ಶ್ರೀ ಚಕ್ರ ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ : ಸಿದ್ದರಾಮ ಸ್ವಾಮೀಜಿ
ಮಹಾಲಿಂಗಪುರ, 10 : ಶ್ರೀ ಚಕ್ರ ಮಂಡಲ ಪೂಜೆಯು ಶ್ರೀ ಚಕ್ರ ಯಂತ್ರವನ್ನು ಪೂಜಿಸುವ ಒಂದು ಧಾರ್ಮಿಕ ವಿಧಿ ಇದು " ಲಲಿತಾ ತ್ರಿಪುರಸುಂದರಿ " ದೇವಿಯನ್ನು ಆರಾಧಿಸಿದಂತೆ ಇದು ಸಂಪತ್ತು ಸಮೃದ್ಧಿ ಖ್ಯಾತಿ ಮತ್ತು ಯಶಸ್ಸನ್ನು ತರುತ್ತದೆ. ಈ ಪೂಜೆಯು ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಪೂಜೆಯಿಂದ ಮನುಷ್ಯ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಎಂದು ಮುಧೋಳದ ಸಿದ್ದಾರೂಢ ಮಠದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಅವರು ನಗರದ ಶತಮಾನದ ಇತಿಹಾಸವುಳ್ಳ ಶಕ್ತಿ ದೇವತೆಯಾದ ಶ್ರೀ ಬನಶಂಕರಿ ದೇವಸ್ಥಾನದ ನೂತನವಾಗಿ ಪ್ರತಿಷ್ಠಾಪಿಸಿದ ಶ್ರೀ ಚಕ್ರದ ಪೂಜೆಯ 48 ದಿನಗಳು ಪೂರ್ಣಿಗೊಂಡಿದ್ದರ ಪ್ರಥಮ ಮಂಡಲ ಮಹಾ ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಮಹಿಳೆಯು ದೇವಿ ಸ್ವರೂಪವಾಗಿದ್ದು ಆಧುನಿಕ ಯುಗದಲ್ಲಿ ಮಾನವ ಎನೆ ಪ್ರಗತಿ ಸಾಧಿಸಿದರೂ ಪ್ರಕೃತಿ ಮುಂದೆ ಕುಬ್ಜ್ ಎಂಬುದು ಸರ್ವಕಾಲಿಕ ಸತ್ಯ ಅದರಂತೆ ನಮ್ಮ ಸನಾತನ ಹಿಂದೂ ಸಂಸ್ಕೃತಿ ಮರೆತರೆ ಇದ್ದು ಸತ್ತಂತೆ ಎಂದರು.
ನಂತರ ಮಾತನಾಡಿದ ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ ಪೂ ಶ್ರೀ ಸಹಜಯೋಗಿ ಸಹಜಾನಂದ ಸ್ವಾಮೀಜಿ ದೇವಸ್ಥಾನದಲ್ಲಿ ಶ್ರೀ ಚಕ್ರ ಸ್ಥಾಪನೆಯಿಂದ ಬನಶಂಕರಿ ದೇವಸ್ಥಾನಕ್ಕೆ ಹೊಸ ಆಧ್ಯಾತ್ಮಿಕ ಚೈತನ್ಯ ಬಂದಿದೆ. ಸದ್ಭಕ್ತರು ದೇವಿ ಮತ್ತು ಶ್ರೀ ಚಕ್ರ ದರ್ಶನದಿಂದ ಬದುಕಿನ ಎಲ್ಲ ಕಷ್ಟ ಕಾರೆ್ಣಗಳಿಂದ ಮುಕ್ತಿ ಪಡೆಯಬಹುದು.ಮಂಡಲ ಪೂಜೆ ಮಾಡುವುದರಿಂದ ಸಮಾಜದಲ್ಲಿ ಖ್ಯಾತಿ ಗೌರವ, ಮಾನಸಿಕ ಶಾಂತಿ, ಸಕಲ ತೊಂದರೆಗಳು ನಿವಾರಣೆ ಆಗಿ ನವಗ್ರಹ ದೋಷಗಳು ನಿವಾರಣೆ ಆಗಿ ಅದೃಷ್ಟವನ್ನು ತರುತ್ತದೆ ಎಂದರು.
ನಂತರ ಮಾತನಾಡಿದ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ಮಾತನಾಡಿ ಪೂರ್ವ ಜನ್ಮದ ಪುಣ್ಯದ ಫಲ ದೇವಿ ಕೃಪೆ ಇದ್ದರೆ ಮಾತ್ರ ಇಂತಹ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ದೇಶದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಶ್ರೀ ಚಕ್ರ ಇರುವುದು. ಅದರಲೂ ಮಹಾಲಿಂಗಪುರದಲ್ಲಿರುವುದು ನಮ್ಮೆಲ್ಲರ ಪೂರ್ವದ ಪುಣ್ಯದ ಫಲ ಶ್ರೀ ಚಕ್ರದ ದರ್ಶನ್ ಪಡೆಯುತ್ತಿರುವ ನಾವೆಲ್ಲರೂ ಭಾಗ್ಯವಂತರು ಎಂದರು ಸನ್ಮಾನ : ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರಾದ ಕೀರ್ತಿ ಗಣೇಶ, ಮುರಗೇಶ ಕಡ್ಲಿಮಟ್ಟಿ, ನಿವೃತ್ತ ಸೈನಿಕರಾದ ಮಹಾದೇವ ತಳ್ಳಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮುಖಂಡರಾದ ಡಾ ಬಿ ಡಿ ಸೊರಗಾವಿ, ಡಾ ಎ ಆರ್ ಬೆಳಗಲಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ,ಆನಂದ ಹಟ್ಟಿ, ಸೀದಗಿರೆಪ್ಪ ಕಾಗಿ, ಶ್ರೀಶೈಲಪ್ಪ ಬಾಡನವರ,ಮಂಜುನಾಥ್ ಭಾವಿಕಟ್ಟಿ, ಚಂದ್ರು ಕಾಗಿ, ನಾರಾಯಣ ಕಿರಗಿ, ವಿಠಲ್ ಹೊಸಮನಿ, ಶಿವಾನಂದ ಕಿತ್ತೂರ, ರಾಜೇಶ ಭಾವಿಕಟ್ಟಿ, ಜಿ ಎಸ್ ಗೊಂಬಿ, ಪ್ರಭು ಬೆಳಗಲಿ, ಸಿದ್ದರಾಮ ಸ್ವಾಮೀಜಿ, ಶ್ರೀಶೈಲ ನುಚ್ಚಿ, ಅಶೋಕ ಬಾಣಕಾರ್, ಗುರುಪಾದ ಅಂಬಿ, ಶುಭಾಸ ಭಾವಿಕಟ್ಟಿ,ಸುನಿಲ್ ಜಮಖಂಡಿ, ಸತೀಶ ಸೊರಗಾವಿ, ಪುರಸಭೆ ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ಭಾವಿಕಟ್ಟಿ ಪು ಸ ಸದಸ್ಯರಾದ ಬಸವರಾಜ ಚಮಕೇರಿ,ರವಿ ಜವಳಗಿ ಸೇರಿ ಹಲವರು ಇದ್ದರು.ಕಾರ್ಯಕ್ರಮವನ್ನು ಬಿ ಸಿ ಪೂಜಾರಿ ನಿರೂಪಿಸಿ ವಂದಿಸಿದರು.