ಚಿಕ್ಕೋಡಿ

ವೀರಭದ್ರ ಯುಗ ಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ

ವೀರಭದ್ರ ಯುಗ ಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ

ಮಾಂಜರಿ 04 : ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮೀಜಿ ನೀಡಿದ ಸಂದೇಶದಂತೆ ವೀರಶೈವ ಲಿಂಗಾಯತರು ಒಂದೇ ಎಂಬುದನ್ನು ಎಂದಿಗೂ ಮರೆಯುವಂತಿಲ್ಲ. ಶ್ರೀಮಂತವಾದ ವೀರಶೈವ ಲಿಂಗಾಯತ ಪರಂಪರೆ ಕವಲುದಾರಿಯಲಿದ್ದು, ಯಾವ ಶಕ್ತಿಗಳು ಪ್ರಯತ್ನ ಮಾಡಿದರೂ ವೀರಶೈವ ಹಾಗೂ ಲಿಂಗಾಯತರು ಒಂದೇ ವಿನಃ ಬೇರೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯದ ತೋಟಗಾರಿಕೆ ಮತ್ತು ಗಣಿ ಭೂವಿಜ್ಞಾನ ಸಚಿವರಾದ ಎಸ್‌ಎಸ ಮಲ್ಲಿಕಾರ್ಜುನ ತಿಳಿಸಿದರು. ಅವರು ಚಿಕ್ಕೋಡಿ ತಾಲೂಕಿನ ದಕ್ಷಿಣಕಾಶಿ ಎಂದು ಖ್ಯಾತಿ ಪಡೆದ ಯಡೂರು ಗ್ರಾಮದಲ್ಲಿ ನಡೆಯುತ್ತಿರುವ ಕುಂಭಮೇಳ ರಾಜಗೋಪುರ ಲೋಕಾರೆ​‍್ಣ ಕೃಷ್ಣಾರ್ತಿ, ವೀರಭದ್ರ ಮತ್ತು ಭದ್ರಕಾಳಿ ಕಲ್ಯಾಣ ಮಹೋತ್ಸವ ಯುಗ ಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಉದ್ದೇಶಿಸಿ ಮಂಗಳವಾರ ರಾತ್ರಿ ನಡೆದ ಸಮಾರಂಭದಲ್ಲಿ ಮಾತನಾಡಿದರು.  

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಕಾಶೀಪೀಠದ ನೂತನ ಜಗದ್ಗುರುಗಳಾದ ಡಾ ಮಲ್ಲಿಕಾರ್ಜುನ್ವಿಶ್ವರಾಧ್ಯ ಶಿವಾಚಾರ್ಯ ಹಾಗೂ ಶ್ರೀಶೈಲ್ಪೀಠದ ಜಗದ್ಗುರುಗಳಾದ ಡಾ. ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ವಹಿಸಿದ್ದರು ಸಮಾಜದಲ್ಲಿ ಧರ್ಮಮಾರ್ಗದೊಂದಿಗೆ ನಡೆಯುವವರು ಕಡಿಮೆಯಾಗುತ್ತಿದ್ದಾರೆ. ಏನಾದರೂ ಮಾಡಿ ಅಲ್ಪಾವಧಿಯಲ್ಲಿ ಹಣ, ಅಧಿಕಾರ, ಕೀರ್ತಿಪಡೆಯಬೇಕು ಎಂಬ ಆತುರದಲ್ಲಿ ತಪ್ಪುದಾರಿಯಲ್ಲಿ ಸಾಗುವುದು ಒಳ್ಳೆಯದಲ್ಲ. ಯುವಪೀಳಿಗೆ ನಶೆ ಪ್ರಪಂಚದಲ್ಲಿ ಬಿದ್ದಿದ್ದು, ಪೋಷಕರು ತಮ್ಮ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಜತೆಗೆ ಸಂಸ್ಕಾರಯುತವಾಗಿ ಬೆಳೆಸಬೇಕಾದ ಅನಿವಾರ್ಯತೆ ಪ್ರಸ್ತುತ ದಿನಗಳಲ್ಲಿ ಎದುರಾಗಿದೆ.

ಈ ವೇಳೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ ನಮ್ಮ ದೇಶದಲ್ಲಿ ಹಲವು ಧರ್ಮ, ಮತ, ಸಂಪ್ರದಾಯಗಳಿವೆ. ವೈವಿಧ್ಯತೆಯನ್ನು ಗೌರವಿಸಿದ ದೇಶ ನಮ್ಮದು. ದೇಶದ ಸಂಸ್ಕೃತಿ ಉಳಿದರೆ ಮಾತ್ರದೇಶ ಉಳಿಯಲು ಸಾಧ್ಯ ಧರ್ಮದಿಂದ ಮಾತ್ರ ಇಡೀ ಜಗತ್ತನ್ನು ಗೆಲ್ಲಲು ಸಾಧ್ಯ, ಮಠಕ್ಕೆ ಅಗತ್ಯ ವಿರುವ ಮೂಲಭೂತ ಸೌಲಭ್ಯವನ್ನು ನನ್ನ ಅನುದಾನದಿಂದ ಕೈಗೊಳ್ಳುತ್ತೇನೆ, ಶ್ರೀಕೃಷ್ಣನಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಿ ಎಂದು ಅವರು ಹೇಳಿದರು ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ವಿಧಾನ ಪರಿಷತ್ಮಾಜಿ ಸದಸ್ಯ ಮಹಾಂತೇಶ ಕವಟಗಿ ಮಠಮಹೇಶ್ಭಾತೆಸ್ವಪ್ನಲಿ ಹುಕ್ಕೇರಿ ಹಾಗೂ ಇಲ್ಲಿ ಇಳಿದ ಗಂಡನಾದರಿಕರು ಹಾಜರಿದ್ದರು 


ಸುದ್ದಿ ಓದಿ