ಬ್ಯಾಡ್ಗಿ

ದೇಶವು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುತ್ತಲಿದೆ- ಶಾಸಕ ಶಿವಣ್ಣನವರ

ದೇಶವು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುತ್ತಲಿದೆ- ಶಾಸಕ ಶಿವಣ್ಣನವರ

        ಬ್ಯಾಡಗಿ 27 : ನಮ್ಮ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ದೇಶದಲ್ಲಿ ಈಗ ಎಲ್ಲವೂ ಸಾಧ್ಯವಾಗುತ್ತಿದೆ. ಇಲ್ಲ ಎನ್ನುವ ಮಾತೇ ಇಲ್ಲ, ಇದೇ ನಮ್ಮ ದೇಶದ ಸಾಧನೆ ಎಂದು  ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಸೋಮವಾರ ಅವರು ತಾಲೂಕಿನ ಕ್ರೀಡಾಂಗಣದಲ್ಲಿ ನಡೆದ 77 ನೇ ಗಣ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ನಮ್ಮ ದೇಶವು ಸ್ಟಾರ್ಟಪ್ನಲ್ಲಿ ವಿಶ್ವದ ಮೂರನೇ. ಸ್ಥಾನದಲ್ಲಿ ಇದ್ದೇವೆ. ಇದರ ಜೊತೆಗೆ ಬಡವರು, ಅಸಹಾಯಕರು ಜನಸಾಮಾನ್ಯರು ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಜನತೆಯನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಿದ್ದಾರೆ ಸ್ವಾತಂತ್ರ್ಯಾನಂತರ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಎಲ್ಲಾ ರಂಗಗಳಲ್ಲಿಯೂ ಭಾರತ ಮುಂದುವರಿದ ಸಶಕ್ತ ಸದೃಢ ರಾಷ್ಟ್ರ ನಿರ್ಮಾಣವಾಗುತ್ತಲಿದೆ

         ಭಾರತ ದೇಶವು ಅಭಿವೃದ್ಧಿ ಹೊಂದಲು ಅನೇಕ ರಾಜಕೀಯ ಧುರೀಣರು ಶ್ರಮಿಸಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ, ನೀರಾವರಿ, ಶಿಕ್ಷಣ ರಂಗ, ಆರ್ಥಿಕ ಉದ್ಯೋಗ, ಬಡತನ ನಿವಾರಣೆ, ಅಸ್ಪ್ರಶ್ಯೋದ್ದಾರ ಮಾಡುವಲ್ಲಿ ಎಲ್ಲಾ ಸರ್ಕಾರಗಳು ಶ್ರಮಿಸಿವೆ. ಭವಿಷ್ಯತ್ತಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿ ದೇಶಾಭಿಮಾನ ರಾಷ್ಟ್ರ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಎಲ್ಲರಲ್ಲೂ ರಾಷ್ರಾಭಿಮಾನ ಬೆಳೆದು ಬರುವ ಅವಶ್ಯಕತೆಯಿದೆ. ವಿವಿಧತೆಯಲ್ಲಿ ಏಕತೆಯಿಂದ ಬಾಳುವ ಮನೋಭಾವ ಎಲ್ಲರಲ್ಲೂ ಬೆಳೆದು ಬರಬೇಕೆಂದು ಆಶಿಸಿದರು. ರಾಜ್ಯ ಪಂಚ ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲ ಮಾತನಾಡಿ ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳಾದ ಅನ್ನ ಭಾಗ್ಯ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಶಕ್ತಿ ಯೋಜನೆ ಹಾಗೂ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಿದೆ.

       ಈ ಯೋಜನೆಗಳು ಜಾರಿಯಾಗಿ ಎರಡೂವರೆ ವರ್ಷಗಳು ಆಗುತ್ತಾ ಬಂದಿವೆ.  ಈ ಯೋಜನೆಗಳು  ಜನರಿಗೆ ತಲುಪಿ ಜನತೆ ರಾಜ್ಯದಲ್ಲಿ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆಂದರು.ತಹಶೀಲ್ದಾರ ಚಂದ್ರಶೇಖರ ನಾಯ್ಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ  ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ  ಚನ್ನಬಸಪ್ಪ ಹುಲ್ಲತ್ತಿ,ಶಂಭನಗೌಡ ಪಾಟೀಲ್, ಅಬ್ದುಲ್ ಮುನಾಫ್ ಯರೇಸೀಮಿ, ರಮೇಶ ಸುತ್ತಕೊಟಿ, ಮಂಜುನಾಥ ಭೊವಿ,ಡಿ, ಎಚ್,ಬುಡನಗೌಡ, ಗೀರೀಶ್ ಇಂಡಿಮಠ, ತಾಲೂಕ ಅಧಿಕಾರಿಗಳಾದ ಕೆ ಎಮ್ ಮಲ್ಲಿಕಾರ್ಜುನ್,ಮಾರ್ತಾಂಡೆಪ್ಪ   ಚಿಕ್ಕಣ್ಣನವರ, ವಿನಯಕುಮಾರ ಹೊಳೆಪ್ಪಗೋಳ, ಆಂಜನೇಯ,ಸಿ,ಬಿ, ಪ್ರಸಾದಿಮಠ, ಗಣೇಶ ಕಮ್ಮಾರ, ಅಶೋಕ ಕುರುಬರ, ಭಾರತಿ ಕುರಿ, ಭಾರತಿ ನಾಯ್ಕ, ಎಸ್,ಜಿ,ಕೋಟಿ, ಸ್ವಾಗತಿಸಿದರು, 


ಸುದ್ದಿ ಓದಿ