ಬೆಳಗಾವಿ

ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಿಂದ ಶೇ.7 ಲಾಭಾಂಶ

ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಿಂದ ಶೇ.7 ಲಾಭಾಂಶ


ಸಂಬರಗಿ ಸೆ. 23: ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ?15 ಲಕ್ಷ 71 ಸಾವಿರದ 371 ರೂ.ಗಳಷ್ಟು ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.7ರಷ್ಟು ಲಾಭಾಂಶವನ್ನು ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಪುತ್ರ ರಾವಸಾಹೇಬ ಬೇವನೂರ ತಿಳಿಸಿದ್ದಾರೆ.  

ಶಿವನೂರಿನಲ್ಲಿ ನಡೆದ ಸಂಘದ 22ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಸಂಘದ ಒಟ್ಟು ಷೇರು ಬಂಡವಾಳ ?92 ಲಕ್ಷ 63 ಸಾವಿರದ 350, ಒಟ್ಟು ಠೇವಣಿ ?4 ಕೋಟಿ 37 ಲಕ್ಷ 55 ಸಾವಿರದ 501 ಹಾಗೂ ಒಟ್ಟು ಸಾಲ ?9 ಕೋಟಿ 51 ಲಕ್ಷ 85 ಸಾವಿರದ 851 ರೂ.ಗಳಾಗಿದೆ. ಸಂಘದ ವಾರ್ಷಿಕ ವಹಿವಾಟು ?33 ಕೋಟಿ 84 ಲಕ್ಷ 33 ಸಾವಿರದ 218 ರೂ.ಗಳಷ್ಟಿದ್ದು, ಸಂಘದಲ್ಲಿ ಒಟ್ಟು 896 ಸದಸ್ಯರಿದ್ದಾರೆ ಎಂದು ತಿಳಿಸಿದರು.  

ಸಂಘವು ಸದಸ್ಯರಿಗೆ ಚಿನ್ನದ ಮೇಲಿನ ಸಾಲ ಹಾಗೂ ಬ್ಯಾಂಕ್ಗಳ ಮಾದರಿಯಲ್ಲಿ ತ್ವರಿತ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಲ್ಲದೆ, ಎಟಿಎಂ ಮೂಲಕ ಹಣ ಪಾವತಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ರೈತರಿಗೆ ಹೈನುಗಾರಿಕೆ ಆರಂಭಿಸಲು ಶೀಘ್ರದಲ್ಲೇ ಸಂಘದ ವತಿಯಿಂದ ಅನುದಾನ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.  

ಗ್ರಾಮದಲ್ಲಿ ಪಿಯು ಕಾಲೇಜು ಆರಂಭಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದ್ದು, ಪಶುವೈದ್ಯಕೀಯ ಚಿಕಿತ್ಸಾಲಯದ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಿದೆ. ಈ ಎರಡೂ ಯೋಜನೆಗಳನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.  

ರಾಜ್ಯದ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ ಬಸವೇಶ್ವರ ಏತ ನೀರಾವರಿ ಕಾಲುವೆ ಮೂಲಕ ನೀರು ಹರಿದು ಬರುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.  

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹುಮಾನ ಮಾನೆ, ನಿರ್ದೇಶಕರಾದ ರಾವಸಾಹೇಬ ಗುಗಾರಿ, ಸಂಭಾಜಿ ವಾಘಮೋಡೆ, ಪಂಡಿತ ಕಾಂಬಳೆ, ಶ್ರೀಮತಿ ಸರಸ್ವತಿ, ಜ್ಯೋತಿಪಾ, ಅಜುರ, ಶ್ರೀಮತಿ ರೇಖಾ, ಸದಾನಂದ ಬಿರಾದಾರ, ಸುಖದೇವ, ಸನದಿ, ಅಪ್ಪಣ್ಣ, ವಾಘರೆ, ಅಶೋಕ, ಕಿರಣಗಿ, ಈರುಗೊಂಡ ಗುಮಟಾಜ್, ರಾವಸಾಹೇಬ ಪಾಟೀಲ, ಕರುಣ, ಬೇವನೂರ, ಸುರೇಶ, ಹವಾಲ್ದಾರ, ಬ್ಯಾಂಕ್ ಇನ್ಸ್ಪೆಕ್ಟರ್ ಮಹಾದೇವ, ಉಲಗಾಡಿ, ಎ.ಕೆ. ಮಾಳಿ, ಅಣ್ಣಾಸಾಹೇಬ ಅಚಳಿ ಸೇರಿದಂತೆ ನಿರ್ದೇಶಕರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.  ಸಂಘದ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ಅಜುರ ಓದಿದರು. ಶ್ರೀಶೈಲ ಪಾಟೀಲ ಸ್ವಾಗತಿಸಿದರು. ಸಂಭಾಜಿ ವಾಘಮೋಡೆ ವಂದಿಸಿದರು. 


ಸುದ್ದಿ ಓದಿ