ಪದ್ಮಭೂಷಣ, ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ಅವರ 35ನೇ ಪುಣ್ಯಸ್ಮರಣೆ
ಲೋಕದರ್ಶನ ವರದಿ
ಧಾರವಾಡ 21: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ಬರುವ ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಪದ್ಮಭೂಷಣ, ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ಅವರ 35ನೇ ಪುಣ್ಯಸ್ಮರಣೆ ಅಂಗವಾಗಿ ಇಂದು (ಜು.21) ಧಾರವಾಡದ ಹೊಸಯಲ್ಲಾಪುರದಲ್ಲಿರುವ ಪಂ. ಬಸವರಾಜ ರಾಜಗುರು ಅವರ ಸಮಾಧಿ ಸ್ಥಳದಲ್ಲಿ ‘’ಪುಣ್ಯಸ್ಮರಣೆ ಹಾಗೂ ಸಂಗೀತ ನಮನ” ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸದರಿ ಕಾರ್ಯಕ್ರಮವನ್ನು ಪೂಜ್ಯಶ್ರೀ ಶಶಾಂಕ ಸ್ವಾಮೀಜಿ ಹಿರೇಮಠ ಹೊಸಯಲ್ಲಾಪುರ ಧಾರವಾಡ ಅವರು ಪಂ. ಬಸವರಾಜ ರಾಜಗುರು ಅವರ ಮೂರ್ತಿಗೆ ಪೂಜೆ ನೆರವೇರಿಸಿ, ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರಾದ ಪಂ. ಎಂ. ವೆಂಕಟೇಶಕುಮಾರ, ಟ್ರಸ್ಟ್ನ ಅಧ್ಯಕ್ಷರಾದ ಪಂ. ಕೈವಲ್ಯಕುಮಾರ ಗುರವ, ಹಿರಿಯರಾದ ಭಾರತಿದೇವಿ ರಾಜಗುರು, ಹಿರಿಯ ಸಂಗೀತಗಾರರಾದ ಡಾ. ಮುದ್ದುಮೋಹನ ಹಾಗೂ ಟ್ರಸ್ಟ್ನ ಸದಸ್ಯರಾದ ನಿಜಗುಣ ರಾಜಗುರು, ಪಂ. ಸಾತಲಿಂಗಪ್ಪ ದೇಸಾಯಿ (ಕಲ್ಲೂರ), ಛೋಟೆ ರಹಿಮತ ಖಾನ್, ಅಲ್ಲಮಪ್ರಭು ಕಡಕೋಳ, ಡಾ. ಅನೀಲ ಮೇತ್ರಿ, ಸುಪ್ರಿಯಾ ಭಟ್, ಪಂ. ಬಸವರಾಜ ರಾಜಗುರು ಅವರ ಹಿರಿಯ ಶಿಷ್ಯರಾದ ವಿದುಷಿ ಪೂರ್ಣಿಮಾ ಭಟ್, ಡಾ. ಶಾಂತಾರಾಂ ಹೆಗಡೆ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಅನುರಾಗ ಸಾಂಸ್ಕೃತಿಕ ಕಲಾಬಳಗ, ಧಾರವಾಡ ಅವರಿಂದ ಸಂಗೀತ ನಮನ ಜರುಗಿತು.