ಸೇವಾ ಅಂಧರ ಸಂಸ್ಥೆಯ ಸಾಧಕರಿಗೆ ಸನ್ಮಾನ
ಸೇವಾ ಅಂಧರ ಸಂಸ್ಥೆಯ ಸಾಧಕರಿಗೆ ಸನ್ಮಾನ
ಮಂಗಳೂರು 24: ಹೆಚ್.ಆರ್ ಶಿವಕುಮಾರ್ ರವರಿಗೆ ದಿನಾಂಕ: 23 ರಂದು ಶಕ್ತಿನಗರ ಮಂಗಳೂರಿನಲ್ಲಿ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಏರಿ್ಡಸಿದ್ದು ಸಾನಿಧ್ಯ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೆಚ್.ಆರ್ ಶಿವಕುಮಾರ ರವರು ಅಂಗವಿಕಲ ಮಕ್ಕಳ ಕ್ಷೇತ್ರದಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ ಸನ್ಮಾನ ಪತ್ರ ವಿತರಿಸಿ ಗೌರವ ಸಮರ್ಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗಣೇಶ ಸೇವಾ ಟ್ರಸ್ಟ (ರಿ) ನ ಆಡಳಿತಾಧಿಕಾರಿಗಳಾದ ಡಾ// ವಸಂತಕುಮಾರ ಶೆಟ್ಟಿ, ಅಧ್ಯಕ್ಷರಾದ ಮಹಾಬಲ ಮಾರ್ಲ, ಖಚಾಂಚಿಗಳಾದ ಜಗದೀಶ್ ಶೆಟ್ಟಿ, ಹಾಗೂ ಮನೀಶಾ ನಾಯಕ್ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಕಲ್ಯಾಣಾಧಿಕಾರಿಗಳು. ಹಾಗೂ ದಿನೇಶ ಕುಮಾರ ಆಳ್ವಾ, ಚೆರಮೆನ್ ಎಮ್.ಎ.ಪಿ.ಎಸ್ ಗ್ರೂಫ್ ಆಫ್ ಇನ್‌ಸ್ಟಿಸ್ಟೂಶನ್. ಮತ್ತು ಪೌಂಡರ್ ಸಿ.ಎಫ್.ಓ ಕ್ರಾಪ್ಟಿಜನ್ ಪೌಡೇಂಶನ್ ಬೆಂಗಳೂರು ಇದರ ಸಂಸ್ಥಾಪಕಿ, ಕುಮಾರಿ, ಮಯೂರ ಬಾಲಸುಬ್ರಮಣಿಯಂರವರು, ಎನ್ ಸುಧೀರ್ ಶೆಟ್ಟಿ ಸಿ.ಎ, ಪೌಂಡರ್ ಅರ್ಜುನ್‌ಶೆಟ್ಟಿ ಪೌಂಡೆಶನ್ ಮುಂಬೈ, ಹಾಗೂ ಮುಂತಾದ ಗಣ್ಯರು ಭಾಗವಹಿಸಿದ್ದರು. ವಿಭಿನ್ನ ಸಾಮರ್ಥ್ಯದ ಮಕ್ಕಳು ತಯಾರಿಸಿದ ಅಲಂಕಾರಿಕ ವಸ್ತುಗಳು ಊದುಬತ್ತಿ, ಯಕ್ಷಗಾನ, ಮುಖವಾಡ , ರಂಗೋಲಿ, ಮ್ಯಾಟ್, ಮೇಣದ ಬತ್ತಿ, ವಿವಿಧ ರೀತಿಯ ಕ್ರಾಫ್ಟ್ ಕರ-ಕುಶಲ ವಸ್ತುಗಳು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುವವರ ಮನಸೆಳೆದರು.