ಗಿರಗಾಂವ ಎಸ್ಸಿ ಕಾಲನಿಗಳ ಅಭಿವೃದ್ಧಿಗೆ 45 ಲಕ್ಷ ಅನುದಾನ: ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಹುಕ್ಕೇರಿ ನಾಯಕರು
ಚಿಕ್ಕೋಡಿ 26 : ತಾಲೂಕಿನ ಗಿರಗಾಂವ ಗ್ರಾಮದ ಪರಿಶಿಷ್ಠ ಜಾತಿ ಕಾಲನಿಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ರೂ. 45 ಲಕ್ಷಗಳ ಅನುದಾನ ಮಂಜೂರಾಗಿದ್ದು, ಗ್ರಾಮಸ್ಥರ ಸಮ್ಮುಖದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ರಾವಸಾಬ ಫಕೀರೆ ಹಾಗೂ ಪಪ್ಪು ಪಾಟೀಲ ಮಾತನಾಡಿ, ನಾಯಕರಾದ ಪ್ರಕಾಶ ಬಾ ಹುಕ್ಕೇರಿರವರು ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾಗಿದ್ದು, ಹಾಗೆಯೇ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ಶಾಸಕರಾದ ಗಣೇಶ ಪ್ರ ಹುಕ್ಕೇರಿ ಅವರ ಬಳಿ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ರಸ್ತೆ, ಚರಂಡಿ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.
ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಗಿರಗಾಂವ ಗ್ರಾಮದ ಅಭಿವೃದ್ಧಿಗೆ ರೂ. 45 ಲಕ್ಷಗಳ ಅನುದಾನ ಮಂಜೂರು ಮಾಡಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಾರುತಿ ಕಟ್ಟಿ, ಉಮೇಶ ಪಾಟೀಲ, ಚಿದಾನಂದ ಕಟ್ಟಿ, ಪ್ರವೀಣ ಮಾನೆ, ಸಂಜಯ ಚೌಗಲಾ, ಮಹಾದೇವ ಸನದಿ, ಸಂತೋಷ ಫಕೀರೆ, ಸೌ. ವಿದ್ಯಾ ಯಾದವ, ಸೌ. ವೈಶಾಲಿ ಕಟ್ಟಿ, ಸೌ. ಅಶ್ವಿನಿ ಫಕೀರೆ, ಅಮೋಲ ಚೌಗಲಾ, ರಾವಸಾಬ ಪನಾಸೆ, ರಾಜಗೌಡಾ ಪಾಟೀಲ, ಮಲಗೌಡಾ ಪಾಟೀಲ ಸೇರಿದಂತೆ ಗ್ರಾಮಸ್ಥರು, ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗುತ್ತಿಗೆದಾರ ಅಮೀತ ಹರಗಾಪೂರೆ ಉಪಸ್ಥಿತರಿದ್ದರು.