ಮೂಡಲಗಿ

ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಸೊಸೈಟಿಗೆ 3.35 ಕೋಟಿ ಲಾಭ

ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಸೊಸೈಟಿಗೆ 3.35 ಕೋಟಿ ಲಾಭ

ಮೂಡಲಗಿ 28: ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಸೊಸೈಟಿಯು 3.35 ಕೋಟಿ ಲಾಭ ಗಳಿಸಿ ಸಂಘವು ಪ್ರಗತಿ ಪಥದತ್ತ ಸಾಗಿದೆ. ಇದು ನಮ್ಮ ಸಂಸ್ಥೆಯ ಮೇಲೆ ಶೇರುದಾರರು ಮತ್ತು ಠೇವಣಿದಾರ ನಂಬಿಕೆಯನ್ನು ಇಮ್ಮಡಿಗೊಳಿಸಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ಬಸವರಾಜ ತೇಲಿ ಹೇಳಿದರು.  

ಸೋಮವಾರ ಶ್ರೀ ಬಸವೇಶ್ವರ ಅರ್ಬನ ಕೋ ಆಪ್ ಕ್ರೆಡಿಟ ಸೊಸಾಯಿಟಿಯ ಸಭಾ ಭವನದಲ್ಲಿ 26ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಧಾನ ಕಚೇರಿಯ ಸುಸಜ್ಜಿತ ಕಟ್ಟಡ ಹೊಂದಿ 15 ಶಾಖೆಗಳನ್ನು ಹೊಂದಿದೆ ಎಲ್ಲಾ ಶಾಖೆಗಳು ಪ್ರಗತಿ ಪಥದಲ್ಲಿ ಮುನ್ನುಗ್ಗುತ್ತಿವೆ ಎಂದರು. 

ಎಸ್‌ಎಸ್‌ಆರ್ ಕಾಲೇಜಿನ ಪ್ರೋ.ಜಿ.ವಿ.ನಾಗರಾಜ ಉಪನ್ಯಾಸ ನೀಡಿದರು.   

ವೇದಿಕೆಯ ಮೇಲೆ ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಡವಳೇಶ್ವರ, ಯುನಿಯನ್ ಬ್ಯಾಂಕ್ ಸದಸ್ಯ ವರ್ಧಮಾನ ಬೋಳಿ, ಶಾಖಾ ಸಮಿತಿಗಳ ಅದ್ಯಕ್ಷರಾದ ಶಂಕರ ಮುಗಳಖೋಡ, ಮೋಹನ ಹಾದಿಮನಿ, ಜಗದೀಶ ಚಿಕ್ಕೋಡಿ, ಷನ್ಮುಖ ತೇರದಾಳ, ಅಶೋಖ ಅವಟಿಮಠ, ಅರ್ಜುನ ಅಂದಾನಿ, ಚಂದ್ರಶೇಖರ ಬಾಳಿ, ಶ್ರೀಶೈಲ ಹಿಪ್ಪರಗಿ, ಉಪಾಧ್ಯಕ್ಷ  ಗೀರೀಶ ಢವಳೇಶ್ವರ, ಶ್ರೀಕಾಂತ ಹಿರೇಮಠ, ಶ್ರೀಶೈಲ್ ಮದಗನ್ನವರ, ರವೀಂದ್ರ ಬಾಗೋಜಿ, ಮಲ್ಲು ಢವಳೇಶ್ವರ, ಡಿ.ಎಫ್‌.ಕೌಜಲಗಿ ಉಪಸ್ಥಿತರಿದ್ದರು.   

ನಿರ್ದೇಶಕ ಚನಬಸು ಬಡ್ಡಿ ವರದಿವಾಚನ, ಪ್ರಶಾಂತ ಡವಳೇಶ್ವರ ಲಾಭ ವಿಂಗಡನೆ, ಅಢಾವೆ ಮಹಾದೇವ ಶಿಳನ್ನವರ, ಅಂದಾಜು ಲಾಭಹಾನಿ ನಾಗೇಶ ಕುಲಕರ್ಣಿ ಮಂಡಿಸಿದರು. 

ಮಲ್ಲಿಕಾರ್ಜುನ ಡವಳೇಶ್ವರ ಸ್ವಾಗತಿಸಿದರು, ಪ್ರಧಾನ ವವ್ಯಸ್ಥಾಪಕ ಬಸವರಾಜ ಬಡಿಗೇರ ನಿರೂಪಿಸಿದರು, ಶಿವಾನಂದ ಮರಾಠೆ ವಂದಿಸಿದರು. 


ಸುದ್ದಿ ಓದಿ