ಮುದ್ದೆಬಿಹಾಲ್

6 ದಿನ ಎಎಲ್‌ಬಿಸಿ ಪೂರ್ವ, ಪಶ್ಚಿಮ ಕಾಲುವೆಗಳಿಗೆ ನೀರು

6 ದಿನ ಎಎಲ್‌ಬಿಸಿ ಪೂರ್ವ, ಪಶ್ಚಿಮ ಕಾಲುವೆಗಳಿಗೆ ನೀರು

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ನೀರಾವರಿ ಸಚಿವ ಡಿ ಕೆ ಶಿವಕುಮಾರಗೆ ಶಾಸಕ ಸಿ ಎಸ್ ನಾಡಗೌಡ ಅಭಿನಂದನೆ  

ಮುದ್ದೇಬಿಹಾಳ 07ಽ: ಇಂದಿನಿಂದ 6 ದಿನಗಳವರಗೆ ಕೃಷ್ಣಾ ಭಾಗ್ಯ ಜಲನಿಗಮದಿಂದ ಆಲಮಟ್ಟಿ ಜಲಾಶಯದ ಎ ಎಲ್ ಬಿ ಸಿ ಪೂರ್ವ, ಪಶ್ಚಿಮ ಕಾಲುವೆಗಳ ಮೂಲಕ ನೀರು ಹರಿಸಲು ಸೂಚಿಸುವ ಮೂಲಕ ರೈತರ ಸಂಕಷ್ಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರವರಿಗೆ ಮತ್ತು ಸರಕಾರ ಅಭಿನಂದನೆ ಸಲ್ಲಿತ್ತೇನೆ ಎಂದು ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿನ ತಮ್ಮ ಗ್ರಹ ಕಚೇರಿಯಲ್ಲಿ ನಾಲತವಾಡ ಸೇರಿದಂತೆ ಇತರೇ ಭಾಗದ ರೈತರ ಸಮ್ಮುಖದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಈ ಬಾರಿ  ಮುಂಗಾರು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ರೈತರು ತೀವೃ ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು ಅಲ್ಪ ಸ್ವಲ್ಪನಾದರೂ  ಕಾಲುವೆಗಳ ಮೂಲಕ ನೀರು ಹರಿಬಿಡಬೇಕು ಎಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನಮ್ಮ ಭಾಗದ ಸುಮಾರು 34 ಜನ ಶಾಸಕರು ಚರ್ಚಿಸುವ ಮೂಲಕ ಸರಕಾರಕ್ಕೆ ಒತ್ತಾಸಲಾಗಿತ್ತು. ಅದರಂತೆ ಉಪಮುಖ್ಯಮಂತ್ರಿ ಹಾಗೂ ನಿರಾವರಿ ಸಚಿವ ಡಿ ಕೆ ಶಿವಕುಮಾರವರು ಶನಿವಾರದ ತಡರಾತ್ರಿ ವಿಡಿಯೋ ಕಾನ್ಪರೇನ್ಸ್‌ ಮೂಲಕ  ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳ ವ್ಯಾಪ್ತಿಯ ಭಾಗದ ಬಹುತೇಕ ಎಲ್ಲ ಶಾಸಕರ ಹಾಗೂ ನಿರಾವರಿ ಇಲಾಖೆ ಅಧಿಕಾರಿಗಳ ಜೊತೆಗೆ ನೇರ ಸಂವಾದ ನಡೆಸಿ ರೈತರ ಸಂಕಷ್ಟದ ಕುರಿತು ಮಾಹಿತಿ ಪಡೆದು ಸುಮಾರು 6 ದಿನಗಳ ಕಾಲ ಎ.ಎಲ್‌. ಬಿ.ಸಿ, ಚಿಮ್ಮಲಗಿ ಏತನಿರಾವರಿ, ಪೂರ್ವ ಮತ್ತು ಪಶ್ಚಿಮ ಕಾಲುವೆಗಳ ಮೂಲಕ ನೀರು ಹರಿಬಿಡಲು ತೀರ್ಮಾನಿಸಿದೆ.  

ಇದರಿಂದ ಈ ಭಾಗದ ಬಹುತೇಕ 7.5 ರಿಂದ 8 ಸಾವಿರ ಹೆಕ್ಟೇರ ಭೂ ಪ್ರದೇಶ  ರೈತರ ಜಮೀನುಗಳ ಕೃಷಿ ಚಟುವೆಗಳಿಗೆ ಬೆಳೆಗೆ ಅನುಕೂಲವಾಗಲಿದೆ. ಒಂದು ವೇಳೆ ಈ ನೀರು ಹರಿಸದೇ ಇದ್ದರೆ ಸುಮಾರು 50 ರಿಂದ 60 ಕೋಟಿ ಮೆಣಸಿನಕಾಯಿ ಬೆಳೆ ಹಾನಿ ಅನುಭವಿಸುವಂತಾಗುತ್ತಿತ್ತು. ಕಾರಣ ರೈತರು ಯಾವೂದೇ ಆತಂಕ ಪಡಬೇಕೇಗಿಲ್ಲ  ಕಾರಣ ರೈತರು ಸಧ್ಯ ಕಾಲುವೆಗಳ ಮೂಲಕ ನೀರು ಹರಿಸಿದ ನೀರನ್ನು ಒಂದು ಹನೀ ನೀರು ಕೂಡ ವ್ಯರ್ಥ ಹಾಳು ಮಾಡದೇ ಸಂಪೂರ್ಣ ಬೆಳೆಗೆ ಅನುಕೂಲವಾಗುವ ರೀತಿಯಲ್ಲಿ ಸಮರ​‍್ಕವಾಗಿ ಸದ್ಭಳಕೆ ಮಾಡಿಕೊಳ್ಳಬೇಕೆ ವಿನಃ ದುರುಪಯೋಗ ಪಡೆಸಿಕೊಳ್ಳಬಾರದು.  

ಸಧ್ಯ ಆಲಮಟ್ಟಿ ಜಲಾಶಯದಿಂದ 5ರಿಂದ 6 ಟಿಂಎಸಿ ನೀರು ಶೆಖರಣೆಇದ್ದು ಇದರಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ಸೇರಿದಂತೆ ಇತರೇ ಕೃಷಿ ಚಟುವಟಿಕೆಗಳಿಗೆ ಮುಂಬರು ಜೂನ್, ಜುಲೈವರಿಗೂ ನೀರು ಹಿಡಿಟ್ಟುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಇಂತಹ ಕ್ಲೀಷ್ಟಕರ ಸಂದರ್ಭದಲ್ಲೂ ನಮ್ಮ ಭಾಗದ ರೈತರ ಭವಣೆ ನೀಗಿಲಸಲು ಸಂಕಷ್ಟದಿಂದ ಪಾರು ಮಾಡು ಸಧ್ಯ ನೀರು ಹರಿಸಲು ತಿರ್ಮಾನಿಸಿದೆ ಎಂದರು. 

ಪೆ,2 ಕ್ಕೆ ಮುದ್ದೇಬಿಹಾಳಕ್ಕೆ ಮುಖ್ಯಮಂತ್ರಿ ಆಗಮನ 

ಮತಕ್ಷೇತ್ರದ ನಾಗರಬೇಟ್ಟ ಏತನೀರಾವರಿ ಯೋಜನೆ ಸಧ್ಯ ಸಂಪೂರ್ಣ ಕಾಮಗಾರಿ ಮುಕ್ತಾಯಗೊಂಡಿದ್ದು ಈ ಹಿನ್ನೇಲೆಯಲ್ಲಿ ಈ ಭಾಗದ ಸುಮಾರ 15ರಿಂದ 16 ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಸಲು ಮುಖ್ಯಮಂತ್ರಿ ಸಿದ್ರಾಮಯ್ಯನವರು ಚಾಲನೆ ನೀಡಲಿದ್ದಾರೆ. ಜೊತೆಗೆ ಕವಡಿಮಟ್ಟಿಯಲ್ಲಿ ಸಂಗೋಳ್ಳಿರಾಯಣ್ಣನವರ ಮೂರ್ತಿ ಅನಾವರಣ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದಲ್ಲಿನ ಸುಮಾರು 200 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ.  

ಬೂದಿಹಾಳ ಪೀರಾಪೂರ ಯೋಜನೆ ನಮ್ಮದು 

ಸಧ್ಯ ಬೂದಿಹಾಳ ಪೀರಾಪೂರ ಯೋಜನೆ ಈ ಹಿಂದೆ 20 17ರಲ್ಲಿ ಎಂಬಿ ಪಾಟೀಲರು ನಿರಾವರಿ ಸಚಿವಾರಾಗಿದ್ದರು ಅಂದೂ ಕೂಡ ಈಗಿನ ಮುಖ್ಯಮಂತ್ರಿ ಸಿದ್ರಾಮಯ್ಯನವರೇ ಉದ್ಘಾಟಿಸಿ ಸುಮಾರು 850 ಕೋಟಿಗಳ ಅನುದಾನವನ್ನು ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದರು.ಮುದ್ದೇಬಿಹಾಳ ಸೇರಿದಂತೆ ಸಿಂದಗಿ, ದೇವರಹಿಪ್ಪರಗಿ ಮತಕ್ಷೇತ್ರಗಳ ಬಹುತೇಕ ನೂರಾರು ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಸಿ ಅನುಕೂಲ ಕಲ್ಪಿಸಲು ಮಹತ್ವಾಕಾಂಕ್ಷೇಯ ಯೋಜನೆ ಇದಾಗಿತ್ತು. ಆದರೇ ಹೆಚ್ಚುವರಿ ಅನುದಾನ ಈ ಹಿಂದಿನ ಬಿಜೆಪಿ ಸರಕಾರ ಕೋಟ್ಟಿದೆ ಅಷ್ಟೇ ಆದರೇ ಅದು ನಾನೇ ಮಾಡಿದ್ದು ಎಂದು ಹೇಳುವುದು ಎಷ್ಟು ಸಮಂಜಸ ಎಂಬುದು ಅರ್ಥೈಸಿಕೊಳ್ಳಬೇಕು. 

ಬಿಜೆಪಿ ಸರಕಾರದ ಆಡಳಿತದಲ್ಲಿ ನಿರಾವರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಸರಕಾರಿ ಇಲಾಖೆಗಳಲ್ಲಿ ಅನುದಾನ ಹಣವೇ ಇಲ್ಲದೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಯಾವೂದೇ ಆಡಳಿತಾತ್ಮಕ ಮಂಜೂರಾತಿ ಇಲ್ಲದೇ ಕಾಮಗಾರಿ ಮಂಜುರಾತಿ ಪಡೆದು ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಲಾಗಿದೆ. ಇದರಿಂದ ಆಸಮಯದಲ್ಲಿ ಕಾಮಗಾರಿ ನಡೆಸಿದ ಅಮಾಯಕ ಗುತ್ತಿಗೆದಾರರು ವಿಧಾನಸೌಧದ ಮುಂದೆ ನಿಂತು ಬಿಲ್ಲಿಗಾಗಿ ಅಲೆಯುವಂತೆ ಮಾಡಿದ್ದು ಯಾರು ಎಂಬುದನ್ನು   ಕಾಮಗಾರಿಗೆ2018 ವಿಧಾನ ಸಭಾ ಚುನಾವಣಾಕ್ಕಿಂತ ಪೂರ್ವದಲ್ಲಿ ಮತಕ್ಷೇತ್ರದಲ್ಲಿ ಝೀರೋ ಬ್ಯಾಲೇನ್ಸ್‌ ಇದ್ದತ್ತು ಎಂದು ಹೇಳುವವರು ತಿಳಿದುಕೊಂಡರೆ ಸಾಕು ಎಂದು ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರಿಗೆ  ಚಾಟಿ ಬೀಸಿದರು.  

524 ಮೀಟರ್ ಎತ್ತರ ಕೇಂದ್ರ ಸರಕಾರ ನಿರ್ಲಕ್ಷ 

ಆಲಮಟ್ಟಿ ಜಲಾಶಯದ ಆಣೆಕಟ್ಟು 524 ಎತ್ತರ ಏರಿಕೆ ಮಾಡುವುದು ಸೂಕ್ತವೆಂದು ಈಗಾಗಲೇ ಕೇಂದ್ರ ಸರಕಾರಕ್ಕೆ ರಾಜ್ಯ ಹಾಗೂ ಕೇಂದ್ರ ತನಿಖಾ ವರದಿ ಸ್ಪಷ್ಟ ವರದಿ ಸಲ್ಲಿಸಿವೆಯಾದರೂ ಕೇಂದ್ರ ಸರಕಾರ ಮಾತ್ರ ರೈತರಿಗೆ ಅನುಕೂಲವಾಗುವ ಆಲಮಟ್ಟಿ ಎತ್ತರದ ವಿಷಯದಲ್ಲಿ ರಾಜಕೀಯ ದುರುದ್ದೇಶದಿಂದ ಮೀನಾಮೇಶ ಎಣಿಸುತ್ತಿದೆ. ಇದರಿಂದ ಈ ಭಾಗದ ಬಹುತೇಕ ಭೂಮಿ ಕಳೇದುಕೊಂಡ ರೈತರು ತೀರಾ ಅನ್ಯಾಯಕ್ಕೊಳಗಾಗುವಂತೆ ಮಾಡಿದೆ. ಕೇಂದ್ರ ಸರಕಾರ ಈ ಕೂಡಲೇ ಅನುಮೋದನೆ ನೀಡಿದರೆ ಅನುಕೂಲವಾಗಲಿದೆ. 

ಈ ವೇಳೆ ಕಾಂಗ್ರೇಸ್ ಹಿರಿಯ ಮುಖಂಡ ರಾಯನಗೌಡ ತಾತರಡ್ಡಿ, ಗುರುಪ್ರಸಾದ ದೇಶಮುಖ, ಮಹಾಂತೇಶ ಗಂಗನಗೌಡ(ಎಂಎಜಿ)ವಿರೇಶ ಗಂಗನಗೌಡರ, ರೈತರಾದ ಶ್ರೀನಿವಾಸ ಕುರಾ​‍್ರ, ರವೀಂದ್ರಬಾಬು ಎಸ್,  ಡಿ ಕಾಸಿಯಾ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ