ಚಿಕ್ಕೋಡಿ

ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 58ನೇ ವಾರ್ಷಿಕ ಸರ್ವ ಸದಸ್ಯರ ಸಭೆ

ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 58ನೇ ವಾರ್ಷಿಕ ಸರ್ವ ಸದಸ್ಯರ ಸಭೆ


ಚಿಕ್ಕೋಡಿ 23:  ಸರಕಾರ ಎಫ್‌ಆರ​‍್ಿ ನಿಗದಿ ಮಾಡುವ ಮಾದರಿಯಲ್ಲಿಯೇ ಸಕ್ಕರೆ ಬೆಲೆಯನ್ನೂ ನಿಗದಿ ಮಾಡಬೇಕು. ಕಳೆದ 15 ವರ್ಷಗಳಿಂದ ಸಕ್ಕರೆ ದರದಲ್ಲಿ ಸಮರ​‍್ಕ ಪರಿಷ್ಕರಣೆ ಆಗಿಲ್ಲ. ರೈತರಿಗೆ ಕಬ್ಬಿಗೆ ಯೋಗ್ಯ ದರ ನೀಡಬೇಕಾದರೆ ಸಕ್ಕರೆ ಬೆಲೆಯನ್ನು ಹೆಚ್ಚಿಸಬೇಕು. ಕಳೆದ 50 ವರ್ಷಗಳಿಂದ ಇರುವ ಸಕ್ಕರೆ ಅಭಿವೃದ್ಧಿ ನಿಧಿಯ ಮೂಲಕ ಸರಕಾರ ರೈತರ ನೆರವಿಗೆ ಬರಬೇಕು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತದ 58ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುವಕರು ಕೃಷಿಯತ್ತ ಮುಖ ಮಾಡಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಸಹಕಾರಿ ಸಕ್ಕರೆ ಕಾರ್ಖಾನೆಗಳು ಉಳಿದು ಬೆಳೆದು ಬರಬೇಕಾದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಬೇಕು. ರೈತರು ಮತ್ತು ಕಾರ್ಖಾನೆಗಳ ನಡುವೆ ಪರಸ್ಪರ ಸಹಕಾರ ಅಗತ್ಯ ಎಂದು ಹೇಳಿದರು.ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಈ ವರ್ಷ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಬ್ಬಿನ ಇಳುವರಿಯಲ್ಲಿಯೂ ಕುಸಿತ ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಲವು ರೈತರ ಜಮೀನುಗಳಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ರೈತರು ತಾವು ಬೆಳೆದ ಕಬ್ಬನ್ನು ಸಂಪೂರ್ಣವಾಗಿ ತಮ್ಮ ಕಾರ್ಖಾನೆಗೆ ಪೂರೈಸಬೇಕು ಎಂದು ಮನವಿ ಮಾಡಿದರು.

ಒಂದು ಎಕರೆ ಕಬ್ಬು ಬೆಳೆಯಲು ರೈತರಿಗೆ ಕನಿಷ್ಠ ?40 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತಿದೆ. ಹೀಗಾಗಿ ರೈತರಿಗೆ ಉತ್ತಮ ಬೆಲೆ ದೊರೆಯಬೇಕು ಎಂಬ ನೀರೀಕ್ಷೆ ಸಹಜ. ಅದೇ ರೀತಿ ಕಾರ್ಖಾನೆಗಳಿಗೂ ರೈತರಿಂದ ನಿರಂತರ ಕಬ್ಬು ಪೂರೈಕೆಯ ಅಗತ್ಯವಿದೆ. ರೈತ ಮತ್ತು ಕಾರ್ಖಾನೆ ಎರಡೂ ಉಳಿದಾಗ ಮಾತ್ರ ಸಕ್ಕರೆ ಉದ್ಯಮ ಸುಸ್ಥಿರವಾಗಿ ಮುಂದುವರಿಯಲು ಸಾಧ್ಯ ಎಂದು ಹೇಳಿದರು.ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆ ಮಹಾಮಂಡಳದ ನಿರ್ದೇಶಕ ಅಮಿತ ಕೋರೆ ಮಾತನಾಡಿ, ಕಾರ್ಖಾನೆಯಲ್ಲಿ ಕಳೆದ ಸಾಲಿನಲ್ಲಿ 10.59 ಲಕ್ಷ ಟನ್ ಕಬ್ಬು ನುರಿಸಲಾಗಿದ್ದು, 8.43 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಸರಾಸರಿ ಸಕ್ಕರೆ ಇಳುವರಿ ಶೇ.11.95ರಷ್ಟಾಗಿದೆ. ಉತ್ಪಾದಿಸಿದ ಸಕ್ಕರೆಯ ಮಾರಾಟದಿಂದ ಪ್ರತಿ ಕ್ವಿಂಟಲ್ಗೆ ಸರಾಸರಿ ?3,838.75 ದರ ದೊರೆತಿದೆ.

ಪ್ರಸ್ತುತ ಕಾರ್ಖಾನೆಯಲ್ಲಿ ಇನ್ನೂ 2 ಲಕ್ಷ ಕ್ವಿಂಟಲ್ ಸಕ್ಕರೆ ದಾಸ್ತಾನು ಇದೆ ಎಂದ ಅವರು ಈ ವರ್ಷ ಸರಕಾರ ನಿಗದಿಪಡಿಸಿದ ಎಫ್‌ಆರ​‍್ಿ ಪ್ರತಿ ಟನ್ಗೆ ?3,069ರಷ್ಟಿತ್ತು. ಆದರೆ ರೈತರಿಗೆ ಎಫ್‌ಆರ​‍್ಿ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಟನ್ಗೆ ?212ರಷ್ಟು ಪಾವತಿಸಲಾಗಿದೆ. ಇದರಿಂದ ಕಾರ್ಖಾನೆಯ ಮೇಲೆ ಸುಮಾರು ?23 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂದು ಹೇಳಿದರು. ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಭರತೇಶ ಬನವಣೆ, ಅಜೀತ ದೇಸಾಯಿ, ಮಹಾವೀರ ಮಿರ್ಜೆ, ಸಂದೀಪ ಪಾಟೀಲ, ಮಲ್ಲಪ್ಪ ಮೈಶಾಳೆ, ಮಹಾವೀರ ಕಾತ್ರಾಳೆ, ಅಣ್ಣಾಸಾಹೇಬ ಇಂಗಳೆ, ವ್ಯವಸ್ಥಾಪಕ ನಿರ್ದೇಶಕ ಡಾ. ಆರ್‌.ಬಿ. ಖಂಡಗಾಂವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಖಾನೆಯ ನಿರ್ದೇಶಕ ಪರಸಗೌಡ ಪಾಟೀಲ ಸ್ವಾಗತಿಸಿದರು. ಚೇತನ ಪಾಟೀಲ ವಂದಿಸಿದರು. ಶಿವಪ್ರಸಾದ ಕೋರೆ ನಿರೂಪಿಸಿದರು. 


ಸುದ್ದಿ ಓದಿ