ಬ್ಯಾಡ್ಗಿ

ಜೀವನ ಮತ್ತು ಕ್ರೀಡೆಯಲ್ಲಿ ಗೆಲ್ಲಲು ನ್ಯಾಯದ ಮಾರ್ಗ ಹಿಡಿಯಬೇಕು:ಬಸವರಾಜ ಬೊಮ್ಮಾಯಿ

ಜೀವನ ಮತ್ತು ಕ್ರೀಡೆಯಲ್ಲಿ ಗೆಲ್ಲಲು ನ್ಯಾಯದ ಮಾರ್ಗ ಹಿಡಿಯಬೇಕು:ಬಸವರಾಜ ಬೊಮ್ಮಾಯಿ

 

 ಬ್ಯಾಡಗ 30: ಜೀವನ ಮತ್ತು ಕ್ರೀಡೆಯಲ್ಲಿ ಗೆಲ್ಲಲೇಬೇಕೆಂದು ಆಟ ಆಡಬೇಕು. ಗೆಲ್ಲುವ ಸಲುವಾಗಿ ನಾವು ಅನ್ನ ಮಾರ್ಗ ಹಿಡಿಯದೇ ನ್ಯಾಯದ ಮಾರ್ಗ ಹಿಡಿಯಬೇಕು. ಇದು ಜೀವನದಲ್ಲಿ ಕಲಿಯುವ ಇನ್ನೊಂದು ಪಾಠ. ಹೀಗೆ ಕ್ರೀಡೆ ನಮ್ಮ ಬದುಕಿನಲ್ಲಿ ಹಲವಾರು ಅನುಭವದ ಪಾಠ ಹೇಳಿಕೊಡುತ್ತದೆ. ಅದಕ್ಕಾಗಿ ಕ್ರೀಡೆ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಏರಿ​‍್ಡಸಿದ *ಸಂಸದ ಕ್ರೀಡಾ ಮಹೋತ್ಸವ 2025-26* ರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನನಗೆ ಬಹಳ ಸಂತೋಷವಾಗುತ್ತಿದೆ. ಇಂತಹ ಕ್ರೀಡಾಕೂಟ ಏರಿ​‍್ಡಸಿ ಭಾಗವಹಿಸಿದ್ದಕ್ಕಾಗಿ ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಬೇಕು. ಅವರ ಚಿಂತನೆಯ ಭಾಗವಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಕ್ರೀಡೆಗಳನ್ನು ಆಡಿಸಲು ಯೋಜನೆ ಸಿದ್ಧಪಡಿಸಿ ರಾಜ್ಯದ ಕ್ರೀಡಾ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ, ನಮಗೂ ಮಾರ್ಗದರ್ಶನ ಮಾಡಿ ಇಂತಹ ಕ್ರೀಡೆ ಆಯೋಜನೆ ಮಾಡಿಸಿದ್ದಾರೆ.  

ರಾಜಕಾರಣಿಗಳು ಯಾವುದರ ಕೆಲಸಕ್ಕೆ ಗುದ್ದಲಿ ಹಾಕಲು ಮತ್ತು ಕತ್ತರಿ ಹಾಕಲು ಮಾತ್ರ ಸೀಮಿತ ಆಗಿದ್ದೇವು. ಅಂದರೆ, ಅಡಿಗಲ್ಲು ಮತ್ತು ಉದ್ಘಾಟನೆ ಮಾಡಲು ಸೀಮಿತ ಆಗಿದ್ದೇವು. ಇದು ಅಭಿವೃದ್ಧಿ ಸಲುವಾಗಿ ಮಾಡುವ ಕೆಲಸ. ಆದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಆಗಬೇಕಾದರೆ ಶಾಲೆಯಲ್ಲಿಯೇ ಪ್ರತಿಭೆಗಳನ್ನು ಗುರುತಿಸಬೇಕು. ಆ ಪ್ರತಿಭೆಗಳಿಗೆ ತಕ್ಕಹಾಗೆ ತರಬೇತಿ ಕೊಡಬೇಕು. ದೈಹಿಕ ಮಾನಸಿಕ ಸದೃಢತೆಯನ್ನು ಮಕ್ಕಳಲ್ಲಿ ತರಬೇಕು. ಒಂದು ವ್ಯಕ್ತಿತ್ವ ಬೆಳೆಯಬೇಕಾದರೆ ಕ್ರೀಡೆಯೂ ಮಹತ್ವದ ಪಾತ್ರ ವಹಿಸುತ್ತದೆ. ನಮಗೆ ವಿದ್ಯೆಯಿಂದ, ಶಿಕ್ಷಣದಿಂದ ಸಾಕಷ್ಟು ತಿಳುವಳಿಕೆ ಬಂದರೂ ಕೂಡ ಅದನ್ನು ಸಣ್ಣ ವಯಸ್ಸಿನಲ್ಲಿ ಕಾರ್ಯಗತ ಮಾಡುವುದೆಲ್ಲಿ ? ಉದಾಹರಣೆಗೆ ಕ್ರೀಡೆಯಲ್ಲಿ ಸ್ಪರ್ಧೆ ಮಾಡಬೇಕೆನ್ನುವುದು ಪ್ರತಿ ರಂಗದಲ್ಲಿ ಎಲ್ಲರಲ್ಲಿಯೂ ಇರುತ್ತದೆ. ಕಠಿಣ ಶ್ರಮದಿಂದ ಮುಂದೆ ಬರಬೇಕು ಎನ್ನುವುದು ಎಲ್ಲರಲ್ಲಿ ಇರುತ್ತದೆ. ಕ್ರೀಡೆಯನ್ನು ಶದ್ದೆಯಿಂದ ಕಲಿತು ಆಡಿದರೆ ಅದರಲ್ಲಿ ಯಶಸ್ಸು ಕಾಣುತ್ತೇವೆ. ಯಶಸ್ಸು ಕಾಣುವ ಮೊದಲ ಅನುಭವ ಮೃಳಿಗೆ ಕ್ರೀಡೆಯಲ್ಲಿ ಆಗುತ್ತದೆ ಎಂದು ಹೇಳಿದರು.ನಾನು ಹಾವೇರಿಯಲ್ಲಿ ಕ್ರೀಡಾ ಮಹೋತ್ಸವದಲ್ಲಿ ಹೆಣ್ಣು ಮಕ್ಕಳನ್ನು ನೋಡಿದಾಗ ಅವರು ಕ್ರೀಡಾಂಗಣಕ್ಕೆ ಹೋದಾಗ ಸಿಂಹಗಳಂತೆ ಆಗಿದ್ದರು. ಜೀವನದಲ್ಲಿ ಕೇವಲ ಗೆಲ್ಲುವುದಷ್ಟೇ ಅಲ್ಲ, ಸೋಲುವ ಅನುಭವ ಇದ್ದಾಗ ಜೀವನದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ಯಶಸ್ಸು ಸಿಕ್ಕಾಗ ಎಷ್ಟು ಸಂತೋಷವಾಗಿರುತ್ತೇವೊ ಸೋತಾಗ ಅಷ್ಟೇ ಧೈರ್ಯದಿಂದ ಇರಬೇಕು.  

ಗೆದ್ದಾಗ ದೊಡ್ಡ ಮನಸಿರಬೇಕು. ಸೋತಾಗ ಗಟ್ಟಿ ಮನಸಿರಬೇಕು. ಮೂರನೆಯದು ಕ್ರೀಡಾಮನೋಭಾವ. ಸೋಲು ಗೆಲುವು ಇರುತ್ತದೆ. ಗೆಲ್ಲುವ ಸಲುವಾಗಿ ನಾವು ಅನ್ಮ ಮಾರ್ಗ ಹಿಡಿಯದೇ ನ್ಯಾಯದ ಮಾರ್ಗ ಹಿಡಿಯಬೇಕು. ಇದು ಜೀವನದಲ್ಲಿ ಕಲಿಯುವ ಇನ್ನೊಂದು ಪಾಠ. ಹೀಗೆ ಕ್ರೀಡೆ ನಮ್ಮ ಬದುಕಿನಲ್ಲಿ ಹಲವಾರು ಅನುಭವದ ಪಾಠ ಹೇಳಿಕೊಡುತ್ತದೆ. ಅದಕ್ಕಾಗಿ ಕ್ರೀಡೆ ಬಹಳ ಮುಖ್ಯ ಆಟ ಆಡುವಾಗ ಎರಡು ಮನೋಭಾವನೆ ಇರುತ್ತದೆ. ಒಂದು ಮನೋಭಾವನೆ ನಾನು ಸೋಲಬಾರದು ಎಂದು ಆಟ ಆಡುವುದು. ರಕ್ಷಣಾತ್ಮಕವಾಗಿ ಆಡುವುದು. ಇನ್ನೊಂದು ಗೆಲ್ಲಲೇಬೇಕು ಎನ್ನುವ ಭಾವನೆ ಎರಡೂ ಅರ್ಥ ಅಷ್ಟೇ ಇದ್ದರೂ, ಗೆಲ್ಲಲೇಬೇಕು ಎನ್ನುವುದರಲ್ಲಿ ಹುರುಪು, ಹುಮಸ್ಸು ಕೊಡುವ ಶಕ್ತಿ ಇದೆ. ಜೀವನ ಮತ್ತು ಕ್ರೀಡೆಯಲ್ಲಿ ಗೆಲ್ಲಲೇಬೇಕೆಂದು ಆಟ ಆಡಬೇಕು. ಇದನ್ನು ನಮ್ಮ ಮಕ್ಕಳಿಗೆ ತಿಳಿಸಿ ಹೇಳಿದರೆ ಅವರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.*3ನೇ ಆರ್ಥಿಕ ಶಕ್ತಿ*ನಾವು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇವೆ. ಆದರೆ, ನಾವು ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಆರ್ಥಿಕವಾಗಿ ನಮ್ಮ ದೇಶ ನಾಲ್ಕನೇ ಸ್ಥಾನದಲ್ಲಿದೆ.  

ನಿನ್ನೆ ಸಂಸತ್ತಿನಲ್ಲಿ ನಮ್ಮ ಆರ್ಥಿಕ ಸಮೀಕ್ಷೆ ವರದಿ ಬಂದಿದೆ. ಆರ್ಥಿಕವಾಗಿ ಶೇ 7.4 ರಷ್ಟು ಬೆಳೆಯುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಕಾರಣ, ಜಿಎಸ್ ಟಿ ರಿಬೇಟ್ ಕೊಟ್ಟಿರುವುದರಿಂದ ಒಂದು ಲಕ್ಷ ಕೋಟಿ ರೂ. ಜನರ ಬಳಿ ಉಳಿತಾಯ ಆಯಿತು. ಅದನ್ನು ಜನರು ಬೇರೆ ಬೇರೆ ರೀತಿ ಖರ್ಚುಮಾಡಿದಾಗ ಆರ್ಥಿಕ ಅಭಿವೃಧಿ ಆಗುತ್ತದೆ. ಸರ್ಕಾರ ಬಲಿಷ್ಠ ಆಗಬೇಕು. ಜನ ಶ್ರೀಮಂತ ಆಗಬೇಕು. ಜನರು ತಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಕೊಡಬೇಕು. 11 ನೇ ಸ್ಥಾನದಲ್ಲಿದ್ದ ದೇಶ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಇನ್ನು ಕೆಲವೇ ವರ್ಷದಲ್ಲಿ ಜಪಾನನ್ನು ಹಿಂದೆ ಹಾಕಿ 3ನೇ ಸ್ಥಾನಕ್ಕೆ ಬರುತ್ತದೆ. ಅಮೇರಿಕಾ, ಚೈನಾ ನಂತರ ಭಾರತ ಬರುತ್ತದೆ. ನಾವೆಲ್ಲ ಭಾರತವನ್ನು ಒಂದು ಗುಲಾಮ ರಾಷ್ಟ್ರವಾಗಿ, ಬಡತನ ರಾಷ್ಟ್ರವಾಗಿ ವಿದೇಶೀಯರು ಹೀಯಾಳೀಸುವ ದೇಶವಾಗಿ ನೋಡಿರುವುದು.

ನಮ್ಮ ಯುವಕರು ಅಭಿವೃದ್ಧಿ ಆಗುತ್ತಿರುವ ದೇಶದ ನಾಗರಿಕರಾಗಿರುವುದು ಪುಣ್ಯ ಈ ದೇಶದಲ್ಲಿ ಅನುಭವ ಪಡೆದು ಈ ರಾಷ್ಟ್ರವನ್ನು ಇನ್ನುಷ್ಟು ಬಲಿಷ್ಟ ಮಾಡುವ ಕರ್ತವನ್ನು ಮಾಡಿ ಮುಂದೆ ಹೋಗಬೇಕೆಂದು ಹೇಳುತ್ತಿದ್ದೇನೆ. ಅದಕ್ಕೆ ಏಕ ಭಾರತ ಶ್ರೇಷ್ಠ ಭಾರತ ಅಂತ ಪಧಾನಿ ಕರೆ ಕೊಟ್ಟಿದ್ದಾರೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಯಲ್ಲಿಯೂ ಭಾರತ ಮುಂದೆ ಬರಬೇಕೆಂದು ಫಿಟ್ ಇಂಡಿಯಾ ಅಂಥ ಕಾರ್ಯಕ್ರಮ ಮಾಡಿದರು. ಆ ಮೇಲೆ ಖೇಲೋ ಇಂಡಿಯಾ ಅಂತ ಕರೆ ಕೊಟ್ಟರು. ಆ ಮೇಲೆ ಓಲಿಂಪಿಕ್ಸ್‌ ಬಂದಾಗ ಜೀತೋ ಇಂಡಿಯಾ ಅಂತ ಹೇಳಿದರು. ಈ ಎಲ್ಲ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಟೊಕಿಯೋದಲ್ಲಿ ನಡೆದ ಓಲಿಂಪಿಕ್ಸ್‌ ನಲ್ಲಿ ಭಾರತ ಅತಿ ಹೆಚ್ಚು ಪಶಸ್ತಿಗಳನ್ನು ಪಡೆಯಿತು. ಅಷ್ಟೇ ಅಲ್ಲ ವಿಕಲಚೇತನರ ಪ್ಯಾರಾ ಓಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಮೆಡಲ್ ಪಡೆದಿದೆ. ನಾನು ಸಿಎಂ ಆಗಿದ್ದಾಗ 75 ಕ್ರೀಡಾಪಟುಗಳಿಗೆ ವಿಶ್ವದ ಶ್ರೇಷ್ಟವಾಗಿರುವ ತರಬೇತಿ ಪಡೆಯಲು ನಾಲ್ಕು ವರ್ಷ ಪ್ರತಿ ವರ್ಷ 8 ಲಕ್ಷ ರೂ. ಮಂಜೂರಾತಿ ಮಾಡಿದ್ದೆ.

ಅಂದರೆ ಒಬ್ಬ ಕ್ರೀಡಾಪಟುವಿಗೆ 32 ಲಕ್ಷ ರೂ. ನೀಡುತ್ತಿದ್ದೇವು. ಇದರ ಫಲಶೃತಿಯಾಗಿ ನಾಲ್ಕು ಜನ ಓಲಿಂಪಿಕ್ಸ್ನಲ್ಲಿ ಮೆಡಲ್ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಆಡುವುದನ್ನು ನೋಡಿ ಅನೇಕ ಹುಡುಗರು ಬ್ಯಾಟ್ ಹಿಡಿಯುತ್ತಾರೆ. ಈಗ ವೈಭವ ಸೂರ್ಯವಂಶಿ ಅಂಥ ಸಣ್ಣ ಹುಡುಗ ಈಗ ಎಲ್ಲರಿಗೂ ಗೊತ್ತಾಗಿದ್ದಾನೆ. ನಮ್ಮ ಬ್ಯಾಡಗಿ ಮಕ್ಕಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು. ಯಾರು ಅತ್ಯುತ್ತಮವಾಗಿ ಜಿಲ್ಲೆಯಲ್ಲಿ ಬರುತ್ತಾರೆ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಲು ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದ್ದೇನೆ. ನ್ಯಾಯ ಸಮ್ಮತವಾಗಿ ತೀಪುಗಾರರ ತೀಪು ಒಪ್ಪಿಕೊಂಡು ಆಟ ಆಡಿ, ಗೆದ್ದವರು ಖುಷಿಯಿಂದ ಸೋತವರು ಮುಂದಿನ ಬಾರಿ ನಮಗೆ ಅವಕಾಶ ಇದೆ ಎನ್ನುವ ಭಾವನೆಯಿಂದ ತೆರಳಿ ಎಂದು ಹೇಳಿದರು. ಈ ಸಂಧರ್ಭದಲ್ಲಿ ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ  ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ  ಡಿ.ಎಂ.ಸಾಲಿ, ಮಂಡಳದ ಅಧ್ಯಕ್ಷರಾದ  ನಿಂಗಪ್ಪ ಬಟ್ಟಲಕಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಶಿವಯೋಗಿ ಶಿರೂರ, ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ