ಮಹಲಿಂಗಪುರ

ಹಳ್ಳಿ ಹಬ್ಬಗಳು ಹಿರಿಯರ ಪರಂಪರೆ ನೆನಪಿಸುತ್ತವೆ: ಸಾಹಿತಿ ಪೂಜಾರಿ

ಹಳ್ಳಿ ಹಬ್ಬಗಳು ಹಿರಿಯರ ಪರಂಪರೆ ನೆನಪಿಸುತ್ತವೆ: ಸಾಹಿತಿ ಪೂಜಾರಿ

ಮಹಾಲಿಂಗಪುರ: ಭಾರತೀಯ ಸಂಪ್ರದಾಯದ ಜಾನಪದ ಹಬ್ಬಗಳು ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿವೆ. ಪ್ರಸ್ತುತ ದಿನಕ್ಕೆ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಹಳ್ಳಿ ಹಬ್ಬಗಳು ಹಿರಿಯರ ಪರಂಪರೆಯನ್ನು ನೆನಪಿಸುತ್ತವೆ. ಎಂದು ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ತಿಳಿಸಿದರು.

ಪಟ್ಟಣದ ಸ್ಫೂರ್ತಿ ಟ್ಯೂಷನ್ ಕ್ಲಾಸಸ್ ವತಿಯಿಂದ 'ಪೈ" ದಿನಾಚರಣೆ ಅಂಗವಾಗಿ ಹಮ್ಮಿಕೊಂಡ "ಹಳ್ಳಿ ಹಬ್ಬ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ನಮ್ಮ ಸಂಸ್ಕೃತಿ, ಆಚರಣೆ, ಕಲೆ, ಸಾಹಿತ್ಯದಂತಹ ವಿಚಾರಗಳನ್ನು ತಿಳಿಸುವ ಪ್ರಯತ್ನ ಆಗಬೇಕು. ಎಂದಾಗ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ನಶಿಸಿ ಹೋಗುತ್ತಿರುವ ಹಳ್ಳಿ ಸೊಬಗನ್ನು ಮತ್ತೆ ನೆನಪಿಸುವ ಕಾರ್ಯ ಸ್ಫೂರ್ತಿ ಟ್ಯೂಷನ್ ಕ್ಲಾಸ್ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು. ಸ್ಫೂರ್ತಿ ಟ್ಯೂಷನ್ ಕ್ಲಾಸಸ್ ನ ಶಿಕ್ಷಕ ಸುರೇಶ ಮಠಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿನಿಯರಿಗಾಗಿ ರೊಟ್ಟಿ ಮಾಡುವ ಸ್ಪರ್ಧೆ  ಏರ್ಪಡಿಸಲಾಗಿತ್ತು. ಒಳ್ಳೆಯ ಆಕಾರದ ಜೊತೆಗೆ ರುಚಿಕರವಾದ ರೊಟ್ಟಿ ಹಾಗೂ ಪಲ್ಯವನ್ನು ತಯಾರಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಗೀತಾಂಜಲಿ ನಾಯಕ ಪ್ರಥಮ, ಸುಮಿತ್ರಾ ಚವ್ಹಾಣ ದ್ವೀತಿಯ, ದೀಪ್ತಿ ಹುಲ್ಯಾಳ ತೃತೀಯ ಬಹುಮಾನ ಪಡೆದುಕೊಂಡರು.ಸ್ಫೂರ್ತಿ ಟ್ಯೂಷನ್ ಕ್ಲಾಸ್ ನ ವಿದ್ಯಾರ್ಥಿಗಳು ಹಲವು ದತ್ತಾಂಶಗಳ ಮೂಲಕ ಕಂಡು ಹಿಡಿದ ಪೈ ನ ಬೆಲೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ತಮ್ಮ ತಂದೆ-ತಾಯಿಯರ ಪಾದ ಪೂಜೆ ಮಾಡುವುದರ ಮೂಲಕ ಗೌರವ ಸಮಪರ್ಿಸಿದರು.

ಶಿಕ್ಷಕ ಎಸ್ ಬಿ ಮಠಗಾರ,ತಮ್ಮ ಟ್ಯೂಷನ್ ನ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಣಿತ ಗ್ರಂಥ ಹೊತ್ತ ಪಲ್ಲಕ್ಕಿ ಉತ್ಸವ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಜರುಗಿತು.ಶ್ರೀ ಶ್ರೀಮಂತ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು.ಡಾ ಗೀತಾ ಬಡಿಗೇರ,ಚಿತ್ರಕಲಾ ಶಿಕ್ಷಕ ಎಸ್ ಎಸ್ ಶಿಂದೆ, ವಿ ಜಿ ಹುಡೇದಮನಿ, ವಿ ಜಿ ಅಭಾನವರ, ವೇದಿಕೆ ಮೇಲಿದ್ದರು. ಸ್ಫೂತರ್ಿ ಟ್ಯೂಶನ್ ಕ್ಲಾಸ್ ನ ಹಳೆ ವಿದ್ಯಾರ್ಥಿಗಳು,ರನ್ನ ಬೆಳಗಲಿಯ ಸಿದ್ದಾರೂಢ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಭಾಗವಹಿಸಿದ್ದರು.ಶಿಕ್ಷಕ ವಿ ಜಿ ಹುಡೇದಮನಿ ಪ್ರಾರ್ಥಿಸಿದರು.ಶಿಕ್ಷಕ ಬಿ ಬಿ ಚೋಪಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಜ್ಞಾನ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ನೇಗಿನಾಳ ನಿರೂಪಿಸಿ ವಂದಿಸಿದರು.


ಸುದ್ದಿ ಓದಿ