ಬಳ್ಳಾರಿ

ದೌರ್ಜನ್ಯ ದಬ್ಬಾಳಿಕೆ ಪುರ್ನಜನ್ಮ ಕಾಣದಂತಿರಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ: ಕೆ.ಸಿ.ಕೊಂಡಯ್ಯ

ದೌರ್ಜನ್ಯ ದಬ್ಬಾಳಿಕೆ ಪುರ್ನಜನ್ಮ ಕಾಣದಂತಿರಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ: ಕೆ.ಸಿ.ಕೊಂಡಯ್ಯ

ದೌರ್ಜನ್ಯ ದಬ್ಬಾಳಿಕೆ ಪುರ್ನಜನ್ಮ ಕಾಣದಂತಿರಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ: ಕೆ.ಸಿ.ಕೊಂಡಯ್ಯ  

ಬಳ್ಳಾರಿ 05 ;ರಂದು  ಜಿಲ್ಲೆಯಲ್ಲಿ 2004 ರಿಂದ 10 ರವರೆಗೆ ಜಿಲ್ಲೆಯಲ್ಲಿ ನಡೆದ ಅವ್ಯಾಹತ ಅಕ್ರಮ ಗಣಿಗಾರಿಕೆಗೆ ಕಾರಣರಾದವರೆಂದು ಜನಾರ್ಧನರೆಡ್ಡಿ, ಶ್ರೀರಾಮುಲು ಹೆಸರು ಹೇಳದೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಮತದಾರರು ಎಚ್ಚೆತ್ತುಕೊಂಡು ಅಂದು ನಡೆದ ಗಣಿಗಾರಿಕೆಯ ದೌರ್ಜನ್ಯ, ಗಲಾಟೆ, ಅಕ್ರಮಗಳು ಮತ್ತೆ ನಡೆಯದಿರಲು ಸ್ಥಳೀಯರಾದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಸಂಡೂರು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.ಅವರಿಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ.ನಾನು ಸಕ್ರೀಯವಾಗಿ ರಾಜಕೀಯದಲ್ಲಿ ಇಲ್ಲದಿದ್ದರರೂ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಈ ಉಪ ಚುನಾವಣೆ ಸಂದರ್ಭದಲ್ಲಿ ಮಾತನಾಡುವುದು ಅವಶ್ಯವಿದೆ. ಈ ವರೆಗೆ ಕ್ಷೇತ್ರದಿಂದ ಸ್ಥಳೀಯರನ್ನೇ ಆಯ್ಕೆ ಮಾಡುತ್ತಾ ಬಂದಿದೆ.ಸಂಡೂರು ಕ್ಷೇತ್ರ ಎಂ.ವೈ.ಘೋರೆ​‍್ಡ ಅವರ ಆಡಳಿತದಿಂದ ಉತ್ತಮ ವಾತಾವರಣದ ಅಭಿವೃದ್ಧಿ ಪರವಾದ ಕ್ಷೇತ್ರವಾಗಿತ್ತು. ನಂತರ ತುಕರಾಂ ನಾಲ್ಕು ಬಾರಿ ಅಯ್ಕೆಯಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಿದ್ದಾರೆ. ಡಿಎಂಎಫ್ ಫಂಡ್ ನ್ನು ಸಮರ​‍್ಕವಾಗಿ ಬಳಿಸಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಈ ಕ್ಷೇತ್ರದಿಂದಲೂ ನಾನು ಎರೆಡು ಬಾರಿ ಸಂಸದನಾಗಿದ್ದೆ ವಿಧಾನ ಪರಿಷತ್ ಸದಸ್ಯನಾಗಿ ಕ್ಷೇತ್ರದ ಜನರ ಸಂಪರ್ಕ ಜೊತೆಗೆ ಅಲ್ಲಿನ ಅಭಿವೃದ್ಧಿಗೆ ನನ್ನದೇ ಕೊಡುಗೆ ನೀಡಿರುವೆ ಎಂದ ಈ ತಿಂಗಳ 8 ಹಾಗು 9 ರಂದು ಪ್ರಚಾರಕ್ಕೆ ತೆರಳಲಿರುವೆಂದರು.ಜಿಲ್ಲೆಯಲ್ಲಿ 2004 ರಿಂದ ಆಡಳಿತದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಜನಾರ್ಧನರೆಡ್ಡಿ ಶ್ರೀರಾಮುಲು ಮೊದಲಾದವರಿಂದ ಕ್ಷೇತ್ರದಲ್ಲಿನ ಗಣಿಗಾರಿಕೆಯ ಅಕ್ರಮ ಹೆಚ್ಚಿತು. ಅವರ ಕಣ್ಣು ನೈಸರ್ಗಿಕ ಸಂಪತ್ತು ಕಬ್ಬಿಣ ಅದಿರು ಮತ್ತು ಮತ್ತು ಮ್ಯಾಂಗನೀಸ್ ಮತ್ತು 33 ಸಾವಿರ ಕೋಟಿ ರೂ ಕೆಎಂಇಆರ್ ಸಿ ಫಂಡ್ ಮೇಲೆ ಇದೆ. ಅದಕ್ಕಾಗಿ ಹೊರಗಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಈ ಹಿಂದಿನಂತೆ ಅಕ್ರಮಕ್ಕೆ ಅವಕಾಶ ನೀಡಬಾರದು ಹೀಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಗೆ ಮತ ನೀಡಿ ಗೆಲ್ಲಿಸಿ ಎಂದರು.ಗಣಿಕಾರಿಕೆಯಿಂದ ಸರ್ಕಾರಕ್ಕೆ ವಾರ್ಷಿಕ 9 ರಿಂದ 10 ಸಾವಿರ ಕೋಟಿ ರೂ ಆದಾಯವಿದೆ. ಇದರಿಮನದ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಇದು ಸಹಕಾರಿಯಾಗಲಿದೆಂದರು.ಈ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ರಾಂಪ್ರಸಾದ್, ವೆಂಕಟೇಶ ಹೆಗಡೆ, ಘನಮಲ್ಲನಗೌಡ, ಶಿವು ಹಲಕುಂದಿ, ಪಾರ್ಥಸಾರಥಿ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು 


ಸುದ್ದಿ ಓದಿ