ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಽ ರೈತನಿಗೆ 2.05 ಲಕ್ಷರೂ ಲಾಭ

ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಽ ರೈತನಿಗೆ 2.05 ಲಕ್ಷರೂ ಲಾಭ

ಕೊತ್ತಂಬರಿ ಬೆಳೆದು ಬೀಗಿದ ರೈತ  

ಸಂತೋಷ್ ಕುಮಾರ್ ಕಾಮತ್ 

ಮಾಂಜರಿ 07:  ಸಮೀಪದ ಕೇರೂರ ಗ್ರಾಮದ ರೈತ  ಅಪ್ಪಾಸಾಬ ರಂದಾಳೆ ಅವರು, ಒಂದು ಎಕರೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು 2.05 ಲಕ್ಷರೂ ಲಾಭಗಳಿಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಪ್ಪಾಸಾಬ ಅವರಿಗೆ 8 ಎಕರೆ ಜಮೀನಿದೆ. 7 ಎಕರೆಯಲ್ಲಿ ಕಬ್ಬು ಬೆಳೆದಿದ್ದು, ಽ ಎಕರೆಯಲ್ಲಿ ಕೊತ್ತಂಬರಿ ಬೀಜ ಬಿತ್ತಿದ್ದರು. ಹದ ಮಳೆ ಸುರಿದಿದ್ದರಿಂದ ಉತ್ತಮ ಇಳುವರಿ ಬಂದಿದೆ. ಕೊತ್ತಂಬರಿ ಸೊಪ್ಪಿನ ದರ ಏರಿಕೆಯಿಂದಾಗಿ ಕೈತುಂಬ ಲಾಭವೂ ಸಿಕ್ಕಿದೆ. ಕಿಲೊಗೆ 370 ರೂ ದರದಲ್ಲಿ ಅಶೋಕ ತಳಿಯ 60 ಕೆ.ಜಿ ಕೊತ್ತಂಬರಿ ಬೀಜಗಳನ್ನು ಖರೀದಿಸಿ ಬಿತ್ತಿದ್ದರು. ಒಮ್ಮೆಯಷ್ಟೇ ರಸಗೊಬ್ಬರ ಹಾಕಿ ಎರಡು ಬಾರಿ ರಾಸಾಯನಿಕ ಸಿಂಪಡಿಸಿದ್ದರು. ಆಗಾಗ್ಗೆ ನೀರುಣಿಸಿ, ಕಳೆ ತೆಗೆದು ಬೆಳೆ ಜತನ ಮಾಡಿದ್ದರು. ಮಳೆ ಮತ್ತು ಹವಾಗುಣಕ್ಕೆ ಕೊತ್ತಂಬರಿ ಸೊಪ್ಪು ಹುಲುಸಾಗಿ ಬೆಳೆದಿದೆ.  

ರೈತ ಅಪ್ಪಾಸಾಬ ರೇಂದಾಳೆ ಅವರ ಹೊಲದಲ್ಲಿ ಬೆಳದಿರುವ ಕೊತ್ತಂಬರಿ ಸೊಪ್ಪು ನೋಡಿದ ವರ್ತಕರೊಬ್ಬರು 2.50 ಲಕ್ಷಕ್ಕೆ ಎಲ್ಲವನ್ನೂ ಗುತ್ತಿಗೆಪಡೆದಿದ್ದಾರೆ. ಇದರಿಂದ ಅಪ್ಪಾಸಾಬ ಅವರಿಗೆ ಕೂಲಿಯಾಳು, ಸಾಗಣೆ ಮತ್ತು ಮಾರುಕಟ್ಟೆ ವೆಚ್ಚ ಉಳಿದಿದೆ. ತಿಂಗಳಿನಲ್ಲಿ ಕಟಾವಿಗೆ ಬೆಳಗ್ಗೆ 45. ಸಾವಿರ ವೆಚ್ಚ ಮಾಡಿದ್ದಾರೆ.  

ಕೊತ್ತಂಬರಿ ಸೊಪ್ಪು ಖರೀದಿಸಿ ಎಂಟು ಕೂಲಿಯಾಳ ನೆರವಿನಿಂದ ಕಟಾವು ಮಾಡಿ ಮುಂಬಯಿಗೆ ಸಾಗಿಸಿದ್ದೇನೆ, ಬೆಳಗಾವಿ ಮತ್ತು ಚಿಕ್ಕೋಡಿ ಮಾರುಕಟ್ಟೆಯಲ್ಲಿ ಒಂದು ಕೊತ್ತಂಬರಿ ಸೊಪ್ಪಿನ ದರ 20 ಇದ್ದರೆ, ಮುಂಬೈನಲ್ಲಿ 30 ರೂ ಹೆಚ್ಚಿದೆ. ಉತ್ತಮ ಮಾರಾಟದಿಂದ ಹೆಚ್ಚಿನ ಲಾಭ ಬರುವ ನೀರೀಕ್ಷೆಯಿದೆ ಎಂದು ವ್ಯಾಪಾರಿ ರಮೇಶ ಮಲ್ಲಾಪುರ ತಿಳಿಸಿದ್ದಾರೆ.  

ರೈ ತರು ಹೊಲದಲ್ಲಿ  ಸತತ ಒಂದೆ ಬೇಳೆ ಬೆಳೆಯುವುದರಿಂದ ಇಳುವರಿ ಕುಸಿಯುತ್ತದೆ. ಅದಕ್ಕಾಗಿ ಹೊಸ ಪ್ರಯೋಗ ಏಕೆ ಮಾಡಬಾರದು ಎಂಬ ಉದ್ದೇಶದಿಂದ ಕೊತ್ತಂಬರಿ ಸೊಪ್ಪು ಬೆಳೆದು ಲಾಭಗಳಿದ್ದೇನೆ. ಎಲ್ಲ ರೈತರೂ ಬಹು ಬೆಳೆಯತ್ತ ಆಸಕ್ತಿ ವಹಿಸಿದರೆ ಲಾಭ ನಿಶ್ಚಿತ.  

" ಅಪ್ಪಾಸಾಹೇಬ ರೇಂದಾಳೆ, ರೈತ 


ಸುದ್ದಿ ಓದಿ