ಮಹಲಿಂಗಪುರ

ಸರಕಾರಿ ಪಪೂ ಕಾಲೇಜಿಗೆ ವಿಜ್ಞಾನದಲ್ಲಿ ಶೇ.100 ಫಲಿತಾಂಶ

ಸರಕಾರಿ ಪಪೂ ಕಾಲೇಜಿಗೆ ವಿಜ್ಞಾನದಲ್ಲಿ ಶೇ.100 ಫಲಿತಾಂಶ

ಮಹಾಲಿಂಗಪುರ 15: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ಪಡೆದಿದೆ ಎಂದು ಪ್ರಾಂಶುಪಾಲ ಎಸ್‌.ಆರ್‌.ನಾಯಕೋಡಿ ತಿಳಿಸಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ ಸಹನಾ ಸಿದ್ದಾಪುರ (557) ಪ್ರಥಮ,  ಮಲ್ಲಿಕಾರ್ಜುನ ಹುನ್ನೂರ (545) ದ್ವಿತೀಯ,  ಬೋರಮ್ಮ ಕೇತಗೌಡ (542) ತೃತೀಯ ಹಾಗೂ ಕಲಾ ವಿಭಾಗದಲ್ಲಿ ಅಲ್ಫಿಯಾ ಪೆಂಡಾರಿ (549) ಪ್ರಥಮ, ವಿದ್ಯಾಶ್ರೀ ಅವರಾದಿ ( 548) ದ್ವಿತೀಯ, ಜಯಶ್ರೀ ನಿಲಾರಿ ಮತ್ತು ಸಮೀನಾ ಜಮಾದಾರ (532) ತೃತೀಯ ಮತ್ತು ವಾಣಿಜ್ಯ ವಿಭಾಗದಲ್ಲಿ ಲಕ್ಕವ್ವ ಇಟಕನ್ನವರ (535) ಪ್ರಥಮ, ಆನಂದ ಮಾರಾಪುರ (531)ದ್ವಿತೀಯ, ಶಾರದಾ ಭಜಂತ್ರಿ (517) ತೃತೀಯ ಸ್ಥಾನ ಗಳಿಸಿದ್ದು,  ಕಲಾ ವಿಭಾಗದಲ್ಲಿ ಶೇ.91, ವಾಣಿಜ್ಯ ವಿಭಾಗದಲ್ಲಿ ಶೇ.83 ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ. 


ಸುದ್ದಿ ಓದಿ