚಕ್ರ ವಾಹನಗಳನ್ನು ಶಾಸಕರು,ತಹಶಿಲ್ದಾರ್ರು ವಿತರಿಸಿದರು.
ಉಪಯೋಗಕ್ಕೆ ಬಾರದ ತುಂಗಾಭದ್ರ ಹಿನ್ನೀರು: ಕ್ಷೇತ್ರದ ಯಾವ ತುದಿಯಲ್ಲಿ ನಿಂತು ಕಣ್ಣು ಹಾಹಿಸಿದರೆ ಕಾಣುವ ತುಂಗಾಭದ್ರ ನೀರು ಸನಿಹವಿದ್ದರೂ ಉಪಯೋಗಿಸಲಾದಂತೆ ದೌರ್ಭಗ್ಯ ನಮ್ಮದಾಗಿದೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಬೇಸರ ವ್ಯೆಕ್ತ ಪಡಿಸಿದರು.
ತಹಶಿಲ್ದಾರ್ ಶರಣಮ್ಮ ಮಾತನಾಡಿ ಇಂದು ಇಡೀ ವಿಶ್ವವೇ ನಮ್ಮ ದೇಶದತ್ತ ನೋಡುವಂತಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತವನ್ನು ಅನುಕರಣೀಯ ರಾಷ್ಟ್ರವಾಗಿದೆ ಎಂದು ಕೊಂಡಾಡಿರುವುದು ನಿಜಕ್ಕೂ ಶ್ಲಾಘನೀಯ,ನಮ್ಮದು ಭಾತೃತ್ವ ರಾಷ್ಟ್ರವಾಗಿದೆ, ಪ್ರತಿಯೊಬ್ಬರೂ ಅವರ ಜವಾಬ್ದಾರಿಯುತ ಕಾರ್ಯಗಳನ್ನು ಮುನ್ನೆಸಿಡೆಸಿಕೊಂಡು ಹೋಗಬೆಕಿದೆ, ದೇಶವು ಸಧೃಡವಾಗಬೇಕಾದರೆ ಶಿಕ್ಷಣ ಅವಶ್ಯಕವಾಗಿದೆ,ಕಂದಾಯ ಇಲಾಖೆಗೆ ರೈತರ ಸಕ್ರಮ ಅಕ್ರಮ ಅರ್ಜಿಗಳು ಬಂದಿದ್ದು ಸಮಿತಿ ರಚನೆ ಮಾಡಿ ಶೀಘ್ರವೇ ಇತ್ಯರ್ಥಗೊಳಿಸಲಾಗುವುದು,ಸಂಧ್ಯ ಸುರಕ್ಷ ಯೋಜನೆ, ಮೈತ್ರಿ ಯೋಜನೆ, ಸಾಮಾಜಿಕ ಭದ್ರತ ಯೋಜನೆ ಸೇರಿದಂತೆ ಅನೇಕ ಸವಲತ್ತುಗಳ ಅಡಿಯಲ್ಲಿ ಫಲಾನುಭವಿಗಳ ಪರೀಶೀಲಿಸಿ ನ್ಯಾಯ ದೊರಕಿಸಿಕೊಡಲಾಗುವುದು, ಎಲ್ಲರೂ ಒಕ್ಕರಲಿನಿಂದ ಜವಾಬ್ದಾರಿ ನಿಭಾಯಿಸಲು ಕರೆ ನಿಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಸ್ವಾಗತಿಸಿದರು, ಶಿಕ್ಷಕ ಕೊಟ್ರೇಶ್ ನಿರೂಪಿಸಿದರೆ ಟಿಹೆಚ್ಒ ಶಿವರಾಜ್ ವಂದಿಸಿದರು.ಪೋಲೀಸ್ ಸಬ್ ಇನ್ಸ್ಪೆಕ್ಟರ್ ಸರಳ ನೇತೃತ್ವದಲ್ಲಿ ಪೋಲೀಸ್ ಇಲಾಖೆ ಹಾಗೂ ಗೃಹ ರಕ್ಷಕದಳದಿಂದ ಧ್ವಜವಂದನೆ ಜರುಗಿತು.
ಈ ಸಂಧರ್ಭದಲ್ಲಿ ನೂತನ ಪುರಸಭೆ ಸದಸ್ಯರಾದ ಎಂ.ಮರಿರಾಮಪ್ಪ, ಗಣೇಶ್, ರೇಷ್ಮಾ ಸಿಖಂದರ್, ಅಜಿಜುಲ್ಲಾ, ಖಾಜಾಮುನ್ನಿ ಅಲ್ಲಾಬಕ್ಷಿ, ನೆಲ್ಲು ಇಸ್ಮಾಯಿಲ್, ರಾಜೇಶ್ ಬ್ಯಾಡಗಿ, ಮುಖಂಡರಾದ ಅಕ್ಕಿ ತೋಟೇಶ್, ಪವಾಡಿ ಹನುಮಂತಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.