ಸಂಕೇಶ್ವರ ಸ್ವಚ್ಚತಾ ಅಭಿಯಾನಕ್ಕೆ 17ರಂದು ಸಮಾರೋಪ, 2ನೇ ಹಂತದ ಪ್ರಾರಂಭೋತ್ಸವ
ಸಂಕೇಶ್ವರ : ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ಸಂಕೇಶ್ವರ ಸ್ವಚ್ಚತಾ ಅಭಿಯಾನವು 25 ವಾರ ಪೂರೈಸಿದ್ದು, ಬರುವ 17ರಂದು ಸಮಾರೋಪ ಹಾಗೂ ಎರಡನೇ ಹಂತ ಪ್ರಾರಂಭೋತ್ಸವ ನಡೆಯಲಿದೆ ಎಂದು ಅಭಿಯಾನದ ಸದಸ್ಯರು ಇಂದಿಲ್ಲಿ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಡಾ. ಗುರುಪಾದ ಮರಿಗುದ್ದಿ ಅವರು ಮಾತನಾಡಿ, ಇದೆ ಮಾರ್ಚ 17ರಂದು ಬೆಳಿಗ್ಗೆ 8 ಗಂಟೆಗೆ ಸಂಕೇಶ್ವರದ ಹಳೆ ಪಿಬಿ ರಸ್ತೆಯ ಪಕ್ಕದಲ್ಲಿನ ತರಕಾರಿ ಮಾರುಕಟ್ಟೆ ಬಳಿ ಸಂಕೇಶ್ವರ ಸ್ವಚ್ಚತಾ ಅಭಿಯಾನದ ಸಮಾರೋಪ ಸಮಾರಂಭ ಹಾಗೂ 2ನೇ ಹಂತದ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಡಾ. ಮಾಧವ್ ಪ್ರಭು, ಸಂಗಮೇಶ ನಿರಾಣಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.
ಸ್ವಚ್ಛ ಸಂಕೇಶ್ವರ 25 ಅಭಿಯಾನ ಪೂರೈಸಿದೆ ದೇವಾಲಯ ಹಿರಣ್ಯ ಕೇಶಿ ನದಿ ಹೀಗೆ ನಗರದ ರಸ್ತೆಗಳಲ್ಲಿ 24 ವಾರ ಪೂರ್ತಿ ಮಾಡಲಾಗಿದೆ. 2ನೇ ಹಂತಕ್ಕೆ ಸ್ವಚ್ಛ ಸಂಕೇಶ್ವರ ಫೌಂಡೇಶನ್ ಸ್ಥಾಪನೆ ಮಾಡಲಾಗಿದೆ. ಅದರ ಅಡಿಯಲ್ಲಿ ಈ ಶ್ರಮದಾನ ನಡೆಯಲಿದೆ. ಮಳೆಗಾಲದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಗೆ ಸ್ವಚ್ಚತಾ ಬಗ್ಗೆ ತಿಳವಳಿಕೆ ಪ್ರಭಂದ, ಭಾಷಣ ಸ್ಪರ್ಧೆ ಹೀಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮನೆಗಳಲ್ಲಿ ಕಸವನ್ನು ಮಡಿಕೆಗೆ ಹಾಕಿ ಗೊಬ್ಬರ ಮಾಡುವ ವಿಧಾನದ ಬಗ್ಗೆ ಪ್ರಯೋಗ ಮಾಡಲು ನಾಗರಿಕರಿಗೆ ತಿಳವಳಿಕೆ ನೀಡುವ ಪ್ರಯತ್ನ ಮಾಡುವ ಉದ್ದೇಶ ಹೊಂದಲಾಗಿದೆ. ಇದನ್ನು ಈಗಾಗಲೇ ನಿಡಸೋಸಿಯಲ್ಲಿ ಮಾಡಲಾಗುತ್ತಿದೆ. ಇದರ ಗೊಬ್ಬರವು ಬಹಳ ಉಪಯುಕ್ತ ಇದೆ ಎಂದರು.
ಅದೇ ರೀತಿ ಹಳೆ ಪಿಬಿ ರಸ್ತೆ ಹಾಗೂ ವಿಭಜಕದ ಸೌಂದರ್ಯಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಕಿರು ಅರಣ್ಯ ಬೆಳೆಸುವ ಉದ್ದೇಶ ಹೊಂದಲಾಗಿದೆ. ಬರುವ ಜೂನ್‌ನಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ಕಾಲೇಜು ಕ್ಯಾಂಪಸ್ ನಲ್ಲಿ ಎರಡನೇ ಹಂತದಲ್ಲಿ ಸ್ವಚ್ಚತಾ ಮಾಡುವ ಗುರಿ ಹೊಂದಲಾಗಿದೆ. ಮೂರನೆಯ ಹಂತದಲ್ಲಿ ಹಳ್ಳಿಗಳಿಗೂ ಈ ಅಭಿಯಾನ ವಿಸ್ತರಣೆ ಮಾಡಲು ಉದ್ದೇಶ ಹೊಂದಲಾಗಿದೆ ಎಂದರು.
ಇದೇ ವೇಳೆ ಡಾ. ರಮೇಶ ದೊಡ್ಡಬಂಗಿ, ಸುನಿಲ್ ಪರ್ವತರಾವ್ ಮಾತನಾಡಿ, ಸಂಕೇಶ್ವರ ಸ್ವಚ್ಚತೆ ಬಗ್ಗೆ ಒಂದು ಆಶಾಭಾವನೆ ಇಟ್ಟುಕೊಂಡು ಸ್ವಚ್ಚತಾ ಅಭಿಯಾನ ಪ್ರಾರಂಭಿಸಲಾಗಿತ್ತು. ಅದು ಇಂದು ಪಟ್ಟಣದ ನಾಗರಿಕರ ಹಾಗೂ ಪುರಸಭಾ ಅಧಿಕಾರಿಗಳ, ಸಿಬ್ಬಂದಿಯ ಸಹಕಾರದಿಂದ 24 ವಾರ ಪೂರ್ಣಗೊಂಡು ಎರಡನೇ ಹಂತಕ್ಕೆ ಬಂದು ಮುಟ್ಟಿದ್ದೇವೆ ಎಂದರು. ಜನರಿಗೆ ಕಸ ನಿರ್ವಹಣೆ ಹಾಗೂ ಕಸ ಎಸೆಯದಂತೆ ತಿಳವಳಿಕೆ ನೀಡುವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ನುಡಿದರು.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಗಜಾನನ ಕ್ವಳ್ಳಿ, ನಾಶೀರ್ ಮೋಮಿನ್, ಡಾ. ಶಿವಾನಂದ ಮುಡಸಿ, ಡಾ. ವಿನೋದ ಗಾಯಕವಾಡ, ಮಲ್ಲಿಕಾರ್ಜುನ ಪಟ್ಟಶೆಟ್ಟಿ, ರೋಹನ ನೇಸರಿ, ಸಂತೋಷ ನೇಸರಿ, ಪ್ರಿಯಾಂಕಾ ಗಡಕರಿ, ವಿಜಯಲಕ್ಷ್ಮಿ ಬೆಳವಿ ಉಪಸ್ಥಿತರಿದ್ದರು.