ವಿಕಲಚೇತನ ಆರೈಕೆದಾರರಿಗೆ ಸರಕಾರ ಸಹಾಯ ಸಹಕಾರ ನೀಡಬೇಕು
ವಿಕಲಚೇತನ ಆರೈಕೆದಾರರಿಗೆ ಸರಕಾರ ಸಹಾಯ ಸಹಕಾರ ನೀಡಬೇಕು
ಕುಕನೂರಿ 30: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಯಲಬುರ್ಗಾ ಇವರ ಸಹಯೋಗದಲ್ಲಿ ಮಂಗಳವಾರ ಕುಕನೂರಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೈಕೆದಾರರನ್ನು ಸರ್ಕಾರ ಗುರುತಿಸಿದ್ದು ವಿವಿಧ ಸಂಘ ಸಂಸ್ಥೆಗಳು ಕೂಡ ಇವರಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ವೀರಭದ್ರೇಶ್ವರ ಸಂಸ್ಥೆಯ ಅಧ್ಯಕ್ಷ ಈರ್ಪ ಕರೇಕುರಿ ಮಾತನಾಡಿ ಆರೈಕೆದಾರರು ತಮ್ಮ ವಿಕಲಚೇತನ ಮಕ್ಕಳ ಆರೈಕೆಯ ಹೊರೆಯಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಅಗತ್ಯಗಳಿಗೆ ಸ್ಪಂದಿಸಿ ಅವರ ಜೀವನಮಟ್ಟ ಸುಧಾರಿಸಲು ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾದ ಅಗತ್ಯವಿದೆ ಎಂದರು. ಸಮಾಜದ ಮುಖ್ಯ ಅತಿಥಿಗಳಾಗಿ ರಾಜ್ಯ ಅಂಗವಿಕಲರ ಒಕ್ಕೂಟದ ಪ್ರತಿನಿಧಿಯಾದ ವಿರುಪಾಕ್ಷಪ್ಪ ಹದ್ಲಿ ಮಾತನಾಡಿ ವಿಕಲಚೇತನರು ಶೇ.5ಅ ಅನುದಾನದ ಸೌಲಭ್ಯಗಳನ್ನು ಸಮರ್ಕವಾಗಿ ಪಡೆದುಕೊಳ್ಳಬೇಕು. ಆರೈಕೆದಾರರನ್ನು ಸರ್ಕಾರ ಇತ್ತೀಚೆಗೆ ಗುರುತಿಸಿದ್ದು ಶೇ.5ಅ ಅನುದಾನದಲ್ಲಿ ಇವರಿಗೆ ಜೀವನೋಪಾಯ, ವೈದ್ಯಕೀಯ ಹಾಗೂ ವಿಕಲಚೇತನ ಮಕ್ಕಳ ಪುನಃಶ್ಚೇತನಕ್ಕೆ ನೆರವು ಕಲ್ಪಿಸಬೇಕೆಂದು ಮನವಿ ಮಾಡಿದರು. ಈರಮ್ಮ ಕವಲೂರು ಸ್ವಾಗತಿಸಿದರು. ವೀರಭದ್ರ್ಪ ನಿಡಗುಂದಿ ನಿರೂಪಿಸಿದರು. ಮಂಜುಳಾ ಹಡಪದ ವಂದಿಸಿದರು. ಈ ಸಂದರ್ಭದಲ್ಲಿ ಕೊಟ್ರಯ್ಯ, ಬಸವರಾಜ ಕ್ಯಾದಗುಂಪಿ, ಮಂಜುಳಾ ಸಂತೋಜಿ, ಶರಣಯ್ಯ, ಭರತರೆಡ್ಡಿ, ಕಸ್ತೂರಿ ಆಡೂರ ಮುಂತಾದವರು ಉಪಸ್ಥಿತರಿದ್ದರು.