ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಶೇ.100 ಸಾಧನೆ: ಅಧಿಕಾರಿಗಳಿಗೆ ಸನ್ಮಾನ
ಲೋಕದರ್ಶನ ವರದಿ
ದಾಂಡೇಲಿ 04 : ನಗರದ ವಾರ್ಡ್ ನಂ.19ರ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಶೇ.100 ಸಾಧನೆ ಮಾಡಿದ ಅಧಿಕಾರಿಗಳನ್ನು ಮಾಜಿ ನಗರಸಭಾ ಸದಸ್ಯ ದಶರಥ ನಂದಿವಡ್ಡರ್ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಡಿಪಿಎಫ್ ಟೌನ್ಶಿಪ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಲ್ಒ ಅನಿತಾ ಡಿಸಿಲ್ವಾ ಹಾಗೂ ಮೇಲ್ವಿಚಾರಕ ಮುಕುಂದ ಬಸವ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಶರಥ ನಂದಿವಡ್ಡರ್, ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಶ್ಲಾಘನೀಯ. ಎಸ್ಐಆರ್ ಕುರಿತು ಮತದಾರರಿಗೆ ಸೂಕ್ತ ಮಾಹಿತಿ ನೀಡಿ, ನಿಗದಿತ ಅವಧಿಗೂ ಮುನ್ನ ಮತದಾರರ ಪಟ್ಟಿಯನ್ನು ಪೂರ್ಣಗೊಳಿಸುವಲ್ಲಿ ಅವರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ನಾಗೇಶ ಸಾಲುಂಕೆ, ರವಿ ಗಾಂವಕರ್, ಪ್ರಶಾಂತ ಬಸೂತ್ರೇಕರ್, ಇಮಾಯನಾಯಿಲ್ ಬೈಲಾ, ರತ್ನಾಕರ ಗಾಂವಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.