ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 3.0ತರಬೇತಿ ಬಹಿಷ್ಕಾರ: ತಾಲೂಕು ಅಧ್ಯಕ್ಷ ಹನುಮಂತಪ್ಪ
ಲೋಕದರ್ಶನ ವರದಿ
ಕಂಪ್ಲಿ 04: ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಶೀಘ್ರದಲ್ಲಿ ಪರಿಹರಿಸಿ ಒತ್ತಾಯಿಸಿ ನಿಷ್ಠಾ ಸೇರಿ ಎಲ್ಲ ರೀತಿಯ 3.0ತರಬೇತಿಗಳನ್ನು ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಹೇಳಿದರು.
ಹೊಸಪೇಟೆಯಲ್ಲಿ ಬಿಇಒ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಟಿ.ಗೀರೀಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ, 2017ರ ನೇಮಕಾತಿ ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಒಂದರಿಂದ ಎಂಟನೇತರಗತಿತನಕ ಬೋಧಿಸುತ್ತಿದ್ದು, ಕೇವಲ ಐದನೇ ತರಗತಿತನಕ ಸೀಮಿತಗೊಳಿಸಿದೆ. ಮೂರು ತಿಂಗಳೊಳಗಾಗಿ ಸಮಸ್ಯೆ ಪರಿಹರಿಸಿ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು 6ರಿಂದ 8ನೇತರಗತಿತನಕ ವೀಲೀನ ನಿಷ್ಠಾ 3.0 ತರಬೇತಿಗೆ ಲಾಗಿನ್ ಆಗದೆ ತರಬೇತಿಯನ್ನು ಹಾಗೂ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಎಲ್ಲಾ ತರಬೇತಿಗಳನ್ನು ಬಹಿಷ್ಕರಿಸಲಾಗುವುದು ಎಂದರು ಮನವಿ ಸಲ್ಲಿಸುವಲ್ಲಿ ಪದಾಧಿಕಾರಿಗಳಾದ ಕೋಳಿ ಸೋಮಶೇಖರ್, ಸುನೀತಾ ಪೂಜಾರ್, ಎಚ್.ಜಡೆಪ್ಪ, ಮುನಿಯಾನಾಯ್ಕ, ನಾಗರಾಜ್ ನಾಯ್ಕ, ಹೊಸಪೇಟೆ ತಾಲೂಕು ಅಧ್ಯಕ್ಷ ಮಾರ್ಗದಪ್ಪ, ಪದಾಧಿಕಾರಿಗಳಾದ ಮಲ್ಲಯ್ಯ, ಕುಬೇರ ಆಚಾರಿ, ಬಸವರಾಜ್, ಕಡ್ಲಿ ವೀರಭದ್ರಯ್ಯ, ಗುರುಬಸವರಾಜ ಇತರರಿದ್ದರು.