ಕನ್ನಡ ಚಿತ್ರ ನಿರ್ಮಾಪಕರಿಗೆ ವರದಾನವಾಗಬಲ್ಲ ‘ಓಟಿಟಿ ಪ್ಲೇಯರ್’ಆ್ಯಪ್ ಬದಲಾಗಿ ವೆಬ್‌ಸೈಟ್‌ನಲ್ಲಿ ಸಿನಿಮಾ ನೋಡಿ
ಕನ್ನಡ ಚಿತ್ರ ನಿರ್ಮಾಪಕರಿಗೆ ವರದಾನವಾಗಬಲ್ಲ ‘ಓಟಿಟಿ ಪ್ಲೇಯರ್’ಆ್ಯಪ್ ಬದಲಾಗಿ ವೆಬ್‌ಸೈಟ್‌ನಲ್ಲಿ ಸಿನಿಮಾ ನೋಡಿ
ಕೊರೋನಾ ನಂತರದ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದ್ದು, ಓಟಿಟಿ ಪ್ಲಾಟ್ ಫಾರಂಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಈಗಾಗಲೇ ಚಿತ್ರೇ್ರಮಿಗಳ ಬೇಡಿಕೆಗನುಗುಣವಾಗಿ, ಅವರನ್ನು ರಂಜಿಸಲು ಹಲವು ಓಟಿಟಿ ಪ್ಲಾಟ್ ಫಾರಂಗಳು ಸನ್ನದ್ದವಾಗುತ್ತಿವೆ. ಇದೀಗ ಗ್ರಾಹಕರ ಬಡ್ಜೆಟ್ ಫ್ರೆಂಡ್ಲಿ ಓಟಿಟಿ ಯಾಗಿ ‘ಓಟಿಟಿ ಪ್ಲೇಯರ್’ ಪ್ರಾರಂಭವಾಗಿದೆ. ಹೌದು ಇದು ಆ್ಯಪ್ ಅಲ್ಲ. ಹಾರ್ಲೀ ಎಂಟರ್‌ಟೈನ್‌ಮೆಂಟ್ ಮೀಡಿಯಾ ಸಂಸ್ಥೆಯಡಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಅಭಿವೃದ್ದಿಪಡಿಸಿರುವ ವೆಬ್‌ಸೈಟ್ ಆಗಿದ್ದು ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಿರಿಯ ನಿರ್ದೇಶಕ, ನಿರ್ಮಾಪಕರಾದ ಓಂ ಸಾಯಿಪ್ರಕಾಶ್ ಹಾಗೂ ಎಸ್.ಎ.ಚಿನ್ನೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಮುರಳಿರಾವ್ ‘ಇದೊಂದು ಪ್ರಯೋಗ, ಪ್ರಯತ್ನ. ನಿರ್ಮಾಪಕರೊಬ್ಬರು ನಮ್ಮನ್ನು ಭೇಟಿ ಮಾಡಿ ತಮ್ಮ ಕಷ್ಟ ಹೇಳಿಕೊಂಡಾಗ ಈ ಆಲೋಚನೆ ಬಂತು. ಈಗ ಎಲ್ಲರೂ ಓಟಿಟಿಯಲ್ಲಿ ಚಿತ್ರ ಯಾವಾಗ ಬರುತ್ತೆ ಅಂತ ಕಾಯುತ್ತಾರೆ. ನಮ್ಮ ವೆಬ್ ಸೈಟ್‌ಗೆ ಲಾಗಿನ್ನ ಆಗಿ ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು ನೋಡಬಹುದು. ಇದನ್ನು ಆನ್ ಲೈನ್ ಥೇಟರ್ ಅನ್ನಬಹುದು. ಬಂದ ಹಣದಲ್ಲಿ ನಿರ್ಮಾಪಕರಿಗೆ 70ಅ ಶೇರ್ ಕೊಡುತ್ತೇವೆ. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್ ಸೈಟ್‌ನಲ್ಲಿ ಹಾಕುತ್ತೇವೆ’ ಎಂದು ವಿವರಿಸಿದರು. ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ಮಾತನಾಡಿ ‘ಇಂಥ ಪ್ರಯತ್ನಗಳು ನಡೆದರೆ ಬಡ ನಿರ್ಮಾಪಕರಿಗೆ ಒಂದಷ್ಟು ಅನುಕೂಲವಾಗುತ್ತದೆ’ ಎಂದು ಹೇಳಿದರು.
ನಿರ್ದೇಶಕ ಸಾಯಿಪ್ರಕಾಶ್ ಮಾತನಾಡುತ್ತ ‘ರೆಗ್ಯುಲರ್ ಓಟಿಟಿ ಗಿಂತ ಇದು ವಿಭಿನ್ನವಾಗಿದೆ. ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುವ ಅವಕಾಶ ಸಿಗುತ್ತದೆ. ಯಾವುದೇ ಹೊಸ ಸಿನಿಮಾ ಬಂದ ಕೂಡಲೇ ನಾನು ನೋಡುತ್ತೇನೆ. ಇದೊಂದು ಬಂಟಿಂಗ್ ಸ್ಟೇಜ್, ನಂತರ ಸಕ್ಸಸ್ ಆಗುತ್ತದೆ. ಇದರ ಬಗ್ಗೆ ಕ್ರೇಜ್ ಹುಟ್ಟಬೇಕಂದ್ರೆ ಒಳ್ಳೊಳ್ಳೆ ಸಿನಿಮಾ ಬರಬೇಕು’ ಎಂದರು. ಅಂದಂಗೆ ಪ್ರೇಕ್ಷಕರು ತಿತಿತಿ.ಠಣಠಿಟಚಿಥಿಜಡಿ.ಟಿ ಗೆ ಬೇಟಿ ನೀಡಿ ಸಿನಿಮಾ ನೋಡಬಹುದು.