ಬಳ್ಳಾರಿ

ಬಂಜಾರ ಸಮಾಜದ ನಿರೂಪಣೆ ಮತ್ತು ಅಪೇಕ್ಷೆಗಳಲ್ಲಿ ಹೆಣ್ಣು

ಬಂಜಾರ ಸಮಾಜದ ನಿರೂಪಣೆ ಮತ್ತು ಅಪೇಕ್ಷೆಗಳಲ್ಲಿ ಹೆಣ್ಣು

 

ಬಂಜಾರ ಸಮಾಜದ ನಿರೂಪಣೆ ಮತ್ತು ಅಪೇಕ್ಷೆಗಳಲ್ಲಿ ಹೆಣ್ಣು 


ಹಂಪಿ 26: ‘ಸಮಾಜ ಮತ್ತು ಸಂಸ್ಕೃತಿಯು ಮನುಷ್ಯನ ಭಾಷಿಕ ಆಕರಗಳಿಗೆ ಸಹಾಯಕವಾಗುತ್ತದೆ’ ಎಂದು ಸಂಶೋಧಕರಾದ ರವಿಕುಮಾರ್ ಜಾಧವ್ ಅವರು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಅಕ್ಟೋಬರ್ 24 ಗುರುವಾರದಂದು ಹಮ್ಮಿಕೊಂಡಿದ್ದ 269ನೇ ಆನ್‌ಲೈನ್ ವಾರದಮಾತು ಕಾರ್ಯಕ್ರಮದಲ್ಲಿ “ಬಂಜಾರ ಸಮಾಜದ ನಿರೂಪಣೆ ಮತ್ತು ಅಪೇಕ್ಷೆಗಳಲ್ಲಿ ಹೆಣ್ಣು” ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಮನುಷ್ಯ ಸಮಾಜದಲ್ಲಿ ಲಿಂಗತಾರತಮ್ಯ, ಲಿಂಗಭೇದ ನೀತಿ ಎಂಬ ಪುರುಷಾಧಿಕಾರ ನಿರ್ಮಿತವಾಗಿದೆ. ಗಂಡಿಗೆ ಹೆಣ್ಣು ಅಧೀನತೆಯ ಭಾಗವಾಗಿ ಹಲವು ವಲಯಗಳಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂದರು. ಮುಂದುವರೆದು ಸಾಮಾಜಿಕ ವ್ಯವಸ್ಥೆಯೊಳಗೆ ಪಿತೃಪ್ರಧಾನ ಆಲೋಚನೆಗಳು ಹೆಣ್ಣನ್ನು ಕೇವಲ ಗೃಹಕೇಂದ್ರಿತ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ವಿಷಯದಲ್ಲಿ ಸಮಾಜವು ಸದಾ ಎಚ್ಚರವನ್ನು ವಹಿಸುತ್ತದೆ. ಬಂಜಾರ ಸಮುದಾಯದ ಗಾದೆ, ಒಗಟು, ನುಡಿಗಟ್ಟು, ಬೈಗುಳ, ನಗೆಹನಿ, ಕಥೆ, ಗೀತೆ ಈ ನಿರ್ದೇಶಿತ ಭಾಷಿಕ ನಿರ್ವಚನಗಳಲ್ಲಿ ಹೆಣ್ಣು ಹೇಗಿರಬೇಕು, ಹೇಗಿರಬಾರದು, ಎಲ್ಲಿ, ಹೇಗೆ ಮಾತನಾಡಬೇಕು ಎನ್ನುವ ನಿಷೇಧ ಮತ್ತು ನಿರ್ಬಂಧಗಳನ್ನು ಉದಾಹರಣೆ ಸಹಿತ ಅವರು ವಿವರಿಸಿದರು.  

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಮಹಾದೇವಯ್ಯ ಅವರು, ವಿಭಾಗದ ಸಂಶೋಧನಾರ್ಥಿಗಳಾದ ಚಂದಸ್ವಾಮಿ, ದೀಪ ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ, ಶಿಲ್ಪಾ ಹೆಚ್‌.ವಿ ಅವರು ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾ ವಿದ್ಯಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ