ವಿಜಯ ಸಹಕಾರಿ ಬ್ಯಾಂಕ್ 70ನೇ ಶಾಖೆ ಉದ್ಘಾಟನೆ; ರೈತ, ಬಡವರ ಸೇವೆಗೆ ನಿರಾಣಿ ಗ್ರೂಪ್ ಬದ್ಧ

ವಿಜಯ ಸಹಕಾರಿ ಬ್ಯಾಂಕ್ 70ನೇ ಶಾಖೆ ಉದ್ಘಾಟನೆ; ರೈತ, ಬಡವರ ಸೇವೆಗೆ ನಿರಾಣಿ ಗ್ರೂಪ್ ಬದ್ಧ
Vijaya Sahakari Bank's 70th branch inaugurated; Nirani Group committed to serving farmers and the p

ಬೀದರ್ 25 :  ರೈತರು, ಬಡವರು, ಹಿಂದುಳಿದವರು, ಸಣ್ಣ ಉದ್ಯಮಿದಾರರಿಗೆ ಆರ್ಥಿಕ ಶಕ್ತಿ ತುಂಬಲು ಮುಧೋಳ ಮೂಲದ ಮುರುಗೇಶ ರುದ್ರ​‍್ಪ ನಿರಾಣಿ (ಎಂಆರ್‌ಎನ್) ಉದ್ಯೋಗ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆ ನಿರ್ದೇಶಕರೂ ಆದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು. ಇಲ್ಲಿನ ಪಾಪನಾಶ ಗೇಟ್ ಹತ್ತಿರದ ಸಾಯಿ ಕ್ಲಾಥ್ ಪಕ್ಕ ಸುಸಜ್ಜಿತ ಕಚೇರಿಯಲ್ಲಿ ಬುಧವಾರ ವಿಜಯ ಸೌಹಾರ್ದ ಸಹಕಾರಿ ಸಂಘದ 70ನೇ ಶಾಖೆ ಲೋಕಾರೆ​‍್ಣ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದುಳಿದ ಬೀದರ್ ಜಿಲ್ಲೆಯ ಜನರಿಗೆ ವಿಶೇಷವಾಗಿ ಕೃಷಿಕರ ಆರ್ಥಿಕ ಸ್ಥಿತಿ ಸುಧಾರಣೆಗೆ ಪೂರಕವಾಗಿ ವಿಜಯ ಸೌಹಾರ್ದ ಕೆಲಸ ಮಾಡಲಿದೆ.

ಈ ವಷಾಂರ್ತ್ಯಕ್ಕೆ ಬ್ಯಾಂಕ್ ಶಾಖೆ 100ಕ್ಕೇರಿಸುವ ಉದ್ದೇಶವಿದೆ. ಕಕ ಭಾಗದಲ್ಲಿ ಇನ್ನಷ್ಟು ಶಾಖೆ ತಾಲೂಕು ಕೇಂದ್ರಗಳಲ್ಲೂ ಸ್ಥಾಪಿಸಲಾಗುತ್ತದೆ ಎಂದರು. 32 ವರ್ಷ ಹಿಂದೆ ಸ್ಥಾಪಿತ ನಿರಾಣಿ ಗ್ರೂಪ್ 21ಕ್ಕೂ ಹೆಚ್ಚು ಕಂಪನಿ ಹೊಂದಿದ್ದು, 8 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದೆ.2007 ರಲ್ಲಿ ಸ್ಥಾಪಿತ ವಿಜಯ ಸೌಹಾರ್ದ 45 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. 3200 ಕೋಟಿ ಡೆಪಾಸಿಟ್ ಹೊಂದಿ ಠೇವಣಿದಾರರ ವಿಶ್ವಾಸವನ್ನು ಗಳಿಸಿದೆ. 2600 ಕೋಟಿ ಸಾಲ ವಿತರಿಸಿದೆ. 500 ಕೋಟಿ ಹಣ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದೆ. ಸದಸ್ಯರಿಗೆ ಶೇ.23-25 ರಷ್ಟು ಲಾಭಾಂಶ ಹಂಚುವ ರಾಜ್ಯದ ಏಕೈಕ ಸಹಕಾರಿಯಾಗಿದೆ. 500ಕ್ಕೂ ಹೆಚ್ಚು ಸಿಬ್ಬಂದಿ ಬ್ಯಾಂಕ್‌ನಲ್ಲಿದ್ದಾರೆ.

ಪ್ರತಿ ವರ್ಷ 7 ಕೋಟಿಯಷ್ಟು ಲಾಭ ಗಳಿಸುತ್ತಿದೆ. ಜನಪರ, ರೈತಪರ ಕಾಳಜಿಯುಳ್ಳ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಇಲ್ಲಿನ ಬ್ಯಾಂಕ್ ಶಾಖೆ ಗ್ರಾಹಕ ಸ್ನೇಹಿ, ರಾಜ್ಯದಲ್ಲೇ ಮಾದರಿಯಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ತಡೋಳಾದ ರಾಜೇಶ್ವರ ಶಿವಾಚಾರ್ಯರು ಶಾಖೆ ಉದ್ಘಾಟಿಸಿ ಆಶೀರ್ವಚನ ನೀಡಿ, ನಿರಾಣಿ ಗ್ರೂಪ್ ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದೆ. ಹಿಂದುಳಿದ ಜಿಲ್ಲೆ ಆರ್ಥಿಕ ಪ್ರಗತಿಗೆ ವಿಜಯ ಶಾಖೆ ಕೊಡುಗೆ ನೀಡಲಿ. ಭಾಲ್ಕಿ, ಬಸವಕಲ್ಯಾಣ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶಾಖೆ ಆರಂಭವಾಗಲಿ ಎಂದರು.

ಬೀದರ್ ಶಾಖೆ ಸಲಹಾ ಸಮಿತಿ ನಿರ್ದೇಶಕ ಮಂಡಳಿ ಮುಖ್ಯಸ್ಥರಾದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ಗಣಕೀಕೃತ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಎಲ್ಲ ಸೇವೆ ನೀಡಲಾಗುತ್ತಿದೆ. ಎಸ್‌ಎಂಎಸ್, ಠೇವಣಿ ಮೇಲೆ ಶೇ.12.5 ರವರೆಗೆ ಆಕರ್ಷಕ ಬಡ್ಡಿ ದರ, ಆರ್‌ಟಿಜಿಎಸ್, ನೆಫ್ಟ್‌, ಪೇ ???ಪ್ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಹುಕೋಟಿ ವ್ಯವಹಾರದ ಶಾಖೆ ಇಲ್ಲಿ ಆರಂಭವಾಗಿದ್ದರಿಂದ ಗಡಿ ಜಿಲ್ಲೆಗೆ ನಿರಾಣಿ ಗ್ರೂಪ್ ಯುಗಾದಿ ಮುನ್ನ ಗಿಫ್ಟ್‌ ಕೊಟ್ಟಿದೆ. ಜಿಲ್ಲೆಯ ಜನರು ಇದರ ಲಾಭ ಪಡೆಯಲು ಕೋರಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾತನಾಡಿದರು, ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು. ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಮುಖರಾದ ಬಿ.ಜಿ.ಶೆಟಕಾರ್, ಬಾಬು ವಾಲಿ, ಬಸವರಾಜ ಧನ್ನೂರ, ನಂದಕಿಶೋರ ವರ್ಮಾ, ಸಲಹಾ ಸಮಿತಿ ನಿರ್ದೇಶಕರಾದ ಬಾಬುರಾವ ಕಾರಬಾರಿ, ಹಾವಶೆಟ್ಟಿ ಪಾಟೀಲ್, ಶಂಕರರಾವ ಕೊಟ್ಟರಕಿ, ಸದಾನಂದ ಜೋಶಿ, ರಾಜರಡ್ಡಿ ಶಹಾಬಾದ, ಬಾಬುರಾವ ಮಲ್ಕಾಪುರ, ಜಗನ್ನಾಥ ಜಮಾದಾರ, ಮಾಣಿಕಪ್ಪ ಖಾಶೆಂಪುರ, ಅನೀಲ ಪನ್ನಾಳೆ, ಸಂತೋಷ ರಾಸೂರ, ಮಂಜುನಾಥ ಸುಣಗಾರ, ಅಣವೀರ ಕೊಡಂಬಲ್, ಬ್ಯಾಂಕ್ ಎಚ್‌ಆರ್ ಆನಂದ ಕುಲಕರ್ಣಿ ಇತರರಿದ್ದರು. ನವಲಿಂಗ ಪಾಟೀಲ್ ನಿರೂಪಿಸಿದರು. ಗಾಯಕಿ ಮಹೇಶ್ವರಿ ಪಾಂಚಾಳ ವಚನ ಸಂಗೀತ, ಭಕ್ತಿ ಸುಧೆ ಹರಿಸಿದರು.  



ಸುದ್ದಿ ಓದಿ