ಸೌಹಾರ್ದತೆ ಧಕ್ಕೆ :ಶಾಸಕ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವೆಲ್ಫೇರ್ ಪಾರ್ಟಿ ಒತ್ತಾಯ
ಸೌಹಾರ್ದತೆ ಧಕ್ಕೆ :ಶಾಸಕ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವೆಲ್ಫೇರ್ ಪಾರ್ಟಿ ಒತ್ತಾಯ
ಬೆಂಗಳೂರು 11: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದೂ ಮುಸ್ಲಿಮರ ಮಧ್ಯೆ ಕೋಮು ದ್ವೇಷ ಹುಟ್ಟಿಸಿ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ ಸೂಕ್ಷ್ಮ ಪರಿಸ್ಥಿತಿಯಲ್ಲೂ ಪ್ರಚೋದನಕಾರಿ ಭಾಷಣ, ಹೇಳಿಕೆ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ವಕೀಲರು ತಾಹಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.
"ರಾಜ್ಯದಲ್ಲಿ ಮುಸ್ಲಿಮರ ಸರಕಾರ ಅಧಿಕಾರದಲ್ಲಿದ್ದು, ಮುಸ್ಲಿಂ ಯುವತಿಯನ್ನು ಮದುವೆಯಾಗುವ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿ ನೀಡುವೆ" ಎಂದು ಕೊಪ್ಪಳದಲ್ಲಿ ಹೇಳಿಕೆ ನೀಡಿರುವ ಯತ್ನಾಳರ ನಡೆ ನಾಚಿಕೆಗೇಡು. ಕೋಮು ಸಾಮರಸ್ಯ ಕೆಡಿಸುವ ಹುನ್ನಾರ ಮಾಡುತ್ತಿರವ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಮತ್ತು ಶಾಸಕತ್ವ ಸ್ಥಾನದಿಂದ ವಜಾ ಮಾಡಬೇಕು ಎಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಹಿಂದೂ ಮುಸ್ಲಿಮರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಕೈಬಿಟ್ಟು, ಬಡವರ, ನಿರ್ಗತಿಕರ ಬಗ್ಗೆ ಯೋಚಿಸಿದೆ ಕೇವಲ ಮುಸಲ್ಮಾನರ ಬಗ್ಗೆ ಮಾತಾಡದೇ ಇವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಇಂಥ ಸಮಾಜಘಾತಕ ಶಕ್ತಿಗಳಿಗೆ ಸರಕಾರ ಮಟ್ಟ ಹಾಕಬೇಕು. ಶಾಸಕ ಯತ್ನಾಳ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.