ಕಂಪ್ಲಿ

ವೀರಾಂಜನೇಯ್ಯ ಸ್ವಾಮಿಯ ಗಂಗೆಸ್ಥಳ ಮೆರವಣಿಗೆ

ವೀರಾಂಜನೇಯ್ಯ ಸ್ವಾಮಿಯ ಗಂಗೆಸ್ಥಳ ಮೆರವಣಿಗೆ

ಲೋಕದರ್ಶನ ವರದಿ 

ಕಂಪ್ಲಿ 05 : ಪಟ್ಟಣದಲ್ಲಿ ಸವಿತಾ ಸಮಾಜದಿಂದ ಶ್ರಾವಣಮಾಸದ ಕೊನೆ ಶನಿವಾರದಂದು ವೀರಾಂಜನೇಯ್ಯ ಸ್ವಾಮಿಯ ಗಂಗೆಸ್ಥಳ ಮೆರವಣಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.   ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿ ದಂಡೆಯಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಆರಂಭಗೊಂಡಂತ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಡುವಲ ಮಸೀದಿ, ಮಾರೆಮ್ಮ ಗುಡಿ, ಡಾ.ರಾಜಕುಮಾರ್ ಮುಖ್ಯ ರಸ್ತೆ, ಅಂಬೇಡ್ಕರ್ ವೃತ್ತ ಮೂಲಕ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಈ ಮೆರವಣಿಗೆಯಲ್ಲಿ ಮಂಗಳವಾದ್ಯ,  ತಾಷಾರಾಂಡೋಲ್ ಸೇರಿದಂತೆ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು.  ಪೂಜಾರಿ ಮಿಟ್ಟಿ ಶಂಕ್ರ​‍್ಪ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕಾರ್ಯಗಳು ಜರುಗಿದವು. ಶಾಸಕ ಜೆ.ಎನ್‌.ಗಣೇಶ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ನಂತರ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ಈ ಹನುಮಂತಪ್ಪ ಮಾತನಾಡಿ, ಪ್ರತಿ ಶ್ರಾವಣಮಾಸದ ಕೊನೆ ಶನಿವಾರದ ದಿನದಂದು ವೀರಾಂಜನೇಯ ಸ್ವಾಮಿಯ ಗಂಗೆಸ್ಥಳ ಮಹೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಾಗೂ ಸಡಗರ ಸಂಭ್ರಮದಿಂದ ಆಚರಣೆ ಮಾಡಿಕೊಂಡು ಬರಲಾಗಿದೆ. ದೇವರ ಆರಾಧನೆಯಿಂದ ಬೇಡಿದ ಇಷ್ಟಾರ್ಥಗಳು ಲಭಿಸಲು ಸಾಧ್ಯ. ಇಲ್ಲಿನ ದೇವಸ್ಥಾನ ಅಭಿವೃದ್ಧಿಗಾಗಿ ಈಗಾಗಲೇ ಸ್ಥಳೀಯ ಶಾಸಕರು ಅನುದಾನ ನೀಡಿದ್ದು, ಇನ್ನಷ್ಟು ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಆನಂದ, ಮುಖಂಡರಾದ ಕರೇಕಲ್ ಮನೋಹರ, ಎ.ಅಂಜಿನಪ್ಪ, ಪಾಂಡುರಂಗ, ಎನ್‌.ಶ್ರೀನಿವಾಸ, ಜಿ.ಎಚ್‌.ಗಾದಿಲಿಂಗ, ನಾಗರಾಜ, ವೀರಕುಮಾರ, ಟಿ.ರಾಜಶೇಖರ, ಪುರುಷೋತ್ತಮ, ವಿರೇಶ ಹಾಗೂ ಮಹಿಳೆಯರು ಇದ್ದರು. 


ಸುದ್ದಿ ಓದಿ