ಮೂಡಲಗಿ

ದಿ ೪ ರಂದು ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 3ನೇ ಶಾಖೆ ಪ್ರಾರಂಭ

ದಿ ೪ ರಂದು ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 3ನೇ ಶಾಖೆ ಪ್ರಾರಂಭ

ಮೂಡಲಗಿ 03: ಕಲ್ಲೋಳಿ ಪಟ್ಟಣದ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.ಕಲ್ಲೋಳಿ ಇದರ 3 ನೇ ಶಾಖೆಯನ್ನು ಯಾದವಾಡ ಪಟ್ಟಣದಲ್ಲಿ  ಇಂದು ಪ್ರಾರಂಭಗೊಳ್ಳಲಿದೆ. ಡಾ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಬಾಗೋಜಿಕೊಪ್ಪ ಪಟ್ಟದ್ದೇವರು ಸಾನಿಧ್ಯ ವಹಿಸುವರು. 

ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಅಧ್ಯಕ್ಷತೆ ವಹಿಸುವರು. ಸಹಕಾರಿ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಸೇರಿದಂತೆ ಅಡಳಿತ ಮಂಡಳಿಯ ನಿರ್ದೇಶಕರು, ಸಲಹಾ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಸಹಕಾರಿಯ ಹಿರಿಯ ಶಾಖಾ ವ್ಯವಸ್ಥಾಪಕರು ಪ್ರಕಟಣೆಗೆ ತಿಳಿಸಿದ್ದಾರೆ. 


ಸುದ್ದಿ ಓದಿ