ಅಕಾಲಿಕ ಮಳೆ ಮೆಣಸಿನ ಕಾಯಿ ತಂದ ರೈತರಿಗೆ ಆತಂಕ
ಬ್ಯಾಡಗಿ 26 : ಪಟ್ಟಣವು ಒಣ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಸಿದ್ಧವಾಗಿದ್ದು ರೈತರು ನಾಳೆ ಗುರುವಾರ ಮಾರುಕಟ್ಟೆ ಇರುವುದರಿಂದ ವ್ಯಾಪಾರಕ್ಕಾಗಿ ತುಂಬಿಕೊಂಡು ಬರುತ್ತಿದ್ದು ಬುಧವಾರ ಸಂಜೆ ಮಳೆರಾಯ ಕಾಟ ನೀಡುತ್ತಿದ್ದಾನೆ.ಕಳೆದ ಎರಡು ದಿನಗಳಿಂದ ವಾತಾವರಣ ಏರುಪೇರಾಗಿದ್ದು ಅಲ್ಲಲ್ಲಿ ಆಕಾಲಿಕ ತುಂತುರು ಮಳೆಯು ಸುರಿಯುವ ಸಂಭವಿದ್ದು ರೈತರ ಮೆಣಸಿನಕಾಯಿ ವ್ಯಾಪಾರಕ್ಕೆ ತೊಂದರೆಯಾಗುವ ಸಾಧ್ಯವಿದೆ ಮೋಡ ಕವಿದ ವಾತಾವರಣ ಮೆಣಸಿನಕಾಯಿ ನಾಳಿನ ವ್ಯಾಪಾರಕ್ಕೆ ಅಡ್ಡಿಪಡಿಸಬಹುದಾಗಿದೆ. ವ್ಯಾಪಾರಕ್ಕಾಗಿ ಇಟ್ಟ ಒಣಮೆಣಸಿನಕಾಯಿ ಇದೇ ತರಹ ತುಂತುರು ಮಳೆ ಬಂದರೆ ದರದಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಬಿಸಿಲಿನ ತಾಪಮಾನದಿಂದ ಲಕ್ಷಕ್ಕೂ ಅಧಿಕ ಒಣ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬರುತ್ತಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ರೈತರಿಗೆ ಉತ್ತಮ ದರ ಸಿಗುತ್ತಿದ್ದು ಸದ್ಯ ಅಕಾಲಿಕ ಮಳೆ ಬರುವುದರಿಂದ ರೈತನ ಮೆಣಸಿನಕಾಯಿ ದರ ಕಡಿಮೆ ಆಗಬಹುದು ಹಾಗಾಗಿ ಅಂಗಡಿಯ ಮಾಲೀಕರು ಕಣದ ತುಂಬೆಲ್ಲ ಮೆಣಸಿನಕಾಯಿ ಚೀಲಗಳಿಗೆ ಪ್ಲಾಸ್ಟಿಕ್ ತಾಡಪಲ್ಲು ಹೊದಿಚಿ ನೀರು ಸಿಡಿಯದ ಹಾಗೆ ಕವರ್ ಮಾಡಿದ್ದಾರೆ.