ಕಥೆ ಮತ್ತು ವಿಶೇಷ ಲೇಖನಗಳು

ಉತ್ತರ ಕನರ್ಾಟಕದ ಕ್ರಿಕೆಟ್ ಕಲಿ ಉತ್ತುಂಗಕ್ಕೆ

ಉತ್ತರ ಕನರ್ಾಟಕದ ಕ್ರಿಕೆಟ್ ಕಲಿ ಉತ್ತುಂಗಕ್ಕೆ

-ಮೀರಾ ತಟಗಾರ, ಮಹಾಲಿಂಗಪುರ

ಕೆಲವು ದಶಕಗಳ ಹಿಂದೆ ಭಾರತ ದೇಶವು ಕ್ರೀಡಾ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿರಲಿಲ್ಲ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಒಳ್ಳೆಯ ಕ್ರೀಡಾಪಟುಗಳಿದ್ದರೂ ಸಹಿತ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅವಕಾಶ, ಕ್ರೀಡಾ ಮಾಹಿತಿ ಹಾಗೂ ಮೈದಾನದ ಕೊರತೆ ಇನ್ನೂ ಹಲವಾರು ಪೂರಕವಾದ ವಾತಾವರಣವಿಲ್ಲದೆ ದೇಶದ ಕ್ರೀಡಾ ಕ್ಷೇತ್ರವು ಕಳಾಹೀನವಾಗಿತ್ತು. ಇತ್ತೀಚಿನ ದಶಕಗಳಲ್ಲಿ ಕ್ರೀಡೆಗೆ ನಮ್ಮ ಸರಕಾರಗಳು ಹೆಚ್ಚಿನ ಆದ್ಯತೆಯನ್ನು ನೀಡುವುದರ ಮುಖಾಂತರ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಕಾರಣವಾಗಿವೆ. 

ನಮ್ಮ ದೇಶವು ಹಳ್ಳಿಗಾಡ ಪ್ರದೇಶ, ಹಳ್ಳಿಗಳಲ್ಲಿ ಹಲವಾರು ಗ್ರಾಮೀಣ ಕ್ರೀಡೆಗಳು ಹೆಸರು ಮಾಡಿವೆ. ಅದರಲ್ಲಿ ಖೋಖೋ, ಕಬಡ್ಡಿ, ಕ್ರಿಕೆಟ್ ಮುಂತಾದ ಕ್ರೀಡೆಗಳು ಸೇರಿವೆ. ಇದರಲ್ಲಿ ಕಬಡ್ಡಿಯು ದೇಶದ ಗ್ರಾಮೀಣ ಜನರ ಆಟವಾಗಿದೆ. ಈ ಆಟವನ್ನು ಪ್ರತಿಯೊಬ್ಬರೂ ವಯಸ್ಸನ್ನು ಲೆಕ್ಕಿಸದೆ ಆಡುವ ಆಟವಾಗಿದೆ. ಇದರ ಜನಪ್ರಿಯತೆಯನ್ನು ತಕ್ಕಮಟ್ಟಿಗೆ ಕ್ರಿಕೆಟ್ ಆಟವು ಅದರ ಸ್ಥಾನವನ್ನು ಆಕ್ರಮಿಸಿಕೊಂಡು ಆಧುನಿಕ ಕ್ರಿಕೆಟ್ ಮನೆ ಮನೆಗೆ ತಲುಪಿ ಎಲ್ಲರ ಮನ ಮುಟ್ಟಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ನಮ್ಮ ಉತ್ತರ ಕನರ್ಾಟಕ ಆಥರ್ಿಕ ದೃಷ್ಟಿಯಿಂದ ನೋಡಿದರೆ ಹಿಂದುಳಿದ ಪ್ರದೇಶವಾಗಿದ್ದು, ಯುವಕರಾದಿಯಾಗಿ ಕ್ರಿಕೆಟ್ನ್ನು ಆಡಿ ಆಡಿಸಿ ಕ್ರಿಕೆಟ್ಗೆ ಮೊದಲ ಸ್ಥಾನವನ್ನು ಕೊಟ್ಟಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲ ಗ್ರಾಮ, ಪಟ್ಟಣಗಳ ಗಲ್ಲಿ ಗಲ್ಲಿಗಳಲ್ಲಿಯೂ ಕೂಡಾ ಆಡುವ ಕ್ರೀಡೆಯಾಗಿದೆ. ಇದರಿಂದ ಸಹಜವಾಗಿ ಯುವಕರು ಕ್ರಿಕೆಟ್ ಆಟದ ಕಡೆಗೆ ವಾಲುತ್ತಿದ್ದಾರೆ. ಬಡತನದಲ್ಲಿಯೂ ಈ ಭಾಗದ ಯುವಕರು ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದರೆ ಕ್ರಿಕೆಟ್ ಜ್ವರ ಎಷ್ಟಿದೆ ಎಂದು ಗೊತ್ತಾಗುತ್ತದೆ.

ಏನಾದರೂ ಸಾಧಿಸಬೇಕೆಂದು ಛಲ ತೊಟ್ಟು ಶ್ರಮವಹಿಸಿ, ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಅವಕಾಶಗಳು ತಾವಾಗಿಯೇ ಬರುತ್ತವೆ ಎನ್ನುವುದಕ್ಕೆ ಇಲ್ಲಿ ಉದಾಹರಣೆ ಉತ್ತರ ಕನರ್ಾಟಕ ಭಾಗದ ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಸಮೀಪದ ಸಣ್ಣ ಹಳ್ಳಿ ಕೆಸರಗೊಪ್ಪದ ಬಡ ರೈತ ಅಜರ್ುನ ಸಸಾಲಟ್ಟಿಯವರ ಮಗ ಪ್ರಭು. ಈತ ಭಾರತೀಯ ಕ್ರಿಕೆಟ್ ಮಂಡಳಿಯ ಅಂಗವಾದ ಕೆ.ಎಸ್.ಸಿ.ಎ. ರಾಯಚೂರ ಝೋನ್ ತಂಡಕ್ಕೆ ಇಗ್ಗೆ 3 ವರ್ಷಗಳಿಂದ ಒಳ್ಳೆಯ ಆಟವನ್ನು ಆಡಿ ರಾಜ್ಯ ಆಯ್ಕೆ ಸಮಿತಿಯ ಕದವನ್ನು ತಟ್ಟುತ್ತಿದ್ದಾನೆ. 2017 ಹಾಗೂ 2018 ರಲ್ಲಿ ರಾಯಚೂರ ಝೋನ್ ತಂಡವು ಐತಿಹಾಸಿಕ ಗೆಲುವನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದಂತಹ ತಂಡದಲ್ಲಿ ಸ್ಥಾನವನ್ನು ಪಡೆದು 5 ಪಂದ್ಯಗಳನ್ನು ಆಡಿ ಬ್ಯಾಟಿಂಗ್ ವಿಭಾಗದಲ್ಲಿ 350 ರನ್ನುಗಳಲ್ಲಿ 2 ಅರ್ಧಶತಕಗಳು ಹಾಗೂ 1 ಅಜಯ ಶತಕವನ್ನು ಗಳಿಸುವುದರ ಮುಖಾಂತರ ಬ್ಯಾಟಿಂಗ್ ವಿಭಾಗದಲ್ಲಿ ತನ್ನ ಪಾರಮ್ಯವನ್ನು ಮೆರೆದಿದ್ದಾನೆ. ಇದರೊಂದಿಗೆ ಒಳ್ಳೆಯ ವಿಕೇಟ್ ಕೀಪಿಂಗ್ ಕೂಡಾ ಮಾಡುವ ಈತ ಇದೇ ಪಂದ್ಯಾವಳಿಯಲ್ಲಿ 14 ಹುದ್ದರಿಗಳನ್ನು ಪಡೆಯುವುದರ ಮುಖಾಂತರ ಒಟ್ಟಿಗೆ ಸವರ್ಾಂಗೀಣ ಆಟವನ್ನು ಆಡಿ ಆಯ್ಕೆ ಸಮಿತಿಯ ಗಮನವನ್ನು ಸೆಳೆದಿದ್ದಾನೆ. ಕೆ.ಎಸ್.ಸಿ.ಎ. ನಡೆಸಿದ 14 ವರ್ಷ ಒಳಗಿನ ಕನರ್ಾಟಕ ರಾಜ್ಯ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜ್ಯದ 26 ಕ್ರಿಕೆಟ್ ಆಟಗಾರರನ್ನು ಆಯ್ಕೆ ಮಾಡಿತ್ತು. ಇದರಲ್ಲಿ ಪ್ರಭು ಕೂಡಾ ಒಬ್ಬ. ನಂತರ ಕನರ್ಾಟಕ ರಾಜ್ಯ ತಂಡದ ಅಂತಿಮ 15 ಸದಸ್ಯರುಗಳಲ್ಲಿ ಪ್ರಭು ಸಸಾಲಟ್ಟಿ ಮತ್ತೇ ಆಯ್ಕೆಯಾಗುವುದರ ಮುಖಾಂತರ ನಮ್ಮ ಉತ್ತರ ಕನರ್ಾಟಕ ಭಾಗಕ್ಕೆ ಹಾಗೂ ಮಹಾಲಿಂಗಪುರ ಹಾಗೂ ತನ್ನ ಪುಟ್ಟ ಗ್ರಾಮ ಕೆಸರಗೊಪ್ಪಕ್ಕೆ ಹೆಸರು ತಂದಿದ್ದಾನೆ. ಈ ತಂಡದ ತರಬೇತುದಾರರಾಗಿ ಕನರ್ಾಟಕ ರಾಜ್ಯದ ರಣಜಿ ತಂಡದ ಆಟಗಾರ ರಾಜಶೇಖರ ಶಾನಬಾಳ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. 

ಪ್ರಭು ಸಸಾಲಟ್ಟಿ ತಂದೆ ಅಜರ್ುನ ಸಸಾಲಟ್ಟಿ ಒಬ್ಬ ಬಡ ರೈತನಾಗಿದ್ದು, ಕ್ರೀಡಾ ಪ್ರೇಮಿಯೂ ಹೌದು. ಕ್ರಿಕೆಟ್ ಅವನ ಪಂಚಪ್ರಾಣ. ಕೇವಲ 3 ಎಕರೆ ಜಮೀನು ಹೊಂದಿರುವಂತದ್ದು ಅದರಲ್ಲಿ ಬರುವಂತಹ ಸ್ವಲ್ಪ ಆದಾಯದಲ್ಲಿ ತನ್ನ ಕುಟುಂಬಕ್ಕೆ ಮಾಡುವ ವೆಚ್ಚವನ್ನು ಬದಿಗೊತ್ತಿ ತರಬೇತಿಗೆ ಬೇಕಾಗುವ ಬಾಲಿಂಗ್ ಮಶಿನ್, ಟಫರ್್ ಪಿಚ್, ನೆಟ್ ಹಾಗೂ ಉತ್ತಮ ಗುಣಮಟ್ಟದ ಎಲ್ಲ ಕ್ರಿಕೆಟ್ ಸಾಮಗ್ರಿಗಳನ್ನು ಪೂರೈಸಿ ಪ್ರೋತ್ಸಾಹಿಸುವ ಮುಖಾಂತರ ತನ್ನ ಮಗ ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರನಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಹೆಬ್ಬಯಕೆಯನ್ನು ಹೊತ್ತು ಕಾರ್ಯಪ್ರವೃತ್ತನಾದ. 2016 ರಲ್ಲಿ ಮಹಾಲಿಂಗಪುರ ನಗರದಲ್ಲಿ ಕ್ರಿಕೆಟ್ ಲವರ್ಸ್ ಟ್ರೋಫಿ ಪಂದ್ಯಾವಳಿ ಜರುಗುತ್ತಿತ್ತು. ಆ ವೇಳೆ ಪಂದ್ಯಾವಳಿಗೆ ಭಾರತದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ವೇಗದ ಬೌಲರ್ ದೊಡ್ಡ ಗಣೇಶ ಮುಖ್ಯ ಅತಿಥಿಗಳಾಗಿ ಆಗಮಿಸುವ ಸುದ್ದಿ ತಿಳಿದು ಆಯೋಜಕರೊಂದಿಗೆ ದೊಡ್ಡ ಗಣೇಶ ಅವರು ನೀಡಿದ ಸಲಹೆಯಂತೆ ಬೆಂಗಳೂರಿಗೆ ತನ್ನ ಮಗನನ್ನು ಕರೆದುಕೊಂಡು ಹೋಗಿ ಐ.ಪಿ.ಎಲ್. ಆಟಗಾರ ರಾಜು ಬಟ್ಕಳ ಇವರ ಸಹಾಯದೊಂದಿಗೆ ಅಕಾಡೆಮಿಗೆ ಒಂದು ವರ್ಷದ ಅವಧಿಯ ತರಬೇತಿಗೆ ದಾಖಲು ಮಾಡಿದರು. ಈ ಸಂದರ್ಭದಲ್ಲಿ ಇವರಿಗೆ ಸಲಹೆ, ಸೂಚನೆಗಳನ್ನು ನೀಡಿದ ಬನಹಟ್ಟಿಯ ಪ್ರಕಾಶ ಕರ್ಲಟ್ಟಿ ಹಾಗೂ ಹಾರೂನ ಬೇವೂರ, ಸಿ.ಎಲ್. ಟ್ರೋಫಿಯ ಸಂಚಾಲಕರು ಎಸ್. ಡಿ. ಮಾಗಿ ಹಾಗೂ ಮೀರಾ ತಟಗಾರ ಇವರು ಸಾಥ್ ನೀಡಿದರು. ಧಾರವಾಡದ ಎಸ್.ಡಿ.ಎಮ್. ಅಕ್ಯಾಡೆಮಿಯಲ್ಲಿಯೂ ತರಬೇತಿಯನ್ನು ಪಡೆದಿದ್ದಾನೆ. 

ನಂತರದ ದಿನಗಳಲ್ಲಿ ಇದನ್ನು ಗಮನಿಸಿದ ಸ್ಥಳೀಯ ಹಿರಿಯ ಕ್ರಿಕೆಟ್ ಆಟಗಾರ ಮತ್ತು 19 ವರ್ಷದ ಒಳಗಿನ ರಾಯಚೂರ ಝೋನ್ ಮಾಜಿ ನಾಯಕ ರವಿ ಬಿದರಿ ಹಾಗೂ ಹಿರಿಯ ಆಟಗಾರ ಶ್ರೀಕಾಂತ ಮಾಗಿ ಅವರು ಸೇರಿಕೊಂಡು ಈ ಹುಡುಗನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ಮಹಾಲಿಂಗಪುರ ಕ್ರಿಕೆಟ್ ಅಕ್ಯಾಡೆಮಿ ಮಾಡುವ ಸಲುವಾಗಿ ಸಿ.ಕೆ. ಚಿಂಚಲಿ ಶಾಲೆಯ ಟ್ರಸ್ಟಿನವರಿಗೆ ಮೈದಾನಕ್ಕಾಗಿ ಮನವಿ ಮಾಡಿಕೊಂಡು ಅಕ್ಯಾಡೆಮಿಯನ್ನು ಸ್ಥಾಪಿಸುವ ಮುಖಾಂತರ ಪ್ರಭು ಸಸಾಲಟ್ಟಿ ದೂರದ ಊರಿಗೆ ಹೋಗಿ ತರಬೇತಿ ಪಡೆಯುವ ಗೋಳು ತಪ್ಪಿಸಿ ಅವನ ಸವರ್ಾಂಗೀಣ ಆಟದ ಅಭಿವೃದ್ಧಿಗೆ ಹಾಗೂ ಇಲ್ಲಿಯವರೆಗೂ ಸಾಧಿಸಿದ ಸಾಧನೆಗೆ ಇವರು ನೀಡಿದ ಪ್ರೋತ್ಸಾಹ ಅನನ್ಯ. ಇದಕ್ಕೆ ಮೊದಲು ಹಿರಿಯ ಕ್ರಿಕೆಟಿಗ ಶಂಕರ ಸೊಲ್ಲಾಪೂರ ಹಾಗೂ ಡೆನಿಯಲ್ ನ್ಯೂಟನ್ ಇವರ ಗರಡಿಯಲ್ಲಿ ತರಬೇತಿಯನ್ನು ಪಡೆದಿರುವುದನ್ನು ನೆನಪಿಸಿಕೊಳ್ಳುತ್ತಾನೆ.

ಮಹಾಲಿಂಗಪುರ ಕ್ರಿಕೆಟ್ ಅಕ್ಯಾಡೆಮಿಗೆ, ಸಿ.ಕೆ. ಚಿಂಚಲಿ ಶಾಲೆಯ ಸಿಬ್ಬಂದಿ ವರ್ಗಕ್ಕೆ ಹಾಗೂ ಸ್ಥಳೀಯ ವರದಿಗಾರರಿಗೆ, ಪರೋಕ್ಷವಾಗಿ, ಅಪರೋಕ್ಷವಾಗಿ ಕ್ರಿಕೆಟ್ ಉನ್ನತಿಗೆ ಸಹಾಯ ಸಹಕಾರ ನೀಡಿದ ಎಲ್ಲ ಮಹನೀಯರಿಗೂ ಪ್ರಭು ಸಸಾಲಟ್ಟಿಯ ತಂದೆ ಅಜರ್ುನ ಇವರು ಕೃತಜ್ಞತೆಯನ್ನು ಅಪರ್ಿಸಿದ್ದಾರೆ.


ಸುದ್ದಿ ಓದಿ