ತಂಬ್ರಹಳ್ಳಿಯಲ್ಲಿ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 04: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ವೇಳೆ ತಂಬ್ರಹಳ್ಳಿ ಗ್ರಾಮದ ಹಿರಿಯ ಮುಖಂಡ ಬಾಳಿಕಾಯಿ ಚಿದಾನಂದಪ್ಪ ಸ್ವಾಮಿಯ ಜಯಂತ್ಯೋತ್ಸವಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯುವಕರು ಧಾಮರ್ಿಕ ಕಾರ್ಯಕ್ರಮಗಳ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ಶ್ರಧ್ಧಾ ಭಕ್ತಿಯಿಂದ ಆಚರಿಸುವುದರ ಜೊತೆ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ತಂಬ್ರಹಳ್ಳಿ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಸತತವಾಗಿ ವಿಜೃಂಭಣೆಯಿಂದ ಆಚರಿಸುತ್ತಾ ಬರಲಾಗಿದೆ. ಮೃತ್ಯು ಕೂಪಕ್ಕೆ ತಳ್ಳುತ್ತಿರುವ ದುರಾಭ್ಯಾಸಗಳಿಂದ ಪ್ರಸ್ತುತ ಯುವಕರು ದೂರವಿರಬೇಕಿದೆ ಹಾಗೂ ಆರೋಗ್ಯವೇ ಮಹಾ ಭಾಗ್ಯವಾಗಿದೆ ಹಾಗಾಗಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವ ಅಗತ್ಯವಿದೆ. ಎಂದು ತಿಳಿಸಿದರು.
ಪುರುವಂತರು ವೀರಭದ್ರೇಶ್ವರ ಸ್ವಾಮಿಯ ವಡಪುಗಳನ್ನು ಅತ್ಯಂತ ರೋಷಾವೇಶದಿಂದ ವಿಜೃಂಭಣೆಯಿಂದ ಹೇಳುತ್ತಿರುವುದು ಭಕ್ತರು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. 85ವರ್ಷವಿರುವ ಬಾಳಿಕಾಯಿ ಚಿದಾನಂದಪ್ಪನವರು, ಎರಡು ನಂದಿಕೋಲುಗಳನ್ನು ಹಾಕಿಕೊಂಡು ಕುಣಿಯುತ್ತಿರುವುದನ್ನು ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರು ಸಮಾಳ, ನಂದಿಕೋಲು ಕುಣಿತದೊಂದಿಗೆ ವೀರಭದ್ರೇಶ್ವರ ಉತ್ಸವಕ್ಕೆ ಮೆರಗು ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ಹೆಚ್.ಬಿ.ನಾಗನಗೌಡ್ರು, ನಿವೃತ್ತ ಇಒ ಟಿ.ವೆಂಕೋಬಪ್ಪ, ಚಣ್ಣದ ರಾಚಪ್ಪ, ಉಮಚಗಿ ಚಿದಾನಂದ, ನಾಗಲಾಪುರ ವೀರಣ್ಣ, ಸಪ್ಪರದ ಪಂಪಾಪತಿ, ಕಡ್ಡಿ ಮಲ್ಲಿಕಾರ್ಜುನ, ಗಡೇದ ಸಂಗಪ್ಪ, ಮಾಲ್ವಿ ಶಿವಕುಮಾರ, ಗೊಂಡಬಾಳ ಶ್ರೀಧರ, ಬಳಿಗಾರ ವೀರೇಶ್, ಸೊನ್ನದ ವೀರಭದ್ರಪ್ಪ, ಉಮಚಗಿ ವಿಶ್ವನಾಥ, ಬಾಳಿಕಾಯಿ ವೀರೇಶ್, ಬಾಚಿನಳ್ಳಿ ಮಹೇಶ್, ನೆಲುವಿಗಿ ವೀರೇಶ್, ಹಡಪದ ವೀರೇಶ್, ಚಣ್ಣದ ಮಲ್ಲಿಕಾರ್ಜುನ, ಗದ್ದಿಕೇರಿ ಮುದುಕಪ್ಪ ಇತರರಿದ್ದರು