ಮಹಾರಾಷ್ಟ್ರದಲ್ಲಿ ಮೀಸಲಾತಿ ಕಿಚ್ಚಿಗೆ ರಾಜ್ಯದ 2 ಬಸ್ಸಿಗೆ ಬೆಂಕಿ : ಒಟ್ಟು 6 ವಾಹನಗಳು ಬೆಂಕಿಗೆ ಆಹುತಿ, ಪೊಲೀಸರಿಂದ ಲಾಠಿ ಚಾರ್ಜ್

ಮಹಾರಾಷ್ಟ್ರದಲ್ಲಿ ಮೀಸಲಾತಿ ಕಿಚ್ಚಿಗೆ ರಾಜ್ಯದ 2 ಬಸ್ಸಿಗೆ ಬೆಂಕಿ : ಒಟ್ಟು 6 ವಾಹನಗಳು ಬೆಂಕಿಗೆ ಆಹುತಿ, ಪೊಲೀಸರಿಂದ ಲಾಠಿ ಚಾರ್ಜ್

ಬೆಳಗಾವಿ : ಮರಾಠಾ ಮೀಸಲಾತಿ ಹೋರಾಟವು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕಲ್ಲು ತೂರಾಟದಲ್ಲಿ ನೂರಾರು ಜನರು ಗಾಯಗೊಂಡಿದ್ದು, ಉದ್ವಿಕ್ತರಿಂದ ಕರ್ನಾಟಕದ 2 ಬಸ್ಸ ಸೇರಿ ಒಟ್ಟು ಆರು ವಾಹನಗಳಿಗೆ ಬೆಂಕಿ ಹಚ್ವಲಾಗಿದೆ. ಇದರಿಂದ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. 


    ನೆರೆಯ ಮಹಾರಾಷ್ಟ್ರದ ಜಾಲನಾ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮರಾಠಾ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟವು ವಿಕೋಪಕ್ಕೆ ತಲುಪಿದ ಹಿನ್ನೆಲೆ ಕೆಲ ಕಿಡಿಗೇಡಿಗಳು ಬಸ್ ಗಳ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ವಿಭಾಗದ ಒಂದು ಬಸ್ಸು ಸೇರಿದಂತೆ ಒಟ್ಟು 6 ವಾಹನಗಳಿಗೆ ಬೆಂಕಿ ಹಚ್ವಲಾಗಿದೆ.

   ಕಳೆದ ನಾಲ್ಕು ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ಇಂದು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ. ಧುಳೆ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದ ಹೋರಾಟಗಾರು, ಜಾಲನಾ ಜಿಲ್ಲೆಯ ಶಹಘಡ ಬಳಿ ಹೋರಾಟಗಾರರನ್ನು ನಿಯಂತ್ರಿಸಲು ಮಹಾರಾಷ್ಟ್ರದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.


   ಬಳಿಕ ಹೆದ್ದಾರಿ ಮೇಲೆ ಸಂಚಾರ ಮಾಡುತ್ತಿದ್ದ ಆರು ಬಸ್‌ಗೆ ಉದ್ರಿಕ್ತ ರು ಬೆಂಕಿ ಇಟ್ಟರು. ಕರ್ನಾಟಕ ಸಾರಿಗೆ ಬಸ್ ಕೂಡ ಬೆಂಕಿಗೆ ಆಹುತಿಯಾಗಿ ಕೆಲ ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಔರಾಂಗಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್‌ನಲ್ಲಿ 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್‌ನ ಚಾಲಕ ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಲಮಾಣಿ ಎಂದು ಹೇಳಲಾಗುತ್ತಿದೆ. ಈ ಘಟನೆಯಲ್ಲಿ ನೂರಾರು ಜನರಿಗೆ ಗಾಯಗಳಾಗಿವೆ. ಘಟನೆಯಿಂದ ಮಹಾರಾಷ್ಟ್ರರ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಯಾಗಿದೆ.

ಸುದ್ದಿ ಓದಿ