ಬಳ್ಳಾರಿ

ಶ್ರೇಷ್ಠ ನಟ ಬಳ್ಳಾರಿ ರಾಘವರ 144ನೇ ಜಯಂತಿ

ಶ್ರೇಷ್ಠ ನಟ ಬಳ್ಳಾರಿ ರಾಘವರ 144ನೇ ಜಯಂತಿ

ಬಳ್ಳಾರಿ 02: ಜಗದ್ವಿಖ್ಯಾತ ಮೇರು ಕಲಾವಿದ, ಕನ್ನಡ ತೆಲುಗು ಉಭಯ ಕಲಾ ವಿಶಾರದ, ಇಂಗ್ಲೀಷ್ ಖ್ಯಾತ ಕಾದಂಬರಿಕಾರ ಶೇಕ್ಸ್ಪಿಯರ್ ನಾಟಕಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದ ಅಪ್ರತಿಮ ಶ್ರೇಷ್ಠ ನಟ ಬಳ್ಳಾರಿ ರಾಘವರ 144ನೇ ಜಯಂತಿಯನ್ನು ಅತ್ಯಂತ ಅದ್ದೂರಿಯಿಂದ ಆಚರಿಸಲಾಯಿತು. ಬಳ್ಳಾರಿಯ ಹೃದಯ ಭಾಗವಾದ ರಾಯಲ್ ವೃತ್ತದಲ್ಲಿ ಜಿಲ್ಲಾಡಳಿತ ಮತ್ತು ನಗರಾಡಳಿತದ ಸಹಯೋಗದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಘವಾಚಾರ್ಯರ ಪುತ್ಥಳಿಗೆ ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಸರ್ವ ಪದಾಧಿಕಾರಿಗಳು ಪಷ್ಪಾರ್ಚನೆ ಸಲ್ಲಿಸಿ ಅವರ ಕಲಾ ಸಾಧನೆಗಳನ್ನು ಮೆಲುಕು ಹಾಕಿದರು.  

ಅಭಿಮಾನಿಗಳು ಮತ್ತು ರಾಘವರ ಕಲಾಭಿಮಾನಿಗಳು 144 ನೇ ಜಯಂತೋತ್ಸವವನ್ನು ಆಚರಿಸಿ ಗೌರವ ಪುಷ್ಪ ನಮನಗಳನ್ನು ಸಲ್ಲಿಸಿದರು. ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ ರಾವ್, ಉಪಾಧ್ಯಕ್ಷರದ ಡಾ.ಶ್ರೀನಾಥ್, ಒಕ್ಕೂಟದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರಾದ ಡಿ. ಗಿರಿ, ದೇಸಾಯಿ ಸತೀಶ್, ಗಿರಿ ಸಿಮೆಂಟ್, ಹನುಮಂತಚಾರ್, ಪ್ರದೀಪ್, ಉದಯ ಕುಮಾರ್, ಕೃಷ್ಣಮೂರ್ತಿ, ರಾಘವೇಂದ್ರ ಮೋಹನ್, ನಾಗಭೂಷಣ್, ನರಸಿಂಹ, ಬಜಾರದ ಹರಿಪ್ರಸಾದ್, ರವೀಂದ್ರನಥ್ ಇನ್ನಿತರರು ಇದ್ದರು. 


ಸುದ್ದಿ ಓದಿ