ಶಿಗ್ಗಾವ್

ಶಿಗ್ಗಾವಿಗೆ 100 ಕೋಟಿರೂ ವಿಶೇಷ ಅನುದಾನ

ಶಿಗ್ಗಾವಿಗೆ 100 ಕೋಟಿರೂ ವಿಶೇಷ ಅನುದಾನ

ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ತಕ್ಷಣ ಕ್ರಮಕ್ಕೆ ಸೂಚನೆ  

ಶಿಗ್ಗಾವಿ 09: ರಾಜ್ಯ ಸರ್ಕಾರ ಶಿಗ್ಗಾವಿ ತಾಲೂಕಿಗೆ ನೂರುಕೋಟಿರೂ. ವಿಶೇಷಅನುದಾನ ಮಂಜೂರು ಮಾಡಿದೆಎಂದುಜಿಲ್ಲಾಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. 

ಜನಸ್ಪಂದನ ಸಭೆಯಲ್ಲಿ ನಾಗರಿಕ ಸೌಲಭ್ಯಕೊರತೆ ದೂರುಗಳು ಅಧಿಕವಾಗಿದ್ದು, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ವಿಶೇಷಅನುದಾನ ಬಿಡುಗಡೆ ಮಾಡಬೇಕು ಎಂಬ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ನೂರುಕೋಟಿರೂ ಮಂಜೂರು ಮಾಡಿದ್ದಾರೆಎಂದುಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದಸ್ವೀಕರಿಸಿದ  ಅಹವಾಲುಗಳನ್ನು ಪರೀಶೀಲಿಸಿ ತಕ್ಷಣಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.  

ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ: ಗ್ರಾಮಸ್ಥರ ಬೇಡಿಕೆಯಂತೆ ಶಿಗ್ಗಾವಿ ತಾಲೂಕಿನ ಬಿಸಲಹಳ್ಳಿ ಗ್ರಾಮಕ್ಕೆಕೆಎಸ್‌ಆರ್‌ಟಿಸಿಬಸ್ ನಿಲುಗಡೆ ಸೌಕರ್ಯಕಲ್ಪಿಸಲಾಗಿದೆ. ಹಾನಗಲ್ ಮತ್ತು ಹುಬ್ಬಳ್ಳಿ ಎರಡೂ ಘಟಕಗಳ ಬಸ್ಗಳಿಗೆ ನಿಲುಗಡೆಕಲ್ಪಿಸಬೇಕುಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈಗ ಹಾನಗಲ್‌ಘಟಕದ ಬಸ್ಗಳಿಗೆ ನಿಲುಗಡೆ ಸೌಲಭ್ಯಕಲ್ಪಿಸಲಾಗಿದೆ. ಹುಬ್ಬಳ್ಳಿ ಘಟಕದ ಬಸ್ಗಳಿಗೂ ನಿಲುಗಡೆಕಲ್ಪಿಸಲು ಹಾವೇರಿಕೆಎಸ್‌ಆರ್‌ಟಿಸಿಅಧಿಕಾರಿಗಳು ಹುಬ್ಬಳ್ಳಿ ವಿಭಾಗೀಯನಿಯಂತ್ರಣಾಧಿಕಾರಿಗೆ ಪತ್ರ ಬರೆದಿದ್ದಾರೆಎಂದು ಸಚಿವರು ತಿಳಿಸಿದ್ದಾರೆ. 

ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಯುತ್ತಿದೆ ಎಂಬ ದೂರನ್ನುಗಂಭೀರವಾಗಿ ಪರಿಗಣಿಸಬೇಕುಎಂದುಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ನಾಲ್ಕು ತಂಡರಚನೆ ಮಾಡಿಅಬಕಾರಿ ದಾಳಿ ಆರಂಭಿಸಿದ್ದು, 13 ಪ್ರಕರಣ ದಾಖಲಿಸಿಕೊಂಡು 30 ಸಾವಿರ ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. 

ಜನಸ್ಪಂದನ ಸಭೆಯಲ್ಲಿ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯಕ್ಕೆಧಕ್ಕೆತರುವಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಪುನಃ ಅಕ್ರಮಚಟುವಟಿಕೆಗಳು ನಡೆಯುತ್ತಿರುವ ದೂರುಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಜರುಗಿಸಲಾಗುವುದುಎಂದು ಸಚಿವರು ತಿಳಿಸಿದ್ದಾರೆ. 


ಸುದ್ದಿ ಓದಿ