ಚಿಕ್ಕೋಡಿ

ವಡಗೋಲ ಗ್ರಾಮಕ್ಕೆ 1.30 ಕೋಟಿ ಅಭಿವೃದ್ಧಿ ಅನುದಾನ: ಶಾಸಕ ಗಣೇಶ ಹುಕ್ಕೇರಿ

ವಡಗೋಲ ಗ್ರಾಮಕ್ಕೆ 1.30 ಕೋಟಿ ಅಭಿವೃದ್ಧಿ ಅನುದಾನ: ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ 25 : ತಾಲೂಕಿನ  ವಡಗೋಲ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 1.30 ಕೋಟಿ ಅನುದಾನ ಮಂಜೂರಾಗಿದೆ ಎಂದು ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕರಾದ ಗಣೇಶ ಹುಕ್ಕೇರಿ ತಿಳಿಸಿದ್ದಾರೆ. ಗ್ರಾಮದ ಶ್ರೀ ಬೀರಸಿದ್ಧೇಶ್ವರ ದೇವಸ್ಥಾನದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ದೇವಸ್ಥಾನವು ಜಾಗೃತ ಕ್ಷೇತ್ರವಾಗಿದ್ದು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸುತ್ತಿದ್ದಾರೆ.  

ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಾಣಕ್ಕೆ ದೇವಸ್ಥಾನ ಕಮಿಟಿಯವರು ಮನವಿ ಸಲ್ಲಿಸಿದ್ದರು ಎಂದು ತಿಳಿಸಿದರು. ಈ ಹಿನ್ನೆಲೆ ಸುಮಾರು 1 ಕೋಟಿ ಅಂದಾಜು ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಮೊದಲ ಹಂತವಾಗಿ ?50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.ಇದೇ ವೇಳೆ, ಮಲಿಕವಾಡದಿಂದ ಮುತ್ತಲಕೋಡಿ ಸಂಪರ್ಕಿಸುವ ರಸ್ತೆ ಹಾಳಾಗಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಲಿಕವಾಡ ಶರ್ಯತ್ತು ರಸ್ತೆಯಿಂದ ವಡಗೋಲ ರಾಯಣ್ಣ ಸರ್ಕಲ್ ಮೂಲಕ ನಣದಿ-ನೇಜ ರಸ್ತೆಗೆ ಸಂಪರ್ಕಿಸುವ 2.6 ಕಿ.ಮೀ ಉದ್ದದ ರಸ್ತೆ ಸುಧಾರಣೆಗೆ 80 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು. 

ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅವರು, ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ಸಮಯಕ್ಕೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಮಲ್ಲಪ್ಪ ವಾಳಕೆ, ಸದಲಗಾ ಪ.ಪಂ ಮಾಜಿ ಅಧ್ಯಕ್ಷ ರಾಜು ಗುಂಡಕಲ್ಲೆ, ಅರುಣ ದೇಸಾಯಿ, ಸಂತೋಷ ನವಲೆ, ಸತೀಶ ಪಾಟೀಲ, ಪೀರಗೌಡಾ ಪಾಟೀಲ, ರವಿ ಗೋಸಾವಿ, ರಾಮಾ ಮಾರಾಪೂರೆ, ಅಶೋಕ ಭಿವಷೆ, ರವಿ ಭತ್ತೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ