ಪ್ರಸಾದ ನಿಲಯ ನಿರ್ಮಾಕ್ಕೆ ಹಳ್ಳಿಕೇರಿಯವರೇ ಸ್ಪೂರ್ತಿ

ಪ್ರಸಾದ  ನಿಲಯ ನಿರ್ಮಾಕ್ಕೆ ಹಳ್ಳಿಕೇರಿಯವರೇ ಸ್ಪೂರ್ತಿ

ಪ್ರಸಾದ  ನಿಲಯ ನಿರ್ಮಾಕ್ಕೆ ಹಳ್ಳಿಕೇರಿಯವರೇ ಸ್ಪೂರ್ತಿ

ಹೊಸರಿತ್ತಿ 02 : 1ಹಳ್ಳಿಕೇರಿ ಗುದ್ಲೆಪ್ಪನವರೆಂದರೇನೇ ಹಾಗೆ.ಕೈಗೊಂಡ ಕೆಲಸ ಕಾರ್ಯಗಳಿಗೆ ಹಳ್ಳಿಕೇರಿಯವರ ವ್ಯಕ್ತಿತ್ವದಿಂದಲೇದಾನ ದತ್ತಿಗಳು ಹುಡುಕಿಕೊಂಡು ಬುರುತ್ತಿದ್ದವು.ಚುಂಬಕದಂತೆ ಸೆಳೆಯುವ ಹಳ್ಳಿಕೇರಿಯವರ ವ್ಯಕ್ತಿತ್ವ ಹಾವೇರಿಜಿ.ಎಚ್‌.ಕಾಲೇಜು ಸೇರಿ ಹೊಸರಿತ್ತಿಯಲ್ಲಿ ಹಲವಾರು ಹಳ್ಳಿಕೇರಿ ಸಮೂಹ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಳ್ಳಲು ಸ್ಪೂರ್ತಿಯ ಸೆಲೆಯಾಯಿತು. 

 ಗುದ್ಲೆಪ್ಪ ಹಳ್ಳಿಕೇರಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ  ಒಂದಾದರಾಷ್ಟ್ರೀಯ ಶಿಕ್ಷಣ ಸಮಿತಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಬಿಸಿಯೂಟ ಸೇವನೆಗೆ ಪ್ರಸಾದ ನಿಲಯದತುರ್ತಅಗತ್ಯತೆಯಾದಾಗ ಶಾಲಾ ಸಿಬ್ಬಂದಿ ಕೈಕಟ್ಟಿಕೂರಲಿಲ್ಲ.ಹಳ್ಳಿಕೇರಿಯವರು ಸ್ಪೂರ್ತಿಯಾಗುತ್ತಾರೆ.ಶಾಲೆಯಲ್ಲಿಕಲಿತು ಬದುಕುಕಟ್ಟಿಕೊಂಡ ಹಿರಿಯ ವಿದ್ಯಾರ್ಥಿಗಳು ನೆನಪಾಗುತ್ತಾರೆ. ಮುಖ್ಯೋಪಾದ್ಯಾಯಿನಿ ಗೀತಾ ಮರಡೂರ ಹಾಗೂ ಸಕಲ ಸಿಬ್ಬಂದಿ ಟೊಂಕಕಟ್ಟಿ ನಿಲ್ಲುತ್ತಾರೆ. ಸಿಬ್ಬಂದಿಯವರೆ ಸಂಗ್ರಹಿಸಿದ ವಂತಿಕೆಯ ಬೀಜ ನಿಧಿಯಿಂದಗುದ್ದಲಿ ಪೂಜೆ ನೆರವೇರಿಸಿ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿದಾಗ ಪ್ರತಿಯೊಬ್ಬರಿಗೂಕಲಿತ ಶಾಲೆಗೆ ಅಳಿಲು ಸೇವೆ ಸಲ್ಲಿಸುವ ಭಾವ ಬರುತ್ತದೆ.ಸಾಮಾಜಿಕ ಕಾರ್ಯಕರ್ತಡಾಽಽ ಪ್ರಭುದೇವ ಚೂರಿಯವರೂ ಕೈ ಜೋಡಿಸುತ್ತಾರೆ. ಸಂಸ್ಥೆಯಹಳೆಯ ವಿದ್ಯಾರ್ಥಿ ಹಾಗೂ ಕಟ್ಟಡ ನಿರ್ಮಾಣದ ಮೇಸ್ತ್ರಿಯಾಗಿರುವ ಬಸವರಾಜ ದೊಡ್ಡಮನಿ ಫಲಾಪೇಕ್ಷೆ ಇಲ್ಲದೆ ಭೋಜನಾಲಯ ನಿರ್ಮಾಣ ಮಾಡಲುಮನಸ್ಸು ಮಾಡುತ್ತಾರೆ.ದಾನಿಗಳಿಂದ  ಸಂಗ್ರಹವಾದ ಬರೋಬ್ಬರಿ 8,08,905 ರೂಗಳಲ್ಲಿ ಆರು ತಿಂಗಳು ಅನ್ನುವಲ್ಲಿ ಭೋಜನಾಲಯ ವಿದ್ಯಾರ್ಥಿಗಳ  ಪ್ರಸಾದ ಸೇವನೆಗೆ ಸಮರೆ​‍್ನಯಾಗುತ್ತದೆ. ಇದೇ ಜನೇವರಿ 8 ರಂದು ಹಮ್ಮಿಕೊಂಡಿರುವ ವಾರ್ಷಿಕ ಸ್ನೇಹ ಸಮ್ಮೇಳನದ ಸಂದರ್ಭದಲ್ಲಿಎಲ್ಲಾ ದಾನಿಗಳಿಗೆ ಸನ್ಮಾನಿಸಿ ಕೃತಾರ್ಥರಾಗುವ ಸಮಾರಭವನ್ನು ಸಿಬ್ಬಂದಿಯವರು ಹಮ್ಮಿಕೊಂಡಿದ್ದಾರೆ.1270521335ಮುಖ್ಯೋಪಾದ್ಯಾಯಿನಿ ಗೀತಾ ಮರಡೂರ ಭಾವಚಿತ್ರಭೋಜನಾಲಯ ಭಾವಚಿತ್ರ 


ಸುದ್ದಿ ಓದಿ