ಶಿಗ್ಗಾವ್

67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ 

ಶಿಗ್ಗಾವಿ 03: ನಾಲಿಗೆ ಕತ್ತರಿಸಿದರೂ ಮೂಗಿನಲ್ಲಾದರೂ ಕನ್ನಡ ಶಬ್ದಗಳನ್ನೆ ಮಾತಾಡ್ತೀನಿ, ಕನ್ನಡ ನನ್ನುಸಿರು ನುಡಿ ಮತ್ತು ನಡೆಯಲೂ ತಾಯಿ ಭಾಷೆ ಕನ್ನಡವೇ ನನ್ನ ಆಸ್ತಿ, ಎಂಬುದು ಎಲ್ಲಾ ಕನ್ನಡಿಗರೂ ಅರಿತಾಗಕನ್ನಡ ಭಾಷೆಯ ತಾಕತ್ತು ಅನ್ಯ ಭಾಷಿಗರ ಹೃದಯ ಮುಟ್ಟುವ ಮೂಲಕ ನಮ್ಮತನ ಅರಿವಾಗುತ್ತದೆ ಎಂದು ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರೊ. ಎಫ್‌ಎಸ್ ಶಿವಣ್ಣನವರು ಹೇಳಿದರು. 

ಪಟ್ಟಣದ ರಂಭಾಪುರೀ ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 67ನೇ ಕನ್ನಡರಾಜ್ಯೋತ್ಸವದ ದಿನದಂದು ಪೂಜಾ ಕೈಂಕರ್ಯದಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಬೋಧಿಸಿದರು. 

 ಪ್ರೊಎಮ್‌ಎಸ್ ಸಿದ್ದಪ್ಪನವರ ಮಾತನಾಡಿ ಭಾಷಾವಾರು ಪ್ರಾಂತ್ಯಗಳ ರಚನೆಯ ಕಾಲಕ್ಕೆ ಕನ್ನಡಿಗರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ, ಇನ್ನೂ ಕನ್ನಡ ಭಾಷೆಯನ್ನು ಮಾತನಾಡುವ ಬಹಳಷ್ಟು ತಾಲೂಕುಗಳು ಬೇರೆ ರಾಜ್ಯಗಳಲ್ಲಿ ಇದ್ದದ್ದು ನಮ್ಮ ದುರದೃಷ್ಟಕರವಾಗಿದೆ ಅವೆಲ್ಲ ಪ್ರದೇಶಗಳು ಕರ್ನಾಟಕದ ಒಕ್ಕೂಟದ ವ್ಯವಸ್ಥೆಗೆ ಸೇರಿದಾಗ ಮಾತ್ರ ಕನ್ನಡಿಗರ ಹೃದಯ ತೃಪ್ತವಾಗುತ್ತದೆ ಎಂದು ಕರೆ ನೀಡಿದರು. 

ಪ್ರಾಚಾರ್ಯ ಪ್ರೊ. ಸುರೇಶ್ ಮಲ್ಲಾಡದ ಅಧ್ಯಕ್ಷತೆ ವಹಿಸಿ ಮಾತನಾಡಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆಯೇ ವಿರಳ,ಅನ್ಯ ಭಾಷಿಯ ವ್ಯಾಮೋಹಕ್ಕೆ ಸಿಲುಕಿ ತಾಯಿ ಭಾಷೆಯನ್ನೇ ಮರಿತಿರುವುದನ್ನು ಗಮನಿಸಿದಾಗ ಕನ್ನಡಿಗರಎದೆ ಭಾರವಾಗುತ್ತದೆ, ಅದಕ್ಕಾಗಿ ನಮ್ಮ ಭಾಷೆಯನ್ನು ಪೂಜಿಸಿ ಅನ್ಯ ಭಾಷಿಯನ್ನು ಪ್ರೀತಿಸಿ ಎಂದರು. 

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಬೋದಕ, ಬೊದಕೇತರು, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಎನ್‌ಎಸ್‌ಎಸ್ ಘಟಕದ ಸಂಚಾಲಕ ಪ್ರೊ. ಶಿವಯ್ಯ ಪೂಜಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ