ದ್ವಿಚಕ್ರ ಮೇಲೆ ಮರ ಬಿದ್ದು ಯುವಕ ಸಾವು : ಇಬ್ಬರು ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ದ್ವಿಚಕ್ರ ಮೇಲೆ ಮರ ಬಿದ್ದು ಯುವಕ ಸಾವು : ಇಬ್ಬರು ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಬೆಳಗಾವಿ : ದ್ವಿಚಕ್ರ ವಾಹನ ಮೇಲೆ ಹೊರಟಿದ್ದ ದ್ವಿಚಕ್ರ ವಾಹನ ಒಂದರ ಮೇಲೆ ಮಳೆಯಿಂದ ಮರ ಉರಳಿಬಿದ್ದ ಪರಿಣಾಮ ಓರ್ವ ಯುವಕ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಬೆಳಗುಂದಿಯಲ್ಲಿ ಇಂದು ಜರುಗಿದೆ.

    ಈ ಘಟನೆಯಲ್ಲಿ ಸೋಮನಾಥ ಮುಚ್ವಂಡಿಕರ್ (19) ಮೃತಪಟ್ಟ ದರ್ಧೈವಿಯಾಗಿದ್ದಾನೆ. ಅಲ್ಲದೆ ಈ ಘಟನೆಯಲ್ಲಿ‌ ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಇವರು ಜೀವನ್ಮರಣ ನಡುವೆ ಹೋರಾಟ ನಡೆಸಿದ್ದಾರೆ. ಇವರೆಲ್ಲರು ರಸ್ತೆಯಲ್ಲಿ ದ್ವಿಚಕ್ರ ವಾಹನ ಮೇಲೆ ಸಾಗುತ್ತಿದ್ದಾಗ ಮಳೆಯಿಂದ ಮರ ಮುಗುಚಿ ಬಿದ್ದು ಈ ಘಟನೆ ಸಂಭವಿಸಿದೆ.

   ಮೃತ ಯುವಕ ತಂದೆ ಇಲ್ಲದ ತಬ್ಬಲ್ಲಿಯಾಗಿದ್ದು, ಕುಟುಂಬಕ್ಕೆ ಆಸರೆಯಾಗಿದ್ದರು ಎನ್ನಲಾಗಿದೆ.

ಸುದ್ದಿ ಓದಿ