ಬೆಳಗಾವಿ ರಾಜ್ಯೋತ್ಸವ ಮೆರವಣಿಗೆ ವೇಳೆ 6 ಜನರಿಗೆ ಚಾಕು ಇರಿತ : ಇಬ್ಬರ ಸ್ಥಿತಿ ಗಂಭೀರ

ಬೆಳಗಾವಿ ರಾಜ್ಯೋತ್ಸವ ಮೆರವಣಿಗೆ ವೇಳೆ 6 ಜನರಿಗೆ ಚಾಕು ಇರಿತ : ಇಬ್ಬರ ಸ್ಥಿತಿ ಗಂಭೀರ

ಬೆಳಗಾವಿ : ಬೆಳಗಾವಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪ್ರತೇಕ ಎರಡು ಪ್ರಕರಣದಲ್ಲಿ ಒಟ್ಟು ಆರು ಜನರಿಗೆ ಚಾಕು ಇರಿತವಾಗಿದ್ದು, ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ದಾಖಲಿಸಲಾಗಿದ್ದು, ಅದರಲ್ಲಿನ ಇಬ್ಬರ ಸ್ಥಿತಿ ಗಂಭೀರವಾಗಿದೆ.

   ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ‌ಕಾಂಪ್ಲೆಕ್ಸ ಬಳಿಯಲ್ಲಿ ಈ ಘಟನೆ ನಡೆದಿದ್ದು, ಅದರಲ್ಲಿ ಐವರ ಮೇಲೆ ಚಾಕು ಇರಿತವಾಗಿದೆ. ಅದೇ ರೀತಿ ಚನ್ನಮ್ಮ ವೃತ್ತ ದಲ್ಲಿ ಮ್ಮತೋರ್ವನ ಮೇಲೆ ಚಾಕು ಇರಿತವಾಗಿದೆ. ಇದರಲ್ಲಿ ಇಬ್ಬರು ಸ್ಥಿತಿ ಚಿಂಚಾಜನಕವಾಗಿದೆ. 

   ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ರೂಪಕಗಳ ಮೆರವಣಿಗೆಯ ವೇಳೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಐವರು ಯುವಕರ ಮೇಲೆ ಯದ್ವತದ್ವಾ ಚಾಕು ಇರಿತ ಮಾಡಿದ್ದಾರೆ. ಚಾಕು, ಜಂಬೆ ಸಮೇತ ಆಗಮಿಸಿ ಐವರ ಮೇಲೆ ದಾಳಿ ನಡೆಸಿ ದುಷ್ಕರ್ಮಿಗಳು ಪಾರಾರಿಯಾಗಿದ್ದಾರೆ.

   ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್, ವಿನಾಯಕ ಹಾಗೂ ನಜೀರ್ ಪಠಾಣ್‌ಗೆ ಚಾಕು ಇರಿತವಾಗಿದೆ. ಬೆಳಗಾವಿಯ ‌ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ‌ ನಡೆದಿದೆ. 

   ರಾಜ್ಯೋತ್ಸವ ಮೆರವಣಿಗೆ ವೇಳೆ ಚಾಕು ಇರಿತ ಒಳಗಾದ ಸುದ್ದಿ ತಿಳಿದ ಕೂಡಲೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಭೇಟಿ ನೀಡಿ ಚಾಕು ಇರಿತಕ್ಕೊಳಗಾದವರಿಂದ ಮಾಹಿತಿ ಪಡೆದಿದ್ದಾರೆ.

   ಗಾಯಾಳುಗಳ ಭೇಟಿ ಬಳಿಕ ಪೊಲೀಸ್ ಆಯುಕ್ತ ಭೂಷಣ್ ಹೇಳಿಕೆ ನೀಡಿ,ವೈ ಜಂಕ್ಷನ್ ಬಳಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಘರ್ಷಣೆ ಆಗಿದೆ.ನಾಲ್ಕು ಜನರಿಗೆ ಚಾಕು ಇರಿತ ಆಗಿದೆ, ಒಬ್ಬರಿಗೆ ತಲೆಗೆ ಗಾಯ ಆಗಿದೆ. ಐದು ಜನರು ಔಟ್ ಆಫ್ ಡೇಂಜರ್ ಇದಾರೆ.

   ಯಾರು ಹಲ್ಲೆ‌ ಮಾಡಿದಾರೆ ಯಾಕೆ ಮಾಡಿದಾರೆ ಮಾಹಿತಿ ಪಡೆಯುತ್ತಿದ್ದೇವೆ.ಘಟನೆಯಾದ ಜಾಗದಲ್ಲಿ ಸಿಸಿಟಿವಿ ಪರಿಶೀಲನೆ ಕೂಡ ಮಾಡುತ್ತೇವೆ.ಗಾಯಗೊಂಡ ಎಲ್ಲರೂ ನೆಹರು ನಗರದ ನಿವಾಸಿಗಳು ಆಗಿದ್ದಾರೆ ಎಂದರು.

   ರಾಜ್ಯೋತ್ಸವ ಮೆರವಣಿಗೆ ವೇಳೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳು ರಾಘವೇಂದ್ರ ಹೇಳಿಕೆ ನೀಡಿದ್ದು, ಮೆರವಣಿಗೆಯಲ್ಲಿ ರೂಪಕ ವಾಹನ ತಂದಿದ್ದೇವು.ನಮ್ಮ ವಾಹನದ ಬಳಿ ಬೇರೆಯವರೊಂದಿಗೆ ಅಪರಿಚಿತರು ಜಗಳ ಮಾಡತ್ತಿದ್ರೂ.

ನಮ್ಮ ರೂಪಕ ವಾಹನ ನೋಡಿ ನಮ್ಮ ಮೇಲೆ ಹಲ್ಲೆ ಮಾಡಿದ್ರೂ. ಕೈಯಲ್ಲಿ ಚಾಕು ಹಿಡಿದು ಬಂದು ಹಲ್ಲೆ ಮಾಡಿದ್ದಾರೆ. ಹನ್ನೊಂದಕ್ಕೂ ಅಧಿಕ ಜನರು ಹಲ್ಲೆ ಮಾಡಿ ಪರಾರಿಯಾದರು. ಎಳೆಂಟು ಜನರ ಮೇಲೆ ಹಲ್ಲೆ ಮಾಡಿದಾರೆ. ಕೆಲವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ ಎಂದು ವಿವರಿಸಿದ್ದಾರೆ.

ಸುದ್ದಿ ಓದಿ