ಬಳ್ಳಾರಿ

13.8 ಟನ್ ಪ್ಲಾಸ್ಟಿಕ್ ಜಿಂದಾಲ್ ಸಿಮೆಂಟ್ ಕಾರ್ಖಾನೆಗೆ ರವಾನೆ

13.8 ಟನ್ ಪ್ಲಾಸ್ಟಿಕ್ ಜಿಂದಾಲ್ ಸಿಮೆಂಟ್ ಕಾರ್ಖಾನೆಗೆ ರವಾನೆ

ಬಳ್ಳಾರಿ 26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಭಾರತ ಸರ್ಕಾರದ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಅ.2ರಿಂದ ಅ.31ರವರೆಗೆ ಹಮ್ಮಿಕೊಂಡಿದ್ದ ವಿಶೇಷ ಸ್ವಚ್ಛ ಭಾರತ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಸಂಗ್ರಹ ಕಾರ್ಯಕ್ರಮದಡಿ ಬಳ್ಳಾರಿ ಜಿಲ್ಲೆಯಲ್ಲಿ 13.8 ಟನ್ ಪ್ಲಾಸ್ಟಿಕ್ ಸಂಗ್ರಹಿಸಲಾಗಿತ್ತು.

ಈ 13.8 ಟನ್ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತು ಮರುಬಳಕೆಯಾಗದ ಪ್ಲಾಸ್ಟಿಕ್ ವಸ್ತುಗಳನ್ನು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛಭಾರತ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಜೆಎಸ್‍ಡಬ್ಲ್ಯೂ ಸಿಮೆಂಟ್ ಕಾರ್ಖಾನೆಗೆ ಕಳುಹಿಸಿಕೊಟ್ಟರು.

ಬಳ್ಳಾರಿ ಜಿಲ್ಲೆಯಲ್ಲಿ 13,797 ಟನ್(ಜೆಎಸ್‍ಡಬ್ಲ್ಯೂ ಫೌಂಡೆಶನ್‍ನಿಂದ ಸಂಗ್ರಹಿಸಿದ 3.5ಟನ್ ಪ್ಲಾಸ್ಟಿಕ್ ಸೇರಿ)ಪ್ಲಾಸ್ಟಿಕ್‍ಗಳನ್ನು ತುಂಬಿದ ವಾಹನಗಳಿಗೆ ಡಿಸಿ ಪವನಕುಮಾರ್ ಮಾಲಪಾಟಿ ಅವರು ಹಸಿರು ನಿಶಾನೆ ನೀಡುವುದರ ಮೂಲಕ ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ವiಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ನೆಹರು ಯುವ ಕೇಂದ್ರದ ಜಿಲ್ಲಾಯುವ ಅಧಿಕಾರಿ ಮೊಂಟು ಪಾತರ್ ಮತ್ತಿತರರು ಇದ್ದರು.

ಸುದ್ದಿ ಓದಿ