ಚಿಕ್ಕೋಡಿ

ಖಡಕಲಾಟ ಗ್ರಾಪಂ ವ್ಯಾಪ್ತಿಯಲ್ಲಿ 60 ಲಕ್ಷ ವೆಚ್ಚದಲ್ಲಿ 12 ಕೊಳವೆಬಾವಿ: ಶಾಸಕ ಗಣೇಶ ಹುಕ್ಕೇರಿ

ಖಡಕಲಾಟ ಗ್ರಾಪಂ ವ್ಯಾಪ್ತಿಯಲ್ಲಿ 60 ಲಕ್ಷ ವೆಚ್ಚದಲ್ಲಿ 12 ಕೊಳವೆಬಾವಿ: ಶಾಸಕ ಗಣೇಶ ಹುಕ್ಕೇರಿ
12 borewells to be drilled at a cost of ₹60 lakh in Khadakalat Gram Panchayat limits: MLA Ganesh Huk


ಚಿಕ್ಕೋಡಿ 03: ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಖಡಕಲಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 60 ಲಕ್ಷ ಅನುದಾನದಲ್ಲಿ 12 ಕೊಳವೆಬಾವಿಗಳನ್ನು ಕೊರೆಸಿ, ವಿದ್ಯುದೀಕರಣ ಹಾಗೂ ಪಂಪ್ಸೆಟ್ ಮೋಟಾರ್ ಅಳವಡಿಸುವ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಅನುದಾನ ಒದಗಿಸಲಾಗಿದ್ದು, ಖಡಕಲಾಟ ಗ್ರಾಮದ ವಿವಿಧ ಬಡಾವಣೆಗಳು ಹಾಗೂ ಮನೂಚಿವಾಡಿ ಗ್ರಾಮದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಇದರಿಂದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಬಾಳು ಮಾಮಾ ದೇವಸ್ಥಾನ, ಪುಠಾಣವಾಡಿ, ಹೆಗ್ಗಣ್ಣಾ ತೋಟ, ಬರುವಾಳವೆ ಗಲ್ಲಿ, ಅಂಕಲೆ ಗಲ್ಲಿ, ಸಂಕೇಶ್ವರ ಗಲ್ಲಿ, ಕಮತೆ ಗಲ್ಲಿ, ಕುಂಬಾರ ಗಲ್ಲಿ, ಅಂಬೇಡ್ಕರ್ ನಗರ, ಪಂಚಶೀಲ ನಗರ, ವಡ್ಡರ ಗಲ್ಲಿ ಹಾಗೂ ಮನೂಚಿವಾಡಿ ಗ್ರಾಮದ ನೀರಿನ ಟ್ಯಾಂಕ್ ಬಳಿ ಕೊಳವೆಬಾವಿ ಕೊರೆಸಿ ಪಂಪ್ಸೆಟ್ ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಮುಖಂಡರಾದ ಸತೀಶ ಪಾಟೀಲ, ರಾಕೇಶ ಚಿಂಚಣೆ, ನಾಸರ ತಹಶೀಲ್ದಾರ, ಪ್ರವೀಣ ಪಾಟೀಲ, ರಮೇಶ ಪಾಟೀಲ ಸೇರಿದಂತೆ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ