ಚಿಕ್ಕಲವಾಳ ಗ್ರಾಮದಲ್ಲಿ ರಸ್ತೆ-ಚರಂಡಿ ನಿರ್ಮಾಣಕ್ಕೆ 50 ಲಕ್ಷ ಅನುದಾನ; ಸ್ಥಳೀಯರ ಬಹುಕಾಲದ ಬೇಡಿಕೆ ಈಡೇರಿಕೆ ಹಿ ಕಾಮಗಾರಿಗೆ ಚಾಲನೆ
ಚಿಕ್ಕೋಡಿ 10 : ತಾಲೂಕಿನ ಚಿಕ್ಕಲವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ 50 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್ ಸದಸ್ಯರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಚಿಕ್ಕಲವಾಳ ಗ್ರಾಮದಲ್ಲಿ ಈ ಕಾಮಗಾರಿಗೆ ಅನುದಾನ ದೊರೆತಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಣಿಕ ಪಾಟೀಲ ಅವರು, ಗ್ರಾಮದಲ್ಲಿನ ವಿವಿಧ ವಸಾಹತುಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗಳ ಅಗತ್ಯವಿದ್ದು, ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು.
ಈಗ ಆ ಮನವಿಗೆ ಸ್ಪಂದಿಸಿ ಅನುದಾನ ಮಂಜೂರು ಮಾಡಿರುವುದಾಗಿ ಹೇಳಿದರು.ಇದೇ ರೀತಿ ಚಿಕ್ಕಲವಾಳ-ರಾಂಪುರ ರಸ್ತೆ ಸಂಪರ್ಕಕ್ಕೆ ಸೇತುವೆ ನಿರ್ಮಾಣಕ್ಕೆ ಸುಮಾರು 1.60 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಮರಾಠಾ ಸಮಾಜದ ಭವನ ನಿರ್ಮಾಣಕ್ಕೂ 10 ಲಕ್ಷ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಂಜಯ ಚವಾಣ, ಶಂಕರ ವಡ್ಡರ, ಬಾಬುರಾವ ಪಾಟೀಲ, ನಾರಾಯಣ ಐವಳೆ, ಮಾಜಿ ಗ್ರಾ.ಪಂ ಅಧ್ಯಕ್ಷ ರಾಣಿ ಗಡಕರ, ರಾಮಾ ಗಡಕರ, ಭೀಮಾ ಪೂಜಾರಿ, ಕಲ್ಲಪ್ಪ ಗಡಕರ, ಅಶೋಕ್ ಸಟಾಳೆ, ಲಕ್ಷಣ ಕಾಂಬಳೆ, ಕುಮಾರ ಪಾಟೀಲ, ಶಶಿಕಾಂತ ವಡ್ಡರ, ಸುನೀಲ ಕಾಂಬಳೆ, ರವೀಂದ್ರ ಪಾಟೀಲ, ಶ್ರೀಕಾಂತ ಸಟಾಳೆ, ಪ್ರಕಾಶ ಹುಲ್ಯಾಗೋಳ ಸೇರಿದಂತೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.