ಹೂವಿನ ಹಡಗಲಿ

ಥೈಲ್ಯಾಂಡ್ನಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಲಿರುವ ಇಬ್ಬರಿಗೆ ಸನ್ಮಾನ

ಥೈಲ್ಯಾಂಡ್ನಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಲಿರುವ ಇಬ್ಬರಿಗೆ ಸನ್ಮಾನ

ಹೂವಿನಹಡಗಲಿ 3: ಥೈಲ್ಯಾಂಡ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಹಡಗಲಿಯ ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್‌ ಪ್ರತಿನಿಧಿಗಳಾಗಿ ನಿವೃತ್ತ ಉಪನ್ಯಾಸಕ ಮಾಗಳ ಗಂಗಪ್ಪ ಹಾಗೂ ನಿವೃತ್ತ ಶಿಕ್ಷಕ ಮಲ್ಲಣ್ಣ ಹಲಗೇರಿ ಭಾಗವಹಿಸಲಿದ್ದಾರೆ.  ಈ ಹಿನ್ನೆಲೆಯಲ್ಲಿ ಟ್ರಸ್ಟ್‌ ವತಿಯಿಂದ ಇಬ್ಬರನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.  ಕಾರ್ಯಕ್ರಮದಲ್ಲಿ ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್ನ ಗೌರವಾಧ್ಯಕ್ಷ ಡಾ. ಶಿವಕುಮಾರ, ಅಧ್ಯಕ್ಷ ಕೊಡಿಹಳ್ಳಿ ಕೋಟ್ರೇಶ, ಯೋಗ ಸಾಧಕರಾದ ಎಚ್‌.ಎಂ. ಶಿವಮೂರ್ತಯ್ಯ, ಎ. ಗುರುಸಿದ್ದಪ್ಪ, ಹವಾಲ್ದಾರ್ ಗುರುರಾಜ್ ರಾವ್, ಮಹಮ್ಮದ್ ಗೌಸ್ ಬಿಲ್ಲುಖಾನ್, ಎಚ್‌. ಲೋಕೇಶ್, ಎಂ.ಡಿ. ನಿಂಗಪ್ಪ, ಖಾಜಾ ಹುಸೇನ್, ಎಂ. ಗುರುಬಸವರಾಜ, ಅಶೋಕ್ ಅಕ್ಕಸಾಲಿ, ರಿಹಾನ್ ಗೌಸ್, ಕಮಲಾ, ನಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ