ಜೇಮ್ಸ್ ಸಿನೆಮಾದ ಸಲಾಮ್ ಸೋಲ್ಜರ್ ಹಾಡು ಸೈನಿಕರಿಗೆ ಅರ್ಪಿತ
ಬೆಂಗಳೂರು ೧೧ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನೆಮಾದ ಸಲಾಮ್ ಸೋಲ್ಜರ್ ಹಾಡು ಭಾರತೀಯ ಸೈನಿಕರಿಗೆ ಅರ್ಪಿತವಾಗಿದೆ.ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಸಿನೆಮಾ ತಂಡ ಸೈನಿಕರಿಗೆ ಗೌರವ ಸಲ್ಲಿಸುವ ಸಲಾಮ್ ಸೋಲ್ಜರ್ ಹಾಡಿನ ಲಿರಿಕಲ್ ವೀಡಿಯೊ ಬಿಡುಗಡೆ ಮಾಡಿದೆ. ಖ್ಯಾತ ನಟ ಕಿಚ್ಚ ಸುದೀಪ್ ಹಾಡನ್ನು ಲೋಕಾರ್ಪಣೆ ಮಾಡಿದ್ದಾರೆ. ಪುನೀತ್ ಅಭಿಮಾನಿಗಳಿಗೆ ರೋಮಾಂಚನಕಾರಿ ಸಂಗತಿಯೆಂದರೆ ಇದು ಪುನೀತ್ ಅಭಿನಯದ ದೃಶ್ಯಗಳನ್ನು ಹೊಂದಿರುವ ಟ್ರೇಡ್‌ಮಾರ್ಕ್ ಹಾಡಿನಂತಿದೆ. ಸಲಾಮ್ ಸೋಲ್ಜರ್ ಹಾಡಿನ ಪ್ರಾರಂಭದಿಂದ ಅಂತ್ಯದವರೆಗೆ ಮೇಕಿಂಗ್ ಸಂದರ್ಭದ ದೃಶ್ಯಗಳು ಮತ್ತು ಹಾಡಿನ ನೈಜ ತುಣುಕುಗಳಿರುವ ಶಾಟ್‌ಗಳನ್ನು ಜೋಡಿಸಿ ವಿಡಿಯೋ ರಚಿಸಲಾಗಿದೆ. ವಿಶೇಷವಾಗಿ ಕಾಶ್ಮೀರದ ದೃಶ್ಯಾವಳಿಗಳಿವೆ.ಈ ವರ್ಷದ ಆರಂಭದಲ್ಲಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜೇಮ್ಸ್ ತಂಡ ಪುನೀತ್ ಅವರು ಸೇನಾಧಿಕಾರಿ ಉಡುಪಿನಲ್ಲಿರುವ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದರಿಂದ ಜೇಮ್ಸ್ ಸಿನೆಮಾದಲ್ಲಿ ಪವರ್ ಸ್ಟಾರ್ ಸೇನಾಧಿಕಾರಿ ಪಾತ್ರದಲ್ಲಿ ನಟಿಸಿರಬಹುದು ಎಂಬ ಮಾತುಗಳು ಹರಡಿದ್ದವು.ಈ ನಂತರದಲ್ಲಿ ಪುನೀತ್ ಅವರು ಸೇನಾಧಿಕಾರಿ ಉಡುಪಿನಲ್ಲಿರುವ ಹೆಚ್ಚಿನ ಚಿತ್ರಗಳುಬಿಡುಗಡೆಯಾದವು. ಇದು ಊಹೆಗಳಿಗೆ ಮತ್ತಷ್ಟೂ ಇಂಬು ನೀಡಿತು. ಚಿತ್ರದ ಟೀಸರ್ ಹೊರಬಂದಾಗ, ಅದು ವಿಭಿನ್ನ ಚಿತ್ರಣ ನೀಡಿತು. ಟೀಸರ್ ಪ್ರಕಾರ, ಪುನೀತ್ ಅವರು ಮಾಫಿಯಾವನ್ನು ಮಟ್ಟ ಹಾಕುವ ಜವಾಬ್ದಾರಿ ಹೊಂದಿರುವ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದರ ಬಗ್ಗೆ ಖಚಿತವಾಗಿ ತಿಳಿಯಲು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವವರೆಗೆ ಕಾಯಬೇಕು.ಜೇಮ್ಸ್, ಸಿನೆಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ. ಸೇರಿದಂತೆ ಐದು ಸಿನೆಮಾಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಪ್ರಿಯಾ ಆನಂದ್, ಶರತ್ ಕುಮಾರ್, ಮುಖೇಶ್ ರಿಷಿ, ತಿಲಕ್, ಆದಿತ್ಯ ಮೆನನ್, ಚಿಕ್ಕಣ್ಣ, ಶೈನ್ ಶೆಟ್ಟಿ, ಜಾನ್ ಕೊಕ್ಕೆನ್ ಸೇರಿದಂತೆ ಹಲವರು ನಟಿಸಿದ್ದಾರೆ.